ಐಪಿಎಲ್ ಟೂರ್ನಿಯಲ್ಲಿ ಶುಕ್ರವಾರ ಸಂಜೆ ನಡೆದ 42ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ನೀಡಿದ್ದ ಬೃಹತ್ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾದ ಪಂಜಾಬ್ ಕಿಂಗ್ಸ್ ತಂಡ, ಐಪಿಎಲ್ ಹಾಗೂ T20 ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ತಂಡಕ್ಕೆ, ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಕೆಕೆಆರ್ ತಂಡವು, 6 ವಿಕೆಟ್‌ಗಳನ್ನು ಕಳೆದುಕೊಂಡು 262 ರನ್‌ಗಳ ಬೃಹತ್ ಗುರಿ ನೀಡಿತ್ತು.ಈ ಗುರಿಯನ್ನು 18.4 ಓವರ್‌ಗಳಲ್ಲಿ ತಲುಪಿದ ಪಂಜಾಬ್ ಇನ್ನೂ 8 ಎಸೆತಗಳು ಬಾಕಿ ಇರುವಾಗಲೇ ಜಯ ದಾಖಲಿಸಿತು. ಆ ಮೂಲಕ ಹೊಸ ಇತಿಹಾಸ ಸೃಷ್ಟಿಸಿತು.
THE HISTORIC MOMENT IN T20 CRICKET…!!! 🤯
– 262 chased down in just 18.4 overs. Shashank, Bairstow and Prabhsimran are the heroes. 🫡pic.twitter.com/yyGRqn33xS
— Mufaddal Vohra (@mufaddal_vohra) April 26, 2024
ಪಂಜಾಬ್ ತಂಡದ ಜಾನಿ ಬೈರ್ಸ್ಟೋ ಮತ್ತು ಶಶಾಂಕ್ ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ನಡೆಸುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್ಗಳ ಗೆಲುವಿನ ಕೇಕೆ ಹಾಕಿದ್ದು, 262 ರನ್‌ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಲು ಇನ್ನೂ 8 ಎಸೆತಗಳನ್ನು ಬಾಕಿ ಉಳಿಸಿದರು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಯ ರನ್ ಚೇಸ್ ಆಗಿದೆ. ಜಾನಿ ಬೈರ್ಸ್ಟೋ (108*), ಶಶಾಂಕ್ ಸಿಂಗ್ (68*) ಬಿರುಸಿನ ಆಟಕ್ಕೆ ಕೆಕೆಆರ್ ಬೌಲರ್ಗಳು ಕಕ್ಕಾಬಿಕ್ಕಿಯಾದರು.
ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ ಬೃಹತ್ ಟಾರ್ಗೆಟ್ ಅನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಪರ ಪ್ರಭಾಸಿಮ್ರಾನ್ ಸಿಂಗ್ ಮತ್ತು ಜಾನಿ ಬೈರ್‌ಸ್ಟೋವ್ ಇನ್ನಿಂಗ್ಸ್ ಶುರು ಮಾಡಿದರು. ಕೆಕೆಆರ್ ಆರಂಭಿಕರಂತೆ ಅಬ್ಬರದ ಬ್ಯಾಟಿಂಗ್ ಮಾಡಿದ ಪ್ರಭಾಸಿಮ್ರಾನ್ ಸಿಂಗ್ ಮತ್ತು ಜಾನಿ ಬೈರ್‌ಸ್ಟೋವ್ ಪವರ್ ಪ್ಲೇ ನಲ್ಲಿ 93 ರನ್ ಗಳಿಸಿದರು.
– 524 runs.
– 42 sixes.
– 18, 23, 23, 23, 25 ball fifties.
– 45 ball century.
– Highest team total in a chase.
– Highest successful T20 chase.
– Most sixes in an IPL Innings.
– Most sixes in an IPL match.PUNJAB KINGS ARE PART OF THE HISTORY CREATED IN KOLKATA. 🤯 pic.twitter.com/xgWnuXgqRK
— Mufaddal Vohra (@mufaddal_vohra) April 26, 2024
ಬಿರುಸಿನ ಬ್ಯಾಟಿಂಗ್ ಮಾಡಿದ ಪ್ರಭಾಸಿಮ್ರಾನ್ ಸಿಂಗ್ ಕೇವಲ 20 ಎಸೆತಗಳಲ್ಲಿ 5 ಸಿಕ್ಸರ್ ಹಾಗು 4 ಬೌಂಡರಿ ಸಹಾಯದಿಂದ 54 ರನ್ ಹೊಡೆದರು. ಆದರೆ ದುರದೃಷ್ಟಕರ ರನ್ ಔಟ್‌ಗೆ ಬಲಿಯಾದರು. ಜಾನಿ ಬೈರ್‌ಸ್ಟೋವ್ ಮಾತ್ರ ತನ್ನ ಆಕ್ರಮಣಕಾರಿ ಆಟವನ್ನು ನಿಲ್ಲಿಸಲಿಲ್ಲ. ಕೆಕೆಆರ್ ಬೌಲರ್ಸ್ ಮೇಲೆ ಜಾನಿ ಬೈರ್‌ಸ್ಟೋವ್ ಯಾವುದೇ ಕರುಣ ತೋರದೆ, ಭರ್ಜರಿ ಬ್ಯಾಟಿಂಗ್ ಮುಂದುವರಿಸಿದರು.
ಪ್ರಭಾಸಿಮ್ರಾನ್ ಸಿಂಗ್ ಔಟ್ ಆದ ಬಳಿಕ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಿಲೀ ರೊಸೊವ್ ಕೂಡ ಜಾನಿ ಬೈರ್‌ಸ್ಟೋವ್ ಜೊತೆಗೂಡಿದ ಉತ್ತಮ ಪ್ರದರ್ಶನ ನೀಡಿದರು. ಎರಡು ಸಿಕ್ಸರ್ ಹಾಗು ಒಂದು ಬೌಂಡರಿ ಹೊಡೆದು ಸುನಿಲ್ ನರೈನ್ ಬೌಲಿಂಗ್‌ನಲ್ಲಿ ರಿಲೀ ರೊಸೊವ್ (26) ವಿಕೆಟ್ ಕಳೆದುಕೊಂಡರು.
ಆದರೆ ಜಾನಿ ಬೈರ್‌ಸ್ಟೋವ್ ಮಾತ್ರ ಸಿಕ್ಸರ್, ಬೌಂಡರಿಗಳ ಸುರಿಮಳೆ ಗೈಯ್ಯವುದನ್ನು ಮುಂದುವರಿಸಿದರು. ಜಾನಿ ಬೈರ್‌ಸ್ಟೋವ್ ಎದುರಿಸಿದ 45 ಎಸೆತಗಳಲ್ಲಿ 8 ಬೌಂಡರಿ ಹಾಗು 9 ಸಿಕ್ಸರ್ ನೆರವಿನಿಂದ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದರು. ಜಾನಿ ಬೈರ್‌ಸ್ಟೋವ್ ಜೊತೆಗೆ ಶಶಾಂಕ್ ಸಿಂಗ್ ಕೂಡ ಮತ್ತೊಮ್ಮೆ ರೊಚ್ಚಿಗೆದ್ದು ಬ್ಯಾಟಿಂಗ್ ಮಾಡಿದರು.
ಕಳೆದ ಮೂರು ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿರುವ ಶಶಾಂಕ್ ಸಿಂಗ್, ಪಂಜಾಬ್ ಫ್ರಾಂಚೈಸಿ ಇಟ್ಟಿದ್ದ ನಂಬಿಕೆ ಉಳಿಸಿಕೊಂಡು ಪಂದ್ಯ ಗೆಲ್ಲಿಸುವಲ್ಲಿ ಶ್ರಮವಹಿಸಿದರು.
ಶಶಾಂಕ್ ಸಿಂಗ್, ಕೇವಲ 28 ಎಸೆತಗಳಲ್ಲಿ ಅಬ್ಬರದ ಎಂಟು ಸಿಕ್ಸರ್ ಹಾಗು ಎರಡು ಬೌಂಡರಿ ಮೂಲಕ ಅಜೇಯ 68 ರನ್ ಹೊಡೆದು ಪಂಜಾಬ್‌ಗೆ ದಾಖಲೆಯ ಜಯ ತಂದು ಕೊಟ್ಟರು. ಇನ್ನೊಂದೆಡೆ ಜಾನಿ ಬೈರ್‌ಸ್ಟೋವ್ ಕೂಡ ಅಜೇಯ 108 ರನ್ ಗಳಿಸಿದರು.
ಕೆಕೆಆರ್ ಪರ ಸುನಿಲ್ ನರೈನ್ ಮಾತ್ರ ಒಂದು ವಿಕೆಟ್ ಪಡೆದುಕೊಂಡರು. ಉಳಿದ ಬೌಲರ್ಸ್ ಹೆಚ್ಚು ರನ್ ಬಿಟ್ಟು ಕೊಟ್ಟು ತಂಡದ ಸೋಲಿಗೆ ಕಾರಣವಾದರು.
ಟಿ20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಇದು
THE HIGHEST SUCCESSFUL CHASE IN T20 HISTORY 🤯#KKRvPBKS #IPL2024 pic.twitter.com/jZYw9pcEQB
— ESPNcricinfo (@ESPNcricinfo) April 26, 2024
ಟಿ20 ಕ್ರಿಕೆಟ್ ನಲ್ಲಿ ಪಂಜಾಬ್ ಕಿಂಗ್ಸ್ ಹೊಸ ಇತಿಹಾಸ ನಿರ್ಮಿಸಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ನಿರ್ಮಿಸಿದ್ದ ದಾಖಲೆಯನ್ನು ಪುಡಿಗಟ್ಟಿದೆ.
2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ 259 ರನ್‌ಗಳ ಚೇಸ್ ಮಾಡಿತ್ತು. ಇದೀಗ 262 ರನ್‌ಗಳ ಗುರಿ ಬೆನ್ನಟ್ಟಿ ಹೊಸ ಚರಿತ್ರೆ ಸೃಷ್ಟಿಸಿದೆ. ಐಪಿಎಲ್ನಲ್ಲಿ ಆರ್‌ಸಿಬಿ ದಾಖಲೆಯನ್ನು ಸರಿಗಟ್ಟಿದೆ. ಚೇಸಿಂಗ್ನಲ್ಲಿ ಅತ್ಯಧಿಕ ಮೊತ್ತ ಕಲೆ ಹಾಕಿದ ಎರಡನೇ ತಂಡ ಎನಿಸಿದೆ. ಆರ್‌ಸಿಬಿ ಚೇಸಿಂಗ್ನಲ್ಲಿ 262 ರನ್ ಪೇರಿಸಿತ್ತು.
