ರಾಜ್ಯ ರಾಜಧಾನಿ ಬೆಂಗಳೂರಿನ ರೇಸ್‌ಕೋರ್ಸ್ ಮೇಲೆ ಜನವರಿ 12ರ ತಡರಾತ್ರಿ ಒಂದು ಗಂಟೆಗೆವರೆಗೂ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ. ನಿಗದಿತ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಹಾಗೂ ಜಿಎಸ್‌ಟಿ ಕಟ್ಟದೆ ಸರ್ಕಾರಕ್ಕೆ ವಂಚನೆ ಮಾಡಿದ ಆರೋಪದ ಮೇಲೆ ಈ ದಾಳಿ ನಡೆದಿದೆ.
ತಡರಾತ್ರಿ ಒಂದು ಗಂಟೆಯವರೆಗೂ ಈ ದಾಳಿ ನಡೆದಿದ್ದು, ಬರೋಬ್ಬರಿ ₹3 ಕೋಟಿ 47 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರೇಸ್‌ಕೋರ್ಸ್ ಬುಕ್ಕಿಂಗ್ ಕೌಂಟರ್‌ಗಳನ್ನ ಲಾಕ್ ಮಾಡಲಾಗಿದೆ. ಅಲ್ಲದೇ, ಕೌಂಟರ್‌ನಲ್ಲಿನ ಸಿಬ್ಬಂದಿ ಹೊರ ಹೋಗದಂತೆ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಒಂದೊಂದು ಕೌಂಟರ್‌ಗೂ ಸಿಬ್ಬಂದಿ ಭದ್ರತೆ ಒದಗಿಸಲಾಗಿದೆ.
ದಾಳಿ ವೇಳೆ, ಸಿಸಿಬಿ ಪೊಲೀಸರು ಹಲವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿದ್ದಾರೆ. ಸುಮಾರು 60 ಜನರನ್ನು ವಶಕ್ಕೆ ಪಡೆದು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಇನ್ನು ದಾಳಿ ವೇಳೆ ಲೆಕ್ಕಕ್ಕಿಂತ ಅಧಿಕ ಹಣ ಪತ್ತೆಯಾದ ಹಿನ್ನೆಲೆ, ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದು, ಹೆಚ್ಚುವರಿಯಾಗಿ ದೊರೆತ ಹಣಕ್ಕೆ ಲೆಕ್ಕ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬೀದಿ ವ್ಯಾಪಾರಿಗಳಿಗೆ ಮಾರ್ಷಲ್‌ಗಳ ಕಿರುಕುಳ; ಆರೋಪ
ಒಂದು ವೇಳೆ ಹೆಚ್ಚುವರಿ ಹಣಕ್ಕೆ ಲೆಕ್ಕ ನೀಡಲು ವಿಫಲವಾದರೆ, ಈ ಪ್ರಕರಣದ ಬಗ್ಗೆ ಇಡಿ ಇಲಾಖೆಗೆ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡುವ ಸಾಧ್ಯತೆ ಇದೆ.
ಎಎ ಅಸೋಸಿಯೇಟ್ಸ್, ಸಾಮ್ರಾಟ್ ಅಂಡ್ ಕೋ. ನೀಲಕಂಠ, ಮೆಟ್ರೊ ಅಸೋಸಿಯೇಟ್ಸ್, ಶೆಟ್ಟಿ ಅಸೋಸಿಯೇಟ್ಸ್, ಮೇಘನ ಎಂಟರ್ ಪ್ರೈಸಸ್, ಮಂಜು ಅಸೋಸಿಯೇಟ್ಸ್, ಮಾರುತಿ ಎಂಟರ್ ಪ್ರೈಸಸ್, ಆದಿತ್ಯ ಎಂಟರ್ ಪ್ರೈಸಸ್, ಪರಸ್ ಅಂಡ್ ಕೋ, ಬನಶಂಕರಿ ಎಂಟರ್ ಪ್ರೈಸಸ್, ಶ್ರೀಹರಿ ಎಂಟರ್ ಪ್ರೈಸಸ್, ತೇಜಸ್ವಿನಿ ಎಂಟರ್ ಪ್ರೈಸಸ್, ಸೂರ್ಯ ಅಂಡ್ ಕೋ, ಹೆಚ್ಎನ್ಎಸ್ ಅಂಡ್ ಕೋ, ಸಾಯಿ ರತನ್, ವಿಕ್ರಾಂತ್ ಎಂಟರ್ ಪ್ರೈಸಸ್, ನಿರ್ಮಲ್ ಅಂಡ್ ಕೋ, ಶ್ರೀರಾಮ ಎಂಟರ್ ಪ್ರೈಸಸ್, ಚಾಮುಂಡೇಶ್ವರಿ ಎಂಟರ್ ಪ್ರೈಸಸ್, ಆರ್.ಆರ್ ಎಂಟರ್ ಪ್ರೈಸಸ್, ರಾಯಲ್ ಇಎನ್ ಟಿಪಿ, ಆರ್.ಕೆ.ಎಂಟರ್ ಪ್ರೈಸಸ್ ಶ್ರೀವಾರಿ ಆ್ಯಂಡ ಕಂಪನಿ, ಕಾರ್ತಿಕ್ ಆ್ಯಂಡ ಕಂಪನಿ, ಅಮೃತಾಯ ಕೌಂಟರ್‌ಗಳಲ್ಲಿ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.