ಬೆಂಗಳೂರು | ಕಣ್ಮನ ಸೆಳೆಯುವ ಕೇಕ್‌ ಶೋ ಆರಂಭ: ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ಚರ್ಚ್‌ಗಳು

Date:

Advertisements

ವರ್ಷದ ಕೊನೆಯ ಹಬ್ಬ ಕ್ರೀಸ್‌ಮಸ್‌ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಲು ಚರ್ಚ್‌ಗಳು ಸಜ್ಜಾಗಿವೆ. ಜತೆಗೆ, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಬೆಂಗಳೂರಿನ ಯುಬಿ ಸಿಟಿ ಸೇಂಟ್‌ ಜೋಸೇಫ್‌ ಮೈದಾನದಲ್ಲಿ 49ನೇ ವರ್ಷದ ಕೇಕ್‌ ಶೋ ಆರಂಭಿಸಲಾಗಿದೆ.

ರಾಜ್ಯ ರಾಜಧಾನಿಯಲ್ಲಿರುವ ಚರ್ಚ್‌ಗಳು ಲೈಂಟಿಂಗ್‌ನಿಂದ ಕಂಗೊಳಿಸುತ್ತಿದ್ದು, ರಸ್ತೆಯ ಸುತ್ತಮುತ್ತ ದೀಪಾಲಂಕಾರ ಮಾಡಲಾಗಿದೆ. ಕ್ರಿಸ್‌ಮಸ್‌ ಸಲುವಾಗಿಯೇ ಯುಬಿ ಸಿಟಿಯ ಸೇಂಟ್‌ ಜೋಸೇಫ್‌ ಮೈದಾನದಲ್ಲಿ ಕೇಕ್‌ ಶೋ ಆಯೋಜಿಸಲಾಗಿದೆ. ಇಂದಿನಿಂದ ಅಂದರೆ, ಡಿ.15ರಿಂದ ಜನವರಿ 1ರವರಗೆಗೂ ಒಟ್ಟು 18 ದಿನ ಈ ಕೇಕ್‌ ಶೋ ನಡೆಯಲಿದೆ. ನಿತ್ಯ ಬೆಳಗ್ಗೆ 11 ರಿಂದ ರಾತ್ರಿ 9 ರವರೆಗೆ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಪ್ರವೇಶ ಶುಲ್ಕ ತಲಾ ₹120 ಇದೆ.

ವಾರಂತ್ಯದಲ್ಲಿ ಕೇಕ್ ಶೋ ವೀಕ್ಷಣೆಗೆ ಸಾವಿರಾರು ಜನ ಆಗಮಿಸುವ ನೀರಿಕ್ಷೆ ಇದೆ. ಈ ಶೋ ನಲ್ಲಿ ವಿಶೇಷ ರೀತಿಯ, ವಿಶೇಷ ವಿನ್ಯಾಸದ ಕೇಕ್​ಗಳನ್ನು ಮಾಡಲಾಗಿದೆ. ಕಳೆದ ಆರು ತಿಂಗಳಿನಿಂದ ಕೇಕ್ ತಯಾರಿಸಿ ಪ್ರದರ್ಶನಕ್ಕೆ ಇರಿಸಲಾಗಿದೆ. ಕೇಕ್‌ ನೋಡುವುದರ ಜತೆಗೆ ಕೇಕ್ ಕೂಡ ಸವಿಯಬಹುದು. ಅಲ್ಲದೇ, ಈ ಮೈದಾನದಲ್ಲಿ ಗೃಹಾಲಂಕಾರ ವಸ್ತುಗಳು, ಮಹಿಳೆಯರ ಶಾಂಪಿಗ್ ವಸ್ತುಗಳು, ಚಿತ್ರಕಲೆ, ಬೆಡ್‌ಗಳು ಸೇರಿದಂತೆ ಹಲವಾರು ರೀತಿಯ ಮಳಿಗೆಗಳಿವೆ.

Advertisements

ಕೇಕ್‌

‌ಈ ಕೇಕ್ ಶೋ ಥಿಂಕ್ ಲೋಕಲ್- ಆಕ್ಟ್ ಗ್ಲೋಬಲ್ ಪರಿಕಲ್ಪನೆಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಜತೆಗೆ, ಜಾಗತಿಕ ವಿನ್ಯಾಸದ ಟಚ್ ನೀಡಲಾಗಿದ್ದು, ಸುಮಾರು 16 ಮಂದಿಯ ತಂಡದಿಂದ 22 ಕೇಕ್ ತಯಾರಿಸಲಾಗಿದೆ. ಈ ಕೇಕ್ ಶೋ ಸಲುವಾಗಿಯೇ ಸುಮಾರು 6,062 ಕೆ.ಜಿ.ಗೂ ಹೆಚ್ಚಿನ ಕೇಕ್-ಸಕ್ಕರೆ ಬಳಕೆ ಮಾಡಲಾಗಿದೆ.

ಶೋನಲ್ಲಿ ಇರುವ ಕೇಕ್‌ಗಳು ಈಗಿರುವ ಚಳಿಗೆ ಕರಗದಂತೆ ನೋಡಿಕ್ಕೊಳ್ಳಲು ಮುಂಜಾಗೃತೆ ಕ್ರಮ ವಹಿಸಲಾಗಿದ್ದು, ನಿತ್ಯ 24 ಗಂಟೆಗಳ ಕಾಲ ವಿದ್ಯುತ್‌ ದೀಪ ಇರಿಸಲಾಗಿದೆ. ಇದರಿಂದ ಸಕ್ಕರೆ ಲೇಪವು ಕರಗುವುದಿಲ್ಲ. ಬದಲಾಗಿ ದೀಪದಿಂದ ಬರುವ ಬಿಸಿಗೆ ಸಕ್ಕರೆ ಗಟ್ಟಿಯಾಗುತ್ತದೆ.

ಕೇಕ್‌4

ಪ್ರದರ್ಶನದಲ್ಲಿರುವ ಕೇಕ್‌ಗಳು

ಕೇಕ್ ಪ್ರದರ್ಶನದಲ್ಲಿ ಕುದುರೆ ಮೇಲೆ ಕುಳಿತ ಶಿವಾಜಿ ಮಹಾರಾಜ, ದಿ ನೆಕೆಡ್ ರೆಡ್ ವೆಲ್ವೆಟ್ ಕೇಕ್, ಕಾಸ್ಮಿಕ್ ಮಿಠಾಯಿ: ಸಕ್ಕರೆ ಶಿಲ್ಪಕಲೆಯಲ್ಲಿ ಚಂದ್ರಯಾನ-3, ಸದಾ ಬದಲಾಗುತ್ತಿರುವ ಲಾಡ್ ಕೇಕ್ ಸಂಭ್ರಮ, ರೀಗಲ್ ಸಮಯ ಕಾವಲುಗಾರರ ಜೋಡಿ: ಬೆಂಜಮಿನ್-ಸಾವರಿನ್, ಎಂಚಾಂಟಿಂಗ್ ಫ್ರಾಸ್ಟ್: ಫ್ರೋಜಲ್ ಕ್ಯಾಸಲ್ ಫ್ಯಾಂಟಸಿ ಕೇಕ್, ಮೆರ್ರಿ ಮ್ಯಾಜಿಕ್ ರೆತ್ ಡಿಲೈಟ್: ಸಾಂಟಾಸ್ ಜಾಯ್‌ಫುಲ್ ಪೀಕ್, ದೈವಿಕ ಭವ್ಯತೆ: ರಚನಾತ್ಮಕ ದುರ್ಗಾ ಸಿಂಹಾಸನ ಕೇಕ್, ಗೇಟರ್ ಗ್ರೋವ್ ಡಿಲೈಟ್: ದಿ ಎಡಿಬಲ್ ಇಂಡಿಯನ್ ಅಲ್ಲಿಗೇಟರ್, ಫೆಸ್ಟಿವ್ ಯೂನಿಯನ್ಸ್: ಕ್ರಿಸ್ಮಸ್ ವೆಡ್ಡಿಂಗ್ ಡೆಸರ್ಟ್ ಟೇಬಲ್, ಸ್ವೀಟ್ ಬ್ರಿಕ್ಸ್ ಎಕ್ಟ್ರಾಗಂಝಾ: ಎ ಶುಗರಿ ಲೆಗೊ ಡಿಲೈಟ್ ಕೇಕ್, ಟ್ರೋಫಿಕಾನಾ ಬ್ಲಿಸ್: ಎಕ್ಸೈಟ್ ಲೇಯರ್ಸ್ ಮತ್ತು ಫೆದರ್ಡ್ ಫ್ರೆಂಡ್ಸ್, ಅಂಡರ್‌ವಾಟ್ ಕ್ಯಾಸಲ್ ಮತ್ತು ಮ್ಯಾರನ್ ಲೈಫ್, ಶುಗರ್ ಸೆರೆನೆಡ್: ಡಂಬೋಸ್ ಮಿಮ್ಸಿಕಲ್ ಸರ್ಕಸ್ ಎಕ್ಟ್ರಾವಗಾಂಝಾ, ಉಚಿತ ಬಸ್ ಶಕ್ತಿ ಯೋಜನೆ ಬಿಂಬಿಸುವ ಕೇಕ್, ಸಿಹಿ ಒಡಿಸ್ಸಿ: ಮಾರಿಯೋಸ್ ಶುಗರ್-ಅಡ್ವೆಂಚರ್ ಕೇಕ್, ವೈಭವಯುತ ಆರೋಹಣ ಕೇಕ್, ಡಾಗ್ಸ್ ಆನ್ ವೆಡ್ಡಿಂಗ್ ಕೇಕ್, ಕಾಪ್ರ್ಸ್ ಬ್ರೈಡ್- ಸ್ಟೀಟ್ ಎಟರ್ನಲೆ ಎಂಬ್ರೇಸ್ ಕೇಕ್, ಶಾಪಾಹೋಲಿಕ್ ಸಫಾರಿ- ವರ್ಣರಂಜಿತ ಶಾಪಿಂಗ್ ಕ್ಯಾಮೆಲ್ ಕೇಕ್‌ಗಳಿವೆ.

ಕೇಕ್‌3

49ನೇ ವರ್ಷದ ಕೇಕ್ ಪ್ರದರ್ಶನವು ಶುಕ್ರವಾರ ಆರಂಭವಾಗಿದೆ. ರಾಷ್ಟ್ರೀಯ ಗ್ರಾಹಕ ಮೇಳದ ಸಹಯೋಗದೊಂದಿಗೆ ಇನ್‌ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್ (ಐಬಿಸಿಎ) ಮತ್ತು ಮೈ ಬೇಕರ್ಸ್‌ ಮಾರ್ಟ್ ಕ್ಯುರೇಟ್ ಮಾಡಿದ 22 ಕೇಕ್‌ಗಳನ್ನು ಪ್ರದರ್ಶಿಸಲಾಗುತ್ತಿದೆ.

ಈ ಬಗ್ಗೆ ದಿನ.ಕಾಮ್‌ ಜತೆಗೆ ಮಾತನಾಡಿದ ಕೇಕ್‌ ಶೋ ಆಯೋಜಕ ಗೌತಮ್, “ಪ್ರತಿ ವರ್ಷದಂತೆ ಈ ವರ್ಷವು ಕೇಕ್ ಶೋ ನಡೆಸಲಾಗುತ್ತಿದೆ. ಈ ವರ್ಷ ಕೇಕ್ ಶೋನಲ್ಲಿ ಹೊಸ ಪಾರ್ಲಿಮೆಂಟ್ ಸೇರಿದಂತೆ ಅನೇಕ ಕಲಾಕೃತಿಗಳಿವೆ. ಅನೇಕ ಬೇಕರಿ ಕಲಾವಿದರು ತಿಂಗಳು ಗಟ್ಟಲೆ ಶ್ರಮ ಪಟ್ಟು ಈ ಕಲಾಕೃತಿಗಳನ್ನು ನಿರ್ಮಾಣ ಮಾಡಿದ್ದಾರೆ. ಈ ವರ್ಷ ಉದ್ಘಾಟನೆಗೊಂಡ ಪಾರ್ಲಿಮೆಂಟ್ ದೇಶದ ಹೆಮ್ಮೆಯಾಗಿದೆ. ಇದನ್ನು ಐದು ಮಂದಿ ಕಲಾವಿದರು ಸೇರಿ 2.5 ತಿಂಗಳಲ್ಲಿ 14 ಅಡಿ ಅಗಲ, 14 ಅಡಿ ಉದ್ದ ಮತ್ತು 9 ಅಡಿ ಎತ್ತರ ಈ ಕೇಕ್‌ ತಯಾರಿಸಿದ್ದಾರೆ” ಎಂದು ತಿಳಿಸಿದರು.

ಕೇಕ್‌ 2

“ಚಿಕ್ಕಮಕ್ಕಳಿಂದ ಹಿಡಿದು ಹಿರಿಯರ ಅಭಿರುಚಿಗೆ ತಕ್ಕಂತೆ ಕೇಕ್‌ ವಿನ್ಯಾಸ ಮಾಡಲಾಗಿದೆ. ಕಳೆದ ಆರು ತಿಂಗಳಿನಿಂದ ಕೇಕ್ ತಯಾರಿಕೆಯ ಕೆಲಸಗಳನ್ನು ನಡೆಸಲಾಗಿದೆ. ಇದಕ್ಕಾಗಿ ಸುಮಾರು 6,062 ಕೆಜಿಗೂ ಹೆಚ್ಚಿನ ಕೇಕ್ ಮತ್ತು ಸಕ್ಕರೆ ಬಳಕೆ ಮಾಡಲಾಗಿದೆ” ಎಂದು ಮಾಹಿತಿ ನೀಡಿದರು.

“ಈ ವರ್ಷ ವಿಭಿನ್ನ ರೀತಿಯ ಆಕರ್ಷಕ ಕೇಕ್​ಗಳು ಪ್ರದರ್ಶನದಲ್ಲಿ ಇವೆ. ಈ ವರ್ಷ 40 ಸಾವಿರಕ್ಕೂ ಹೆಚ್ಚು ಜನ ಪ್ರದರ್ಶನದಲ್ಲಿ ಭಾಗಿಯಾಗುವ ನಿರೀಕ್ಷೆಯಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಮಸ್ಯೆ ಸರಿಪಡಿಸಲು ಹೋದ ಇನ್ಸ್‌ಪೆಕ್ಟರ್‌ಗೆ ಅವಾಜ್‌ ಹಾಕಿದ ಯುವಕ: ಎಫ್‌ಐಆರ್‌ ದಾಖಲು

ಈ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ವಿಜಯನಗರದ ನಿವಾಸಿ ರಮೇಶ್, “ಕಳೆದ ಹತ್ತು ವರ್ಷದಿಂದ ಕೇಕ್‌ ಪ್ರದರ್ಶನ ನೋಡಲು ಬರುತ್ತಿದ್ದೇನೆ. ತುಂಬಾ ಖುಷಿಯಾಗುತ್ತಿದೆ. ಪ್ರತಿ ವರ್ಷವೂ ಇಲ್ಲಿ ಗದ್ದಲ ಇರುತ್ತದೆ. ಇವತ್ತಿನಿಂದಲೇ ಆರಂಭವಾದ ಕಾರಣ ಹೆಚ್ಚಿನ ಜನಕ್ಕೆ ಈ ಶೋ ನಡೆಯುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಹಾಗಾಗಿ, ಈ ಬಾರಿ ಅಷ್ಟೊಂದು ಜನ ಇಲ್ಲ. ನೋಡಲು ತುಂಬಾ ಸೊಗಸಾಗಿದೆ” ಎಂದರು.

“ಮೊದಲ ಬಾರಿಗೆ ಕೇಕ್‌ ಶೋ ವೀಕ್ಷಣೆ ಮಾಡಲು ಬಂದಿದ್ದೇವೆ. ತುಂಬಾ ಚೆನ್ನಾಗಿ ಕೇಕ್‌ ಕಲಾಕೃತಿ ಮಾಡಿದ್ದಾರೆ. ಸಂಸತ್ ಭವನ, ಛತ್ರಪತಿ ಶಿವಾಜಿ, ಶಕ್ತಿ ಯೋಜನೆ ಬಿಂಬಿಸುವ ಬಿಎಂಟಿಸಿ ಬಸ್‌ ಸೇರಿದಂತೆ ಹಲವಾರು ಕಲಾಕೃತಿಗಳನ್ನು ತುಂಬಾ ಸೊಗಸಾಗಿ ಮಾಡಿದ್ದಾರೆ” ಎಂದು ಈ ದಿನ.ಕಾಮ್‌ಗೆ ಮಲ್ಲೇಶ್ವರಂ ನಿವಾಸಿ ಅಕ್ಷಯ್ ಹೇಳಿದರು.

ಬಸ್ 5

ಪುಟಾಣಿ ಮಕ್ಕಳಾದ ಥಾತ್ರಿ, ಸಂತೋಷ್, ನೀತು ಈ ದಿನ.ಕಾಮ್‌ ಜತೆಗೆ ಮಾತನಾಡಿ, “ನಮಗೆ ತುಂಬಾ ಖುಷಿಯಾಗುತ್ತಿದೆ. ಕೇಕ್ ತಿನ್ನಬೇಕು ಎನಿಸುತ್ತಿದೆ” ಎಂದು ಸಂತಸ ವ್ಯಕ್ತಪಡಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

Download Eedina App Android / iOS

X