ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತ್ಯಾಜ್ಯ ಸುರಿಯುವ ಯಾರ್ಡ್ನಲ್ಲಿ ಸೋಮವಾರ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಯಾರೋ ಸೆದಿದ ಸಿಗರೇಟ್ ಅನ್ನು ಒಣ ಕಸಕ್ಕೆ ಎಸೆದು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಉತ್ತರ ಬೆಂಗಳೂರಿನ ರಾಜಗೋಪಾಲ್ ನಗರದಲ್ಲಿರುವ ಬಿಬಿಎಂಪಿ ತ್ಯಾಜ್ಯ ಸುರಿಯುವ ಯಾರ್ಡ್ನಲ್ಲಿ ಸೋಮವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ರಾತ್ರಿ 9.30ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೇಗನೇ ಆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದೆ. ದಾರಿಹೋಕರೊಬ್ಬರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಬೆಂಕಿ ನಂದಿಸಲು ನಾಲ್ಕು ಅಗ್ನಿಶಾಮಕ ವಾಹನಗಳು ಬಂದಿದ್ದು, ರಾತ್ರಿ 10 ಗಂಟೆಯ ವೇಳೆಗೆ ಅಗ್ನಿಶಾಮಕ ಸಿಬ್ಬಂದಿ ಶೇ.70 ರಷ್ಟು ಬೆಂಕಿ ನಂದಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನೀರಿನ ಸಮಸ್ಯೆ | ತಾತ್ಕಾಲಿಕವಾಗಿ ಬೆಂಗಳೂರು ತೊರೆಯುತ್ತಿರುವ ಐಟಿ ಉದ್ಯೋಗಿಗಳು
ಯಾರೋ ಹಚ್ಚಿದ ಸಿಗರೇಟನ್ನು ಒಣ ಕಸಕ್ಕೆ ಎಸೆದು ಬೆಂಕಿ ಹೊತ್ತಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ರಾಜಗೋಪಾಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.