ಕರ್ನಾಟಕದಲ್ಲಿ ಮಹಿಳೆಯರ ಸುರಕ್ಷತೆಗೆ ಯಾವುದೇ ಗ್ಯಾರಂಟಿ ಇಲ್ಲ. ಮಹಿಳೆಯರನ್ನು ಸುರಕ್ಷಿತವಾಗಿಸಬೇಕಿದ್ದ ಹೊದಿಕೆಯ ತುಂಬಾ ರಂಧ್ರಗಳೇ ತುಂಬಿವೆ ಎಂದು ಬಿಜೆಪಿ ಹರಿಹಾಯ್ದಿದೆ.
ಈ ಕುರಿತು ಎಕ್ಸ್ ತಾಣದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, “ಕರ್ನಾಟಕವನ್ನು ಕಾಂಗ್ರೆಸ್ ಸರ್ಕಾರ ತಾಲಿಬಾನ್ ಅನ್ನಾಗಿಸುತ್ತಿದೆಯೇ? ಬೆಳಗಾವಿಯ ಒಬ್ಬ ಮಹಿಳೆಯ ಅಮಾನವೀಯ ಕಿರುಕುಳ ಮತ್ತು ದೌರ್ಜನ್ಯ, ಮತ್ತೊಬ್ಬ ಮಹಿಳೆಯ ಮೂಗಿಗೆ ಕತ್ತರಿ, ಈಗ ಹಾವೇರಿಯಲ್ಲಿ ಮುಸ್ಲಿಂ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ. ಗೃಹಲಕ್ಷ್ಮಿಯರಿಗೆ ಇಂತಹ ಭಾಗ್ಯವೇ” ಎಂದು ಪ್ರಶ್ನಿಸಿದೆ.
“ಗಾಂಧಿ ತತ್ವದ ಬಗ್ಗೆ ಭಾಷಣ ಮಾಡುವ ಸಿಎಂ ಸಿದ್ದರಾಮಯ್ಯ ಅವರೇ, ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಸ್ತ್ರೀ ಸ್ವಾತಂತ್ರ್ಯ ಮತ್ತು ಘನತೆಯ ಆದರ್ಶ ನಿಮ್ಮ ನಾಯಕತ್ವದಲ್ಲಿ ಛಿದ್ರ ಛಿದ್ರವಾಗಿದೆ. ನಮ್ಮ ತಾಯಂದಿರ, ಸಹೋದರಿಯರ, ಹೆಣ್ಣು ಮಕ್ಕಳ ಸುರಕ್ಷತೆಗೆ ಗ್ಯಾರಂಟಿ ಇಲ್ಲದಾಗ, ನಿಮ್ಮ ಗ್ಯಾರಂಟಿಗಳು ಇನ್ನೆಷ್ಟು ಯೋಗ್ಯ ಅನಿಸಿಕೊಳ್ಳುತ್ತವೆ?” ಎಂದು ಕುಟುಕಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅನ್ನಪೂರ್ಣಿ ‘ನಿಷೇಧ’- ಧರ್ಮಗಳ ನಡುವೆ ಬೆಂಕಿ ಇಟ್ಟು ಬೇಳೆ ಬೇಯಿಸುವ ಕೃತ್ಯ
ಕಾಂಗ್ರೆಸ್ ಮತ್ತು ಎಡಬಿಡಂಗಿಗಳ ಪ್ರಶ್ನೆ ರಾಮ ಮಂದಿರಾನೇ ಯಾಕೆ? ಮಂದಿರದ ಬದಲು ಆಸ್ಪತ್ರೆ, ಶಾಲೆ, ಬಡವರಿಗೆ ಮನೆ ಕಟ್ಟಬಹುದು ಎನ್ನುವವರ ಗಮನಕ್ಕೆ; ಮೆಡಿಕಲ್ ಕಾಲೇಜುಗಳು – 314, ಎಐಎಂಎಂಎಸ್‌ಗಳು – 24, ಹೊಸ ಐಐಟಿಗಳು – 6, ಹೊಸ ಐಐಐಟಿಗಳು – 16, ಬಡವರಿಗಾಗಿ ಮನೆ – 4 ಕೋಟಿ, ಗ್ಯಾಸ್ ಸೌಲಭ್ಯ ಪಡೆದ ಮನೆಗಳು – 10 ಕೋಟಿ, ಬಡವರ ಬ್ಯಾಂಕ್ ಖಾತೆ – 50 ಕೋಟಿ, ಟಾಯ್ಲೆಟ್‌ಗಳ ನಿರ್ಮಾಣ – 10 ಕೋಟಿ, ವಂದೇ ಭಾರತ್ ರೈಲುಗಳು – 29, ಕೇವಲ 9 ವರ್ಷಗಳಲ್ಲಿ ಇಷ್ಟೆಲ್ಲಾ ಸಾಧನೆ ಆಗಿದೆ, ಈಗ ರಾಮ ಮಂದಿರವೂ ಆಗಿದೆ” ಎಂದು ಹೇಳಿದೆ.
ಕರ್ನಾಟಕದಲ್ಲಿ ಮಹಿಳೆಯರ ಸುರಕ್ಷತೆಗೆ ಯಾವುದೇ ಗ್ಯಾರಂಟಿ ಇಲ್ಲ. ಮಹಿಳೆಯರನ್ನು ಸುರಕ್ಷಿತವಾಗಿಸಬೇಕಿದ್ದ ಹೊದಿಕೆಯ ತುಂಬಾ ರಂಧ್ರಗಳೇ ತುಂಬಿವೆ.
ಕರ್ನಾಟಕವನ್ನು @INCKarnataka ತಾಲಿಬಾನ್ ಅನ್ನಾಗಿಸುತ್ತಿದೆಯೇ?
ಬೆಳಗಾವಿಯ ಒಬ್ಬ ಮಹಿಳೆಯ ಅಮಾನವೀಯ ಕಿರುಕುಳ ಮತ್ತು ದೌರ್ಜನ್ಯ, ಮತ್ತೊಬ್ಬ ಮಹಿಳೆಯ ಮೂಗಿಗೆ ಕತ್ತರಿ, ಈಗ ಹಾವೇರಿಯಲ್ಲಿ… pic.twitter.com/6wbF4waccO
— BJP Karnataka (@BJP4Karnataka) January 13, 2024
ಬಿಜೆಪಿ ಯ ಕೆಲವು ಶಾಸಕರು ಸಂಸದರು ನಾಯಕರು ಮಹಿಳಾ ದೌರ್ಜಗಳ ಕಾರಣದಿಂದ ಕೋರ್ಟ್ ಶಿಕ್ಷೆ ವಿಧಿಸಿದೆ,,, ಮಣಿಪುರದಲ್ಲಿ ಈಗಲೂ ಘಟನೆಗಳು ನಡೆಯುತ್ತಲೇ ಇವೆ,,, ಹಾಗಂತ ಕರ್ನಾಟಕ ಸರಕಾರ ಮಹಿಳಾ ಶೋಷಣೆ ಸಮರ್ಥನೆ ಮಾಡುವುದು ಅಪರಾಧ,,, ಆದರೆ ರಾಜಕೀಯ ಪಕ್ಷಗಳ ಎಡಬಿಡಂಗಿತನ ಯಾರೂ ಸಹಿಸಿಕೊಳ್ಳಲು ಸಾಧ್ಯವಿಲ್ಲ