ಬೆಂಗಳೂರಿನ ಈ ಪ್ರದೇಶದಲ್ಲಿ ವಾರಕ್ಕೆ 2 ಗಂಟೆ ಮಾತ್ರ ನೀರು; ಹೇಳೋರಿಲ್ಲ-ಕೇಳೋರಿಲ್ಲ

Date:

Advertisements

ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಚಿಕ್ಕ ಬಾಣಸವಾಡಿಯ ಕೊಳಗೇರಿ ಪ್ರದೇಶಗಳಲ್ಲಿ ಈ ಹಿಂದೆ ಪ್ರತಿದಿನ 24 ಗಂಟೆಗಳ ಕಾಲ ನಿರಂತರ ನೀರು ಪೂರೈಕೆಯಾಗುತ್ತಿತ್ತು. ಆದರೆ, ಈಗ ವಾರಕ್ಕೆ ಕೇವಲ ಎರಡು ಗಂಟೆ ನೀರು ಸಿಗುತ್ತಿದೆ. ಅಲ್ಲಿನ ನಿವಾಸಿಗಳಿಗೆ ನೀರು ಖರೀದಿಸುವ ಅನಿವಾರ್ಯತೆ ಎದುರಾಗಿದೆ. ಅವರು ದುಡಿಯುವ ಅರ್ಧದಷ್ಟು ಹಣವನ್ನು ಪ್ರತಿದಿನ ನೀರು ಖರೀದಿಸಲು ಖರ್ಚು ಮಾಡುವಂತಾಗಿದೆ.

ಲೋಕಸಭೆ ಚುನಾವಣೆ ಹಿನ್ನೆಲೆ, ಯಾರಾದರೂ ನಾಯಕರು ಬಂದು ನಮ್ಮ ನೀರಿನ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವು. ಆದರೆ, ನಮ್ಮ ಮತದಾನದ ಹಕ್ಕು ಬೇರೆ ಪ್ರದೇಶದಲ್ಲಿ ಇರುವುದರಿಂದ, ನಮ್ಮನ್ನು ಇಲ್ಲಿ ಆದ್ಯತೆಯ ನಾಗರಿಕರೆಂದು ಪರಿಗಣಿಸಲಾಗುತ್ತಿಲ್ಲಎಂದು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರೊಬ್ಬರು ಹೇಳಿದರು.

ಆರಂಭದಲ್ಲಿ ಕೆಲವು ಮಕ್ಕಳು ಶಾಲೆಗಳಿಗೆ ಹೋಗುತ್ತಿದ್ದರು. ಆದರೆ, ಈಗ ನಾವು ನಮ್ಮ ದೈನಂದಿನ ಕೆಲಸಗಳಲ್ಲಿ ನಮಗೆ ಸಹಾಯ ಮಾಡಲು, ನೀರನ್ನು ತರುವ ಕೆಲಸ ಮಾಡುತ್ತಿದ್ದಾರೆ. ನೀರಿನ ಗುಣಮಟ್ಟವನ್ನು ಲೆಕ್ಕಿಸದೆ ಕಡಿಮೆ ದುಡ್ಡಿಗೆ ನೀರು ಮಾರಾಟ ಮಾಡುವವರಿಂದ ನಾವು ನೀರನ್ನು ಖರೀದಿಸುತ್ತೇವೆಎಂದರು.

Advertisements

ದಿನಗಳಲ್ಲಿ ನನ್ನ ಆಟೋ ವಾಶ್ ವ್ಯಾಪಾರವು ಯಾವುದೇ ಆದಾಯವನ್ನು ಗಳಿಸುತ್ತಿಲ್ಲ. ಹಾಗಾಗಿ, ನನ್ನ ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸಲು ನನಗೆ ಸಾಧ್ಯವಾಗುತ್ತಿಲ್ಲಎಂದು ಅವರು ಹೇಳಿದರು.

ಸುಮಾರು 40-50 ಜನರು ವಾಸಿಸುವ ಡಿಜೆ ಹಳ್ಳಿಯಲ್ಲಿ ವಾರಕ್ಕೆ ಎರಡು ಗಂಟೆ ನೀರು ಸಿಗುತ್ತದೆ. ಒಂದು ಗಂಟೆ ಕುಡಿಯುವ ನೀರಿಗಾಗಿ ಮೀಸಲಿಟ್ಟರೆ, ಇನ್ನೊಂದು ಗಂಟೆ ಪ್ರತ್ಯೇಕ ದಿನಗಳಲ್ಲಿ ಶುದ್ಧೀಕರಿಸಿದ ನೀರಿಗಾಗಿ ಮೀಸಲಿಡಲಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿ ರೇಷ್ಮಾ.

ನಾವು ನೆಲೆಸಿರುವ ಪ್ರದೇಶ ತುಂಬಾ ಕಿರಿದಾಗಿದೆ. ಹಾಗಾಗಿ, ನೀರಿನ ಟ್ಯಾಂಕರ್ಗಳನ್ನು ಒಳಗೆ ಬರಲು ಸಾಧ್ಯವಿಲ್ಲ. ಹೆಚ್ಚಿನ ಹಣವನ್ನು ನೀರು ಖರೀದಿ ಮಾಡಲು ಸಾಧ್ಯವಿಲ್ಲಎಂದು ಅವರು ಹೇಳಿದರು.

ಪ್ರದೇಶದಲ್ಲಿ ಬಹುತೇಕ ಮಂದಿ ಮಾಂಸದ ಅಂಗಡಿಗಳು, ಪೀಠೋಪಕರಣಗಳ ಅಂಗಡಿ ಹಾಗೂ ಬಣ್ಣದ ಹೊಡೆಯುವ ಕಾರ್ಮಿಕರು ನೆಲೆಸಿದ್ದಾರೆ. ವಲಸೆ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ದೈನಂದಿನ ಆದಾಯವನ್ನು ಅವಲಂಬಿಸಿದ್ದಾರೆ. ಆಗಾಗ ನೀರು ಪೂರೈಕೆಯಲ್ಲಿ ಆಗುತ್ತಿರುವ ವಿಳಂಬದಿಂದ ನಿತ್ಯದ ದಿನಚರಿಗೆ ತೊಂದರೆಯಾಗುತ್ತಿದ್ದು, ಆದಾಯದ ಮೇಲೆ ನೇರ ಪರಿಣಾಮ ಬೀರುತ್ತಿದೆಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮುಂಗಾರು ಮಳೆ ನಿರ್ವಹಣೆಗೆ ಸಜ್ಜಾಗುತ್ತಿರುವ ಪಾಲಿಕೆ; ಚರಂಡಿ ಸ್ವಚ್ಛತಾ ಕಾರ್ಯದಲ್ಲಿ ನಿರತ

ಚಿಕ್ಕ ಬಾಣಸವಾಡಿಯ ನಿವಾಸಿ ರಮೇಶ್, “ನಮ್ಮ ಮನೆಗೆ ದಿನಕ್ಕೆ ಸುಮಾರು 20 ಬಿಂದಿಗೆ ನೀರು ಬೇಕಾಗುತ್ತದೆ. ಇದಕ್ಕೆ ಸಾಕಷ್ಟು ಹಣ ಖರ್ಚು ಮಾಡಬೇಕಾಗಿದೆ. ಸಮೀಪದ ಸಾರ್ವಜನಿಕ ಬೋರ್ವೆಲ್ ಕೂಡ ಬತ್ತಿ ಹೋಗಿದೆ. ಪರ್ಯಾಯ ವ್ಯವಸ್ಥೇ ಇಲ್ಲದ ಕಾರಣ ಕಳಪೆ ಗುಣಮಟ್ಟದ ನೀರು ಸಿಕ್ಕರೂ ಅದನ್ನು ಬಳಕೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನೀರಿನ ಕೊರತೆಯ ಸಮಸ್ಯೆಯನ್ನು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರ ಗಮನಕ್ಕೆ ತಂದಾಗ, ಅವರು ಸಮಸ್ಯೆಯನ್ನು ತಳ್ಳಿಹಾಕಿದರು. ಈ ಕೊಳಗೇರಿ ಪ್ರದೇಶಗಳಿಂದ ಯಾವುದೇ ದೂರುಗಳು ಬಂದಿಲ್ಲ ಎಂದು ಹೇಳಿದರು.

ನೀರಿನ ಕೊರತೆ ಇರುವ ಪ್ರದೇಶಗಳನ್ನು ಗುರುತಿಸಲು ತಪಾಸಣೆ ಹಾಗೂ ಆಗಾಗ ಸಭೆಗಳನ್ನು ನಡೆಸಲಾಗುತ್ತಿದೆಎಂದು ಹೇಳಿದರು.

ಮೂಲ : ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X