18 ರನ್ ಗಳಿಸಿ ಔಟ್ ಆದ ಟ್ರೆವಿಸ್ ಹೆಡ್
ಕುತೂಹಲ ಹೆಚ್ಚಿಸಿದ ನಾಲ್ಕನೇ ದಿನದಾಟ
ಇಂಗ್ಲೆಂಡ್‌ನ ಓವಲ್‌ನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟೆಸ್ಟ್ ವಿಶ್ವ ಚಾಂಪಿಯನ್‌ಷಿಪ್ ಟೂರ್ನಿಯ ಫೈನಲ್ ಪಂದ್ಯದ ಮೂರನೇ ದಿನದಾಟದ ಅಂತ್ಯಗೊಂಡಿದೆ. ನಾಲ್ಕನೇ ದಿನದಾಟದ ಕುರಿತು ಕ್ರಿಕೆಟ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.
ಮೂರನೇ ದಿನದ ಆಟದಲ್ಲಿ ಟೀಂ ಇಂಡಿಯಾ ಆಟಗಾರರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಆದರೆ, ಆಸಿಸ್ ಆಟಗಾರರು ಕೂಡ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ದಿನದ ಅಂತ್ಯಕ್ಕೆ 296ರನ್‌ಗಳನ್ನು ಮುನ್ನಡೆಯನ್ನು ಸಾಧಿಸಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಟ್ರೆವಿಸ್ ಹೆಡ್ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 18ರನ್ ಗಳಿಸಿ ಔಟ್ ಆದರು. ಸದ್ಯ ಮಾರ್ನಸ್ ಲ್ಯಾಬುನೇಶ್ 41 ರನ್ ಮತ್ತು ಕ್ಯಾಮರೂನ್ ಗ್ರೀನ್ 7ರನ್ ಗಳಿಸಿದ್ದಾರೆ. ನಾಲ್ಕನೇ ದಿನಕ್ಕೆ ಇವರಿಬ್ಬರ ಜೊತೆಯಾಟವನ್ನು ಕಟ್ಟಿಹಾಕುವ ಲೆಕ್ಕಾಚಾರದಲ್ಲಿ ಟೀಂ ಇಂಡಿಯಾ ಬೌಲರ್‌ಗಳಿದ್ದಾರೆ.