ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ 9 ಚಿನ್ನಾಭರಣ ಮಳಿಗೆ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆದಿದೆ. ಒರ್ವ ಚಿನ್ನದ ವ್ಯಾಪಾರಿ ಮನೆಯಲ್ಲಿ ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ನಡೆಸಿದ ಶೋಧ ಶನಿವಾರ ಅಂತ್ಯವಾಗಿದೆ.
ಐಟಿ ಅಧಿಕಾರಿಗಳು ಜಯನಗರ 3ನೇ ಬ್ಲಾಕ್ನ 8ನೇ ಮುಖ್ಯರಸ್ತೆಯಲ್ಲಿರುವ ಆಭೂಷಣ ಮಳಿಗೆ, ಪೊಲ್ಕಿಸ್, ಮಂಗಳ, ರಿದ್ದಿ, ತಿರುಮಲ ಸೇರಿದಂತೆ 9 ಮಳಿಗೆ ಮೇಲೆ ದಾಳಿ ನಡೆಸಿದ್ದರು.
ಕಳೆದ ಮೂರು ದಿನಗಳಿಂದ ನಗರದಲ್ಲಿ ಐಟಿ ರೇಡ್ ನಡೆಯುತ್ತಿದೆ. ಅಂಗಡಿ, ಶೋರೂಂ, ಮಾಲೀಕರ ಮನೆಯಲ್ಲಿ ಐಟಿ ಶೋಧ ಮಾಡುತ್ತಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಮಸ್ಯೆ ಸರಿಪಡಿಸಲು ಹೋದ ಇನ್ಸ್‌ಪೆಕ್ಟರ್‌ಗೆ ಅವಾಜ್ ಹಾಕಿದ ಯುವಕ: ಎಫ್‌ಐಆರ್ ದಾಖಲು
ಜಯನಗರ 2ನೇ ಬ್ಲಾಕ್ನಲ್ಲಿರುವ ಆಭೂಷಣ ಮಳಿಗೆ ಮಾಲೀಕನ ಫ್ಲ್ಯಾಟ್ ಮೇಲೂ ಐಟಿ ದಾಳಿ ನಡೆದಿತ್ತು. ಕಳೆದ ಮೂರು ದಿನಗಳಿಂದ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದರು. ಸದ್ಯ ಮೂರು ದಿನಗಳ ಪರಿಶೀಲನೆ ತಡ ರಾತ್ರಿ 2ಗಂಟೆಗೆ ಅಂತ್ಯವಾಗಿದೆ.
ದಾಳಿ ವೇಳೆ, ಹಲವು ಮಹತ್ವದ ದಾಖಲೆಗಳು, ರಶೀದಿ ಇನ್ವಾಯ್ಸ್ ಪರಿಶೀಲಿಸಲಾಗಿದೆ. ಆದಾಯ ತೆರಿಗೆ ವಂಚನೆ ಆರೋಪ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಗರದಲ್ಲಿ ಐಟಿ ರೇಡ್ ನಡೆಯುತ್ತಿದೆ. ಅಂಗಡಿ, ಶೋರೂಂ, ಮಾಲೀಕರ ಮನೆಯಲ್ಲಿ ಐಟಿ ಶೋಧ ಮಾಡುತ್ತಿದೆ.
ಇದೀಗ, ಆಭೂಷಣ ಚಿನ್ನದ ಅಂಗಡಿಯ ಮಾಲೀಕನ ಅಪಾರ್ಟ್ಮೆಂಟ್ ನಲ್ಲಿ ಐಟಿ ಶೋಧ ನಡೆಸುತ್ತಿತ್ತು. ಮೂರು ದಿನಗಳ ಶೋಧದ ನಂತರ ಇಂದು ಐಟಿ ದಾಳಿ ಅಂತ್ಯವಾಗಿದೆ.