ಐಸಿಸಿ ವಿಶ್ವಕಪ್‌ನಲ್ಲಿ ಇಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ವಿಶ್ವಕಪ್ ಕೂಟದಲ್ಲಿ ಇಂದು ನಡೆಯುತ್ತಿರುವ ಪಂದ್ಯ 12ನೇ ಪಂದ್ಯವಾಗಿದ್ದರೂ, ಉದ್ಘಾಟನಾ ಪಂದ್ಯದಂತೆ ಬಿಸಿಸಿಐ ತಯಾರಿ ನಡೆಸಿದೆ.
ಇಂದಿನ ಪಂದ್ಯ ಭಾರತೀಯ ಕಾಲಮಾನ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದ್ದು ಮಧ್ಯಾಹ್ನ 1:30ಕ್ಕೆ ಟಾಸ್ ನಡೆಯಲಿದೆ. ಇನ್ನು ಟಾಸ್‌ಗೂ ಒಂದು ಗಂಟೆಗಳ ಕಾಲ ಮುನ್ನ ಸಂಗೀತ ಕಾರ್ಯಕ್ರಮವಿರಲಿದ್ದು ಅರ್ಜಿತ್ ಸಿಂಗ್, ಶಂಕರ್ ಮಹದೇವನ್ ಸೇರಿದಂತೆ ಕೆಲ ಬಾಲಿವುಡ್‌ನ ಸ್ಟಾರ್ ಗಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದಕ್ಕೆ ಪೂರ್ವ ತಯಾರಿಯೂ ಕಳೆದ ಎರಡು ದಿನಗಳಿಂದ ನಡೆಯುತ್ತಿದೆ.
ಭಾರತ ಹಾಗೂ ಪಾಕಿಸ್ತಾನ ಎರಡು ತಂಡಗಳು ಕೂಡ ಈ ಬಾರಿಯ ವಿಶ್ವಕಪ್‌ನಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಅದ್ಭುತ ಗೆಲುವು ಸಾಧಿಸಿದ್ದು ಆತ್ಮವಿಶ್ವಾಸದಲ್ಲಿದೆ. ಭಾರತ ತಂಡ ಬಲಿಷ್ಠ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ ತಂಡಗಳನ್ನು ಮಣಿಸಿದ್ದರೆ ಪಾಕಿಸ್ತಾನ ನೆದರ್ಲೆಂಡ್ಸ್ ಹಾಗೂ ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಈ ಮೂರನೇ ಪಂದ್ಯಕ್ಕೆ ಸಿದ್ಧವಾಗಿದೆ.
They meet again at the @cricketworldcup! 🇮🇳🤝🇵🇰
Arch-rivals India and Pakistan are set for their #CWC23 face-off in Ahmedabad.
Tune in to watch ➡ https://t.co/ObsrEL7ZMT#INDvPAK #CWC23 pic.twitter.com/sQeWh92oYp
— ICC (@ICC) October 13, 2023
ಕಳೆದ 31 ವರ್ಷಗಳಲ್ಲಿ ನಡೆದ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಭಾರತದ ವಿರುದ್ಧ ಈವರೆಗೆ ಒಂದೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಏಳು ಬಾರಿ ಮುಖಾಮುಖಿಯಾದಾಗಲೂ ಭಾರತವೇ ಗೆದ್ದುಕೊಂಡಿದೆ. ಹೀಗಾಗಿ ಈ ಬಾರಿಯ ಮುಖಾಮುಖಿಯಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಕಾದುನೋಡಬೇಕಿದೆ.
‘ಇಂತಹ ಪಂದ್ಯಗಳು ಯಾವತ್ತೂ ತುಂಬಾ ವಿಶೇಷ’ ಎಂದ ಕಿಂಗ್ ಕೊಹ್ಲಿ
ಭಾರತ-ಪಾಕ್ ನಡುವಿನ ಪಂದ್ಯಕ್ಕೂ ಮುನ್ನ ಐಸಿಸಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಪಂದ್ಯದ ಕುರಿತು ಟೀಮ್ ಇಂಡಿಯಾ ಆಟಗಾರರಾದ ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
View this post on Instagram
‘ಇಂತಹ ಪಂದ್ಯಗಳು ಯಾವತ್ತೂ ತುಂಬಾ ವಿಶೇಷವೆನಿಸುತ್ತದೆ. ಮೆಲ್ಬರ್ನ್‌ನ (ಕಳೆದ ಬಾರಿದ ವಿಶ್ವಕಪ್ ಪಂದ್ಯವನ್ನು ಉಲ್ಲೇಖ ಮಾಡುತ್ತಾ) ಹೋಟೆಲ್, ಸ್ಟೇಡಿಯಂ ಹೊರಗಡೆ ಅಭಿಮಾನಿಗಳ ಸದ್ದು ನಿಜಕ್ಕೂ ಅದ್ಭುತವಾಗಿದೆ. ಕ್ರೀಡಾಂಗಣದಲ್ಲೂ ಆ ಶಕ್ತಿಯು ಭಾಸವಾಗುತ್ತಿದೆ’ ಎಂದು ವಿಡಿಯೋದಲ್ಲ ಕ್ರೀಡಾಭಿಮಾನಿಗಳ ಫೇವರೀಟ್ ಆಗಿರುವ ವಿರಾಟ್ ಕೊಹ್ಲಿ ತಿಳಿಸಿದ್ದಾರೆ.
The blue dominance outside Narendra Modi Stadium. pic.twitter.com/CW3TJHXdo4
— Mufaddal Vohra (@mufaddal_vohra) October 14, 2023
ಅಹ್ಮದಾಬಾದ್‌ನಲ್ಲಿ ಜನಸಾಗರ
ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್ ಕದನ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಎಲ್ಲಿ ನೋಡಿದರೂ ಟೀಂ ಇಂಡಿಯಾ ಟೀ-ಶರ್ಟ್‌ಗಳನ್ನು ಧರಿಸಿರುವ ಕ್ರಿಕೆಟ್ ಅಭಿಮಾನಿಗಳೇ ಕಾಣುತ್ತಿದ್ದು, ಅಹಮದಾಬಾದ್ ಸಂಪೂರ್ಣ ನೀಲಿಮಯವಾಗಿದೆ.
ದೇಶದ ಹಲವು ಕಡೆಗಳಲ್ಲಿ ಟೀಂ ಇಂಡಿಯಾ ಗೆಲುವಿಗೆ ಕ್ರಿಕೆಟ್ ಅಭಿಮಾನಿಗಳು ಹೋಮ-ಹವನ ನಡೆಸುತ್ತಿದ್ದಾರೆ. ವಿಶ್ವಕಪ್ ಭಾರತ ತಂಡದ ಎಲ್ಲ ಆಟಗಾರರ ಭಾವಚಿತ್ರಗಳನ್ನು ಇಟ್ಟು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
#WATCH | Patna, Bihar: Cricket fans perform havan ahead of the India Vs Pakistan World Cup match today pic.twitter.com/c2UGI4nEbW
— ANI (@ANI) October 14, 2023
ಬೆಳಗ್ಗೆಯಿಂದಲೇ ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದ ಹೊರಗೆ ಅಭಿಮಾನಿಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ.
‘ಪಂದ್ಯ ವೀಕ್ಷಿಸಲು ನಾವೆಲ್ಲರೂ ಉತ್ಸುಕರಾಗಿದ್ದೇವೆ. ರೋಹಿತ್ ಮತ್ತು ವಿರಾಟ್ ಇಂದು ಉತ್ತಮ ಪ್ರದರ್ಶನ ನೀಡುತ್ತಾರೆ’ ಎಂದು ಭಾವಿಸುವುದಾಗಿ ಅಭಿಮಾನಿಗಳು ನೆರೆದಿರುವ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
Plenty of fanfare as people gather on the Pakistan team’s route to the stadium 👋🏟️#INDvPAK | #DattKePakistani | #WeHaveWeWill pic.twitter.com/FhY9W1xZWp
— Pakistan Cricket (@TheRealPCB) October 14, 2023