ಬೆಂಗಳೂರಿನಲ್ಲಿ ಎದುರಾಗಿರುವ ನೀರಿನ ಬಿಕ್ಕಟ್ಟಿನ ಮಧ್ಯೆ, ಬೇಸಿಗೆಯ ನೀರಿನ ಸಮಸ್ಯೆಯನ್ನು ನಿವಾರಿಸಲು ಅಧಿಕಾರಿಗಳು ನಾನಾ ಕ್ರಮಗಳನ್ನು ಯೋಜಿಸುತ್ತಿದ್ದಾರೆ. ಆದಾಗ್ಯೂ, ಪಾಲಿಕೆ ಸ್ಥಾಪಿಸಿದ ಹಲವಾರು ಕುಡಿಯುವ ನೀರಿನ ಘಟಕಗಳು ನಿಷ್ಕ್ರಿಯಗೊಂಡಿವೆ. ನೀರಿನ ಅಲಭ್ಯತೆಯಿಂದಾಗಿ ಖಾಸಗಿ ಆರ್‌ಒ ಕುಡಿಯುವ ನೀರಿನ ಘಟಕಗಳು ಮುಚ್ಚಲ್ಪಟ್ಟಿವೆ. ಈ ನೀರಿನ ಘಟಕಗಳಲ್ಲಿ ಹೆಚ್ಚಿನವು ಬೋರ್‌ವೆಲ್‌ಗಳಿಂದ ನೀರನ್ನು ಪಡೆಯುತ್ತವೆ. ಇದೀಗ ಬೋರ್‌ವೆಲ್ ಬತ್ತಿ ಹೋಗಿವೆ. ಇನ್ನು ಕೆಲವು ನೀರಿನ ಮಟ್ಟ ಖಾಲಿಯಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಾರ್ವಜನಿಕರಿಗೆ ಸಬ್ಸಿಡಿ ದರದಲ್ಲಿ ಕುಡಿಯುವ ನೀರನ್ನು ಒದಗಿಸಲು ಬೆಂಗಳೂರಿನಲ್ಲಿ 600ಕ್ಕೂ ಹೆಚ್ಚು ನೀರಿನ ಘಟಕಗಳನ್ನು ಸ್ಥಾಪಿಸಿದೆ. ಇಲ್ಲಿ ನಿವಾಸಿಗಳು ಕೇವಲ ₹5ಕ್ಕೆ 20 ಲೀಟರ್ ನೀರನ್ನು ಪಡೆಯಬಹುದು.
ಪಟ್ಟಣಗೆರೆ ನಿವಾಸಿ ಮನೋಜ್‌ಕುಮಾರ್ ಮಾತನಾಡಿ, “ಕಳೆದ ಕೆಲವು ದಿನಗಳಿಂದ ನಮ್ಮ ಭಾಗದಲ್ಲಿ ಆರ್‌ಒ ಪ್ಲಾಂಟ್ ಕೆಲಸ ಮಾಡುತ್ತಿಲ್ಲ. ಪಾಲಿಕೆ ಸ್ಥಾಪಿಸಿರುವ ಆರ್‌ಒ ವಾಟರ್ ಪ್ಲಾಂಟ್‌ಗಳು ಖಾಲಿ ಬಿದ್ದಿರುವುದನ್ನು ನೋಡಿದರೆ ಬೇಸರವಾಗುತ್ತದೆ. ನಮಗೆ ಶುದ್ಧ ಕುಡಿಯುವ ನೀರಿನ ಪ್ರವೇಶದ ಅಗತ್ಯವಿದೆ. ಕಾರ್ಯನಿರ್ವಹಿಸದ ನೀರಿನ ಘಟಕಗಳು ನಮ್ಮ ಸಂಕಟಗಳನ್ನು ಹೆಚ್ಚಿಸುತ್ತವೆ” ಎಂದಿದ್ದಾರೆ.
“ಆರ್.ಆರ್.ನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನೀರಿನ ಅಭಾವ ಉಂಟಾಗಿ ನೀರಿನ ಪಡಿತರ ವ್ಯವಸ್ಥೆ ಜಾರಿಗೆ ಬಂದಿದೆ. ಒಬ್ಬ ವ್ಯಕ್ತಿಗೆ ಮಾತ್ರ ಒಂದು ಕ್ಯಾನ್ (ಡಬ್ಬಿ) ಎಂಬ ಸಂದೇಶದೊಂದಿಗೆ ಪೋಸ್ಟರ್ ಅನ್ನು ಹಾಕಲಾಗಿದೆ. ಹಿಂದೆ, ಅವರು ಮೂರಕ್ಕಿಂತ ಹೆಚ್ಚು ನೀರಿನ ಕ್ಯಾನ್‌ಗಳನ್ನು ಒದಗಿಸುತ್ತಿದ್ದರು. ಆದರೆ, ಕಳೆದ ವಾರದಿಂದ ಒಬ್ಬ ವ್ಯಕ್ತಿಗೆ ಕೇವಲ ಒಂದು ಕ್ಯಾನ್‌ಗೆ ಸೀಮಿತಗೊಳಿಸಿದ್ದಾರೆ. ನೀರಿನ ಸಮಸ್ಯೆಯಿಂದಾಗಿ ನಮ್ಮ ಮನೆಗಳಿಗೆ ನೆಂಟರನ್ನು ಮನೆಗೆ ಕರೆಯುವುದು ಕಷ್ಟಕರವಾಗಿದೆ” ಎಂದು ಆರ್.ಆರ್.ನಗರ ನಿವಾಸಿ ವಿಜಯಪ್ರಸಾದ್ ಹೇಳಿದರು.
“ಸರ್ಕಾರಿ ಸ್ವಾಮ್ಯದ ನೀರಿನ ಘಟಕಗಳು ಕಾರ್ಯನಿರ್ವಹಿಸದ ಪ್ರದೇಶಗಳಲ್ಲಿ ನಿವಾಸಿಗಳು ಖಾಸಗಿ ನೀರಿನ ಘಟಕಗಳನ್ನು ಅವಲಂಬಿಸಿದ್ದಾರೆ. ಆದಾಗ್ಯೂ, ಹೆಚ್ಚಿನ ಖಾಸಗಿ ನೀರಿನ ಘಟಕಗಳು ಮುಚ್ಚಲ್ಪಟ್ಟಿವೆ ಮತ್ತು ಚಾಲ್ತಿಯಲ್ಲಿರುವ ನೀರಿನ ಘಟಕಗಳಲ್ಲಿ ಹೆಚ್ಚಿನ ಮೊತ್ತ ವಿಧಿಸುತ್ತಿದ್ದಾರೆ” ಎಂದು ನಿವಾಸಿಗಳು ಹೇಳಿದ್ದಾರೆ.
ಸರ್ಜಾಪುರದ ಲಾವಣ್ಯ ರಾವ್ ಮಾತನಾಡಿ, “ನೀರಿನ ಕೊರತೆಯಿಂದ ಘಟಕಗಳನ್ನು ಮುಚ್ಚಿರುವುದು ತುಂಬಾ ಸಮಸ್ಯೆಯಾಗಿದೆ. ಖಾಸಗಿ ನೀರಿನ ಘಟಕಗಳಲ್ಲಿ ನೀರಿನ ಅಲಭ್ಯತೆಯ ನಡುವೆ ನಾವು ಸಿಲುಕಿಕೊಂಡಿದ್ದೇವೆ. ನಮ್ಮ ನಿವಾಸಿಗಳಿಗೆ ಇದು ಕಠಿಣ ಪರಿಸ್ಥಿತಿಯಾಗಿದೆ. ಖಾಸಗಿ ಕಾರ್ಖಾನೆಗಳು 20 ಲೀಟರ್‌ಗೆ ₹80 ರಿಂದ ₹100 ವಸೂಲಿ ಮಾಡುತ್ತಿವೆ” ಎಂದರು.
“ನೀರಿನ ಲಭ್ಯತೆ ಇರುವ ಬಹುತೇಕ ಘಟಕಗಳ ಮುಂದೆ ಉದ್ದನೆಯ ಸರತಿ ಸಾಲಿನಲ್ಲಿ ಜನರು ನಿಂತಿರುತ್ತಾರೆ” ಎಂದು ನಿವಾಸಿಗಳು ದೂರಿದರು.
“ನಾವು ನೀರು ತರಲು ನೀರಿನ ಘಟಕಗಳ ಬಳಿ ಹೋದಾಗ, ಅಲ್ಲಿ ಸಾಕಷ್ಟು ಜನಸಂದಣಿ ಇರುತ್ತದೆ. ನೀರಿನ ಕ್ಯಾನ್ ತೆಗೆದುಕೊಳ್ಳಲು ದಿನದ ಯಾವುದೇ ಸಮಯದಲ್ಲಿ ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಕಾಯಬೇಕಾಗುತ್ತದೆ. ಈ ವಿಷಮ ಪರಿಸ್ಥಿತಿಯನ್ನು ನಿವಾರಿಸಲು ಅಧಿಕಾರಿಗಳಿಂದ ತುರ್ತು ಕ್ರಮ ಅಗತ್ಯವಿದೆ” ಎಂದು ಉತ್ತರ ಬೆಂಗಳೂರಿನ ಚಿಕ್ಕಬಾಣಾವರದ ನಿವಾಸಿ ಉಮಾಶಂಕರ್ ಆರ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬಿಎಂಟಿಸಿ ಬಸ್‌ಗೆ ಅಡ್ಡ ಬಂದ ಪಾದಚಾರಿ; ಸಾವು
ಇದೇ ವೇಳೆ ಕುಡಿಯುವ ನೀರಿನ ಘಟಕಗಳು ಸ್ಥಗಿತಗೊಂಡಿದ್ದರೆ ಪುನರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.