ವಿಶ್ವದ ಕ್ರಿಕೆಟ್ ಆಸಕ್ತರ ನೆಚ್ಚಿನ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್‌ನಲ್ಲಿ ಅಭಿಮಾನಿಗಳ ಫೇವರೀಟ್ ತಂಡ ಆರ್‌ಸಿಬಿ. ಕಳೆದ 16 ವರ್ಷಗಳಿಂದ ನಡೆಯುತ್ತಿರುವ ಈ ಲೀಗ್‌ನಲ್ಲಿ ಈವರೆಗೆ ಆರ್‌ಸಿಬಿ ಚಾಂಪಿಯನ್ ಆಗಿಲ್ಲ. ಪ್ರತಿಬಾರಿಯೂ ಈ ಸಲ ಕಪ್ ನಮ್ದೇ ಅನ್ನುವುದು ಟ್ರೆಂಡ್ ಆಗುತ್ತಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ಪುರುಷರ ತಂಡ ಈವರೆಗೆ ಪೂರೈಸಲಾಗದ ಅಭಿಮಾನಿಗಳ ಆಸೆಯನ್ನು ಮಹಿಳಾ ತಂಡ ಎರಡನೇ ವರ್ಷದಲ್ಲೇ ಪೂರೈಸಿದೆ. ಅಭಿಮಾನಿಗಳ ಮನ ಗೆಲ್ಲುವಲ್ಲಿ ಕೊನೆಗೂ ಸಫಲವಾಗಿದೆ. ಹೌದು. ಈ ಸಲ ಕಪ್ ನಮ್ದಾಗಿದೆ.
Ee Sala Cup N̶a̶m̶d̶e̶ Namdu! 🏆🥹#PlayBold #ನಮ್ಮRCB #SheIsBold #WPL2024 #WPLFinal #DCvRCB pic.twitter.com/jkubj1MRy6
— Royal Challengers Bangalore (@RCBTweets) March 17, 2024
ಇಂದು ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್(WPL 2024) ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಸ್ಮೃತಿ ಮಂದಾನ ನೇತೃತ್ವದ ಆರ್‌ಸಿಬಿ ತಂಡವು, ಡೆಲ್ಲಿ ತಂಡವನ್ನು ಸೋಲಿಸುವ ಮೂಲಕ ಚೊಚ್ಚಲ ಬಾರಿಗೆ ಚಾಂಪಿಯನ್ ಆಗಿದೆ.
Richa Ghosh marks a new era for RCB as the Queens of #TATAWPL👸👑#DCvRCB #TATAWPLonSports18 #TATAWPLonJioCinema #JioCinemaSports #CheerTheW pic.twitter.com/gfOWU6y1pQ
— JioCinema (@JioCinema) March 17, 2024
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ, ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆರ್‌ಸಿಬಿ ಆರಂಭದಲ್ಲಿ ಬೌಲಿಂಗ್‌ನಲ್ಲಿ ವಿಫಲವಾಯಿತಾದರೂ, ಎಂಟನೇ ಓವರ್ ಎಸೆದ ಆರ್‌ಸಿಬಿ ಬೌಲರ್ ಸೋಫಿ ಮೋಲಿನೆಕ್ಸ್, 4 ಎಸೆತಗಳಲ್ಲಿ ಮೂರು ವಿಕೆಟ್ ಕಿತ್ತ ಬಳಿಕ ಡೆಲ್ಲಿ 113 ರನ್‌ಗಳಿಗೆ ಆಲೌಟ್ ಆಗಿತ್ತು. 64 ರನ್ ವೇಳೆ ಶೂನ್ಯ ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ ತಂಡ, 18.3 ಓವರ್‌ಗಳಲ್ಲಿ ಆಲೌಟ್ ಆಗಿತ್ತು.
The pain of 2009, 2011 twice and 2016 have turned into a happiness of 2024.
– The ladies have done it for RCB. 🫡 pic.twitter.com/EX6R2nRNuK
— Mufaddal Vohra (@mufaddal_vohra) March 17, 2024
ಈ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ, ಕೇವಲ ಎರಡು ವಿಕೆಟ್ ಕಳೆದುಕೊಂಡು 19.3 ಓವರ್‌ಗಳಲ್ಲಿ ಗುರಿ ಮುಟ್ಟಿತು. ಮೊದಲ ಬಾರಿಗೆ ಫೈನಲ್ ಪ್ರವೇಶಿಸಿ, ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿದೆ.
ಆರ್‌ಸಿಬಿ ಪರವಾಗಿ ಬ್ಯಾಟಿಂಗ್‌ನಲ್ಲಿ ನಾಯಕಿ ಸ್ಮೃತಿ ಮಂದಾನ 39 ಎಸೆತಗಳಲ್ಲಿ 31 ರನ್ ಗಳಿಸಿ, ಮಿನ್ನು ಮನಿ ಬೌಲಿಂಗ್‌ನಲ್ಲಿ ಕ್ಯಾಚಿತ್ತು ಔಟಾದರು. ಸೋಫಿ ಡಿವೈನ್ 27 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಭರ್ಜರಿ ಸಿಕ್ಸ್‌ನ ನೆರವಿನಿಂದ 32 ರನ್ ಗಳಿಸಿ, ಶಿಖಾ ಪಾಂಡೆ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.
ಇದನ್ನು ಓದಿದ್ದೀರಾ? ಗುಜರಾತ್ | ಹಾಸ್ಟೆಲ್‌ನಲ್ಲಿ ನಮಾಝ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಹಲ್ಲೆ; ನೋಡುತ್ತಾ ನಿಂತ ಪೊಲೀಸರು!
ಕೊನೆಯಲ್ಲಿ ಎಲಿಸಾ ಪೆರ್ರಿ 35 ಎಸೆತಗಳಲ್ಲಿ 37 ರನ್ ಗಳಿಸಿದರೆ, ರಿಚಾ ಘೋಷ್ 14 ಎಸೆತಗಳಲ್ಲಿ 17 ರನ್ ಗಳಿಸಿ, ಔಟಾಗದೆ ಉಳಿದರು. ಚಾಂಪಿಯನ್ ಆಗುವ ಮೂಲಕ ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳ ಕನಸು ನನಸು ಮಾಡಿದರು. ಆ ಮೂಲಕ ಮಹಿಳಾ ತಂಡವು ಆರ್‌ಸಿಬಿಗೆ ಪ್ರಶಸ್ತಿಯ ಬರ ನೀಗಿಸಿದೆ. ಡೆಲ್ಲಿ ತಂಡ ಎರಡು ಬಾರಿ ಫೈನಲ್ ಪ್ರವೇಶಿಸಿದರೂ ಕೂಡ, ಚಾಂಪಿಯನ್ ಆಗುವಲ್ಲಿ ವಿಫಲವಾಗಿದೆ. 2023ರಲ್ಲಿ ನಡೆದಿದ್ದ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ ತಂಡವನ್ನು ಸೋಲಿಸಿ, ಚಾಂಪಿಯನ್ ಆಗಿತ್ತು.
𝙏𝙝𝙖𝙩 𝙎𝙥𝙚𝙘𝙞𝙖𝙡 𝙈𝙤𝙢𝙚𝙣𝙩! 👏 👏
That’s how the Royal Challengers Bangalore sealed a memorable win to emerge the #TATAWPL 2024 Champions! 🏆
Scorecard ▶️https://t.co/g011cfzcFp#DCvRCB | #Final | @RCBTweets pic.twitter.com/ghlo7YVvwW
— Women’s Premier League (WPL) (@wplt20) March 17, 2024
ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಆರ್‌ಸಿಬಿ
ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ನೇರವಾಗಿ ಫೈನಲ್ ಪ್ರವೇಶಿಸಿತ್ತು. ಇತ್ತ ಎಲಿಮಿನೇಟರ್ ಪಂಡ್ಯ ಆಡಿದ್ದ ಬೆಂಗಳೂರು ತಂಡ ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿ, ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತ್ತು.
ಮಾ.22ರಿಂದ ಪುರುಷರ ಐಪಿಎಲ್ ಪಂದ್ಯಾವಳಿ ಆರಂಭವಾಗಲಿದ್ದು, ಆರ್‌ಸಿಬಿ ತಂಡವು ಚೆನ್ನೈ ತಂಡವನ್ನು ಎದುರಿಸಲಿದೆ.
