ಬೆಂಗಳೂರು | ವರ್ಷದಿಂದ ವರ್ಷಕ್ಕೆ 23.7% ಬಾಡಿಗೆ ಏರಿಕೆ : ದೇಶದಲ್ಲಿ ಮೂರನೇ ಸ್ಥಾನ

Date:

Advertisements

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಬಾಡಿಗೆ ಮನೆ ಸಿಗುವುದೇ ಕಷ್ಟಕರವಾಗಿದೆ. ಸಿಕ್ಕರೂ ದುಪ್ಪಟ್ಟು ದರವಿರುತ್ತೆ. ರಿಯಲ್ ಎಸ್ಟೇಟ್ ಪ್ಲಾಟ್‌ಫಾರ್ಮ್ ಮ್ಯಾಜಿಕ್‌ಬ್ರಿಕ್ಸ್ ಬಿಡುಗಡೆ ಮಾಡಿರುವ ಬಾಡಿಗೆ ಅಪ್‌ಡೇಟ್ (ಜನವರಿ-ಮಾರ್ಚ್ 2024) ವರದಿಯ ಪ್ರಕಾರ, ನಗರದಲ್ಲಿ ವರ್ಷದಿಂದ ವರ್ಷಕ್ಕೆ 23.7% ಬಾಡಿಗೆ ಏರಿಕೆಯನ್ನು ಕಂಡಿದೆ ಎಂದು ಹೇಳಿದೆ.

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಬಾಡಿಗೆ ದರಗಳು ಮುಗಿಲು ಮುಟ್ಟಿವೆ. ಕೋರಮಂಗಲ, ಸರ್ಜಾಪುರ ರಸ್ತೆ ಮತ್ತು ಮಾರತಹಳ್ಳಿಯಂತಹ ಏರಿಯಾಗಳಲ್ಲಿ ಬಾಡಿಗೆ ದರಗಳು ಬೆಂಗಳೂರಿನ ಎಲ್ಲ ದರಗಳಿಗಿಂತ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

ಮ್ಯಾಜಿಕ್‌ಬ್ರಿಕ್ಸ್‌ನ ವರದಿಯ ಪ್ರಕಾರ, 13 ಪ್ರಮುಖ ಭಾರತೀಯ ನಗರಗಳಲ್ಲಿನ ಬಾಡಿಗೆ ಬೆಲೆಗಳು ಮಾರ್ಚ್ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 16% ರಷ್ಟು ಏರಿಕೆಯಾಗಿದೆ. ಹಲವಾರು ಟೆಕ್ಕಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಗ್ರೇಟರ್ ನೋಯ್ಡಾ ಉದಯೋನ್ಮುಖ ನೆಲೆಯಾಗಿದೆ, ಬಾಡಿಗೆಗಳು 32.1% ರಷ್ಟು ಹೆಚ್ಚಿದ್ದರೆ, ಗುರುಗ್ರಾಮ್ ಮತ್ತು ಬೆಂಗಳೂರಿನಲ್ಲಿ ಕ್ರಮವಾಗಿ 24.5% ಮತ್ತು 23.7% ರಷ್ಟು ಏರಿಕೆ ಕಂಡುಬಂದಿದೆ. ಅಕ್ಟೋಬರ್ ಮತ್ತು ಡಿಸೆಂಬರ್ 2023ರ ನಡುವೆ 1.6% ಹೆಚ್ಚಳದ ನಂತರ ಜನವರಿ-ಮಾರ್ಚ್ ಅವಧಿಯಲ್ಲಿ ಬಾಡಿಗೆಗಳು 2.8% ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

Advertisements

ಎರಡು ಕೋಟಿಗೂ ಹೆಚ್ಚು ಗ್ರಾಹಕರ ಆದ್ಯತೆಯ ಆಧಾರದ ಮೇಲೆ ತಿಂಗಳಿಗೆ ₹10,000 ರಿಂದ ₹30,000 ವರೆಗಿನ ಬಾಡಿಗೆ ವಸತಿಗಳಿಗೆ ಹೆಚ್ಚು ಬೇಡಿಕೆಯಿದೆ. ಒಟ್ಟು ಬೇಡಿಕೆಯ 42% ರಷ್ಟಿದೆ ಎಂದಿದೆ. ಈ ಅವಧಿಯಲ್ಲಿ ಬಾಡಿಗೆ ಬೇಡಿಕೆಯು ಗಮನಾರ್ಹವಾದ ಶೇ.16ರಷ್ಟು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೆಚ್ಚಳವಾಗಿದೆ.

ಚೆನ್ನೈನಲ್ಲಿ ಬಾಡಿಗೆ ಬೇಡಿಕೆಯು ಮಾರ್ಚ್ ತ್ರೈಮಾಸಿಕದಲ್ಲಿ ಸುಮಾರು 25% ಹೆಚ್ಚಾದರೆ, ನವಿ ಮುಂಬೈ ಮತ್ತು ನೋಯ್ಡಾದಲ್ಲಿ ಕ್ರಮವಾಗಿ 20.1% ಮತ್ತು 19.2% ರಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ. ವರ್ಷದಿಂದ ವರ್ಷಕ್ಕೆ ಬಾಡಿಗೆ ಬೇಡಿಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಬಾಡಿಗೆ ದರವನ್ನು ಶೇ.8 ರಷ್ಟು ಹೆಚ್ಚಳ ಮಾಡಲಾಗಿದೆ. ಹೈ-ಫೈ ಏರಿಯಾಗಳಲ್ಲಿ ಬಾಡಿಗೆ ದರವನ್ನು ಸಾಮಾನ್ಯ ಜನರು ಕೇಳದಂತಾಗಿದೆ. ಕೋವಿಡ್ ಅವಧಿಯಲ್ಲಿ 2022ರ ಅಂತ್ಯದ ವೇಳೆ ವೈಟ್‌ಫೀಲ್ಡ್‌ನಲ್ಲಿ 2 ಬಿಎಚ್‌ಕೆ ಮನೆ ದರ ₹22,500 ಇತ್ತು. ಇನ್ನು ಸರ್ಜಾಪುರ ರಸ್ತೆಯಲ್ಲಿ ₹24,000 ಇತ್ತು. 2023ರ ಅಂತ್ಯದ ವೇಳೆಗೆ ವೈಟ್‌ಫೀಲ್ಡ್‌ನಲ್ಲಿ ₹30,200 ಮತ್ತು ಸರ್ಜಾಪುರ ರಸ್ತೆಯಲ್ಲಿ ₹31,600 ಗಮನಾರ್ಹವಾಗಿ ಏರಿಕೆ ಕಂಡಿದೆ.

“2020ರ ಮೊದಲು, ಭಾರತದಲ್ಲಿ ವಸತಿ ಬಾಡಿಗೆ ಸರಾಸರಿ ಶೇ.3 ರಷ್ಟು ಹೆಚ್ಚಳವಾಗಿತ್ತು. 2022ರ ನಂತರ ಕೊರೊನಾ ಸೋಂಕು ಇಳಿಕೆಯ ನಂತರ ಕಚೇರಿಗಳ ಪುನಾರಂಭವಾದವು. ಈ ವೇಳೆ, ಬಾಡಿಗೆ ಬೇಡಿಕೆಯಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದೆ. ಇದರ ಪರಿಣಾಮವಾಗಿ ಬಾಡಿಗೆಗಳ ದರ ಹೆಚ್ಚಳವಾಗುತ್ತಿದೆ” ಎಂದು ಮ್ಯಾಜಿಕ್‌ಬ್ರಿಕ್ಸ್‌ನ ಸಂಶೋಧನಾ ಮುಖ್ಯಸ್ಥ ಅಭಿಷೇಕ್ ಭದ್ರ ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬುಧವಾರ ಸಂಜೆ ಸರಾಸರಿ 17.9 ಮಿ.ಮೀ ಮಳೆ

“ಬಾಡಿಗೆ ಮೇಲಿನ ಈ ಪ್ರವೃತ್ತಿಯು ಮುಂದಿನ ಕೆಲವು ತಿಂಗಳು ಮುಂದುವರಿಯುತ್ತದೆ. ಅದರಲ್ಲೂ ವಿಶೇಷವಾಗಿ ಹಣಕಾಸಿನ ವರ್ಷದ ಮೊದಲ ಎರಡು ತ್ರೈಮಾಸಿಕಗಳಲ್ಲಿ ಬಾಡಿಗೆ ಚಟುವಟಿಕೆಯು ಗರಿಷ್ಠ ಮಟ್ಟದಲ್ಲಿರುತ್ತದೆ. ಬೆಂಗಳೂರು, ಗುರುಗ್ರಾಮ್, ಹೈದರಾಬಾದ್ ಹಾಗೂ ನೋಯ್ಡಾದಂತಹ ವಸತಿ ಮತ್ತು ಐಟಿ ಕೇಂದ್ರಗಳು ನಿರೀಕ್ಷೆಗಳಿಗೆ ಅನುಗುಣವಾಗಿ ತಮ್ಮ ಬಾಡಿಗೆಯಲ್ಲಿ ಗಮನಾರ್ಹ ಹೆಚ್ಚಳವನ್ನು ಕಂಡಿವೆ” ಎಂದಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X