ಬೆಂಗಳೂರು | ಗಾಳಿ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ: ಈ ಮಾರ್ಗದಲ್ಲಿ ಸಂಚಾರ ಬಂದ್

Date:

Advertisements

ಬ್ಯಾಟರಾಯನಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವ ಕಾರ್ಯಕ್ರಮ ಹಿನ್ನೆಲೆ, ಏ.17ರಿಂದ ಏ.19ರವರೆಗೆ ಮೈಸೂರು ಮುಖ್ಯರಸ್ತೆಯಲ್ಲಿ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ  ಬೆಂಗಳೂರು ಸಂಚಾರ ಪೊಲೀಸ್ ಸಂಚಾರ ಮಾರ್ಪಾಡು ಮಾಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಶ್ರೀ ಗಾಳಿ ಆಂಜನೇಯಸ್ವಾಮಿ ದೇವಸ್ಥಾನ ಟ್ರಸ್ಟ್ (ರಿ) ವತಿಯಿಂದ ಶ್ರೀ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವ ಕಾರ್ಯಕ್ರಮ ಏ.17 ರಿಂದ ಏ.19 ರವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಸಾಧ್ಯತೆ ಇದೆ.

ಸಂಚಾರ ಬದಲಾವಣೆ

Advertisements

ಏ.17 ರಂದು ಬೆಳಗ್ಗೆ 10 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ಕೆಂಗೇರಿ ಕಡೆಯಿಂದ ಮೈಸೂರು ರಸ್ತೆ ಮುಖಾಂತರ ಮಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಕಡೆಗೆ ಸಾಗುವ ಎಲ್ಲ ಮಾದರಿಯ ವಾಹನಗಳಿಗೆ ಎಂದಿನಂತೆ ಮೈಸೂರು ಮುಖ್ಯರಸ್ತೆಯಲ್ಲಿ ಚಲಿಸಲು ಅನುಮತಿಸಲಾಗಿದೆ.

ಮೆಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಕಡೆಯಿಂದ ಮೈಸೂರು ರಸ್ತೆ ಮುಖಾಂತರ ಮೈಸೂರು ಕಡೆಗೆ ಹೋಗುವ ಎಲ್ಲ ಮಾದರಿಯ ವಾಹನಗಳನ್ನು ಹೊಸಗುಡ್ಡದಹಳ್ಳಿ ಜಂಕ್ಷನ್‌ನಿಂದ ಕಿಂಕೋ ಜಂಕ್ಷನ್‌ ವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗಗಳು

ಮೆಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಕಡೆಯಿಂದ ಮೈಸೂರು ಮುಖ್ಯರಸ್ತೆ ಮುಖಾಂತರ ಮೈಸೂರು ಕಡೆಗೆ ಹೋಗುವ ಎಲ್ಲ ಮಾದರಿಯ ವಾಹನಗಳು ಹೊಸಗುಡ್ಡದಹಳ್ಳಿ ಜಂಕ್ಷನ್‌ನಲ್ಲಿ ಎಡತಿರುವು ಪಡೆದು, ಆವಲಹಳ್ಳಿ ಮುಖ್ಯ ರಸ್ತೆ ಮೂಲಕ, ಬೆಂಗಳೂರು ಒನ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಕೆಇಬಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಪಿಇಎಸ್‌ಐಟಿ ಕಾಲೇಜು ದೇವೇಗೌಡ ಸರ್ಕಲ್ ಮುಖಾಂತರ ನಾಯಂಡಹಳ್ಳಿ ಹತ್ತಿರ ಎಡತಿರುವು ಪಡೆದು ಮೈಸೂರು ರಸ್ತೆ ತಲುಪುವುದು.

ಗಾಳಿ ಆಂಜನೇಯ

ಏ.18ರಂದು ಬೆಳಿಗ್ಗೆ 6 ಗಂಟೆಯಿಂದ  ಏ.19ರ ಬೆಳಿಗ್ಗೆ 10 ಗಂಟೆಯವರೆಗೆ ಕೆಂಗೇರಿ ಕಡೆಯಿಂದ ಮೈಸೂರು ರಸ್ತೆ ಮುಖಾಂತರ ನಗರಕ್ಕೆ ಪ್ರವೇಶಿಸುವ ಎಲ್ಲ ಮಾದರಿಯ ವಾಹನಗಳನ್ನು ಕಿಂಕೋ ಜಂಕ್ಷನ್‌ನಿಂದ ಹೊಸಗುಡ್ಡದಹಳ್ಳಿ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಕಡೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಮೆಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಕಡೆಯಿಂದ ಮೈಸೂರು ರಸ್ತೆ ಮುಖಾಂತರ ಕೆಂಗೇರಿ ಮತ್ತು ಮೈಸೂರು ಕಡೆಗೆ ಹೋಗುವ ಎಲ್ಲ ಮಾದರಿಯ ವಾಹನಗಳನ್ನು ಹೊಸಗುಡ್ಡದಹಳ್ಳಿ ಜಂಕ್ಷನ್‌ನಿಂದ ಕಿಂಕೋ ಜಂಕ್ಷನ್‌ವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗ

ಕೆಂಗೇರಿ ಕಡೆಯಿಂದ ಮೈಸೂರು ರಸ್ತೆ ಮುಖಾಂತರ ನಗರ ಪ್ರವೇಶಿಸುವ ಎಲ್ಲ ಮಾದರಿಯ ವಾಹನಗಳು ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು, ನಾಗರಭಾವಿ ಜಂಕ್ಷನ್ ಹತ್ತಿರ ಬಲ ತಿರುವು ಪಡೆದು, ಚಂದ್ರಾಲೇಔಟ್ 80 ಅಡಿ ರಸ್ತೆಯಲ್ಲಿ ಚಲಿಸಿ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಮುಖಾಂತರ ಮುಂದೆ ಸಾಗಿ ಎಂ.ಸಿ. ಸರ್ಕಲ್ ಬಳಿ ಬಲತಿರುವು ಪಡೆದು ಮಾಗಡಿ ರಸ್ತೆ ಮುಖಾಂತರ ಸಾಗುವುದು.

ಮೆಜೆಸ್ಟಿಕ್‌ಗೆ ಹೋಗುವ ವಾಹನಗಳು ಹುಣಸೇಮರ ಜಂಕ್ಷನ್ ಬಳಿ ಎಡ ತಿರುವು ಪಡೆದು ಕೆ.ಬಿ ಜಂಕ್ಷನ್ ಮುಖಾಂತರ ಸಾಗಿ ಖೋಡೆ ಸರ್ಕಲ್ ತಲುಪಿ ಮೆಜೆಸ್ಟಿಕ್ ಕಡೆಗೆ ಹೋಗುವುದು.

ಸಿಟಿ ಮಾರ್ಕೆಟ್ ಕಡೆಗೆ ಹೋಗುವ ವಾಹನ ಸವಾರರು ಹುಣಸೇಮರ ಜಂಕ್ಷನ್ ಬಳಿ ಬಲ ತಿರುವು ಪಡೆದು ಬಿನ್ನಿಮಿಲ್ ಜಂಕ್ಷನ್ ಮುಖಾಂತರ ಸಿರ್ಸಿ ಸರ್ಕಲ್ ಬಳಿ ಎಡತಿರುವು ಪಡೆದು ಮಾರ್ಕೆಟ್ ತಲುಪುವುದು.

ಅಥವಾ, ನಾಯಂಡಹಳ್ಳಿ ಹಾಗೂ ಬಿಹೆಚ್‌ಇಎಲ್ ಮತ್ತು ಮೈಸೂರು ರಸ್ತೆ ಮುಖಾಂತರ ಮೆಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್‌ಗೆ ಬರುವ ವಾಹನಗಳು ಕಿಂಕೋ ಜಂಕ್ಷನ್ ಬಳಿ ಎಡತಿರುವು ಪಡೆದು ಅತ್ತಿಗುಪ್ಪೆ ಜಂಕ್ಷನ್, ವಿಜಯನಗರ ಬಸ್ ನಿಲ್ದಾಣ ಮುಖಾಂತರ, ಎಂ.ಸಿ. ಸರ್ಕಲ್‌ನಲ್ಲಿ ಬಲತಿರುವು ಪಡೆದು ಮಾಗಡಿ ಮುಖ್ಯರಸ್ತೆ ಮುಖಾಂತರ ಸಾಗುವುದು.

ಮೆಜೆಸ್ಟಿಕ್‌ ಗೆ ಹೋಗುವ ವಾಹನಗಳು ಹುಣಸೇಮರ ಜಂಕ್ಷನ್ ಬಳಿ ಎಡ ತಿರುವು ಪಡೆದು ಕೆ.ಬಿ ಜಂಕ್ಷನ್ ಮುಖಾಂತರ ಸಾಗಿ ಖೋಡೆ ಸರ್ಕಲ್ ತಲುಪಿ ಮೆಜೆಸ್ಟಿಕ್ ಹೋಗುವುದು.

ಸಿಟಿ ಮಾರ್ಕೆಟ್ ಕಡೆಗೆ ಹೋಗುವ ವಾಹನ ಸವಾರರು ಹುಣಸೇಮರ ಜಂಕ್ಷನ್ ಬಳಿ ಬಲ ತಿರುವು ಪಡೆದು ಬಿನ್ನಿಮಿಲ್ ಜಂಕ್ಷನ್ ಮುಖಾಂತರ ಸಿರ್ಸಿ ಸರ್ಕಲ್ ಬಳಿ ಎಡತಿರುವು ಪಡೆದು ಮಾರ್ಕೆಟ್ ತಲುಪುವುದು.

ಈ ಸುದ್ದಿ ಓದಿದ್ದೀರಾ? ಕಾವೇರಿ ಹೋರಾಟದಲ್ಲಿ ಬಿಜೆಪಿ ಸಂಸದರು ನನಗೆ ಬೆಂಬಲ ನೀಡಿಲ್ಲ: ಬಿಜೆಪಿ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ ದೇವೇಗೌಡ

ಮೆಜೆಸ್ಟಿಕ್ ಮತ್ತು ಸಿಟಿ ಮಾರ್ಕೆಟ್ ಕಡೆಯಿಂದ ಮೈಸೂರು ಮುಖ್ಯರಸ್ತೆ ಮುಖಾಂತರ ಮೈಸೂರು ಕಡೆಗೆ ಹೋಗುವ ಎಲ್ಲ ಮಾದರಿಯ ವಾಹನಗಳು ಹೊಸಗುಡ್ಡದಹಳ್ಳಿ ಜಂಕ್ಷನ್‌ನಲ್ಲಿ ಎಡತಿರುವು ಪಡೆದು, ಆವಲಹಳ್ಳಿ ಮುಖ್ಯ ರಸ್ತೆ ಮೂಲಕ, ಬೆಂಗಳೂರು ಒನ್ ಜಂಕ್ಷನ್ ಬಳಿ ಎಡ ತಿರುವು ಪಡೆದು ಕೆ.ಇ.ಬಿ ಜಂಕ್ಷನ್ ಬಳಿ ಬಲ ತಿರುವು ಪಡೆದು ಪಿ.ಇ.ಎಸ್.ಐ.ಟಿ. ಕಾಲೇಜು ದೇವೇಗೌಡ ಸರ್ಕಲ್ ಮುಖಾಂತರ ನಾಯಂಡಹಳ್ಳಿ ಹತ್ತಿರ ಎಡತಿರುವು ಪಡೆದು ಮೈಸೂರು ರಸ್ತೆ ತಲುಪುವುದು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X