ರಾಜ್ಯ ರಾಜಧಾನಿ ಬೆಂಗಳೂರಿನ ಮೇಘನಾ ಫುಡ್ಸ್ ಗ್ರೂಪ್ ಕಂಪನಿಗೆ ಸಂಬಂಧಿಸಿದ 10ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (ಐಟಿ) ದಾಳಿ ನಡೆಸಿದ್ದಾರೆ.
ಮೇಘನಾ ಫುಡ್ಸ್ ಕಂಪನಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳನ್ನು ನಡೆಸುತ್ತಿದ್ದು, ಕೋರಮಂಗಲ, ಇಂದಿರಾನಗರ, ಜಯನಗರದಲ್ಲಿ ಇದರ ಶಾಖೆಗಳಿವೆ.
ಮೇಘನಾ ಫುಡ್ಸ್ ಗ್ರೂಪ್‌ಗೆ ಸೇರಿದ ಹೋಟೆಲ್, ರೆಸ್ಟೋರೆಂಟ್‌ಗಳ ಮೇಲೆ ಐಟಿ ದಾಳಿ ನಡೆಸಿದೆ. ಬೆಂಗಳೂರಿನ ಕೋರಮಂಗಲ, ಇಂದಿರಾನಗರ, ಜಯನಗರದಲ್ಲಿರುವ ಮೇಘನಾ ಫುಡ್ಸ್ ಗ್ರೂಪ್‌ನ ಶಾಖೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಲೌಡ್ ಸ್ಪೀಕರ್ ಜಗಳಕ್ಕೆ ಕೋಮು ಬಣ್ಣ ಬಳಿಯಲೆತ್ನಿಸಿದ ಬಿಜೆಪಿ; ಎಫ್‌ಐಆರ್‌ನಲ್ಲಿ ಇರೋದೇನು?
ಆದಾಯ ತೆರಿಗೆ ಪಾವತಿ ಮಾಡುವಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆ, ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕರ್ನಾಟಕ ಹಾಗೂ ಗೋವಾ ವಿಭಾಗದ ಐಟಿ ಅಧಿಕಾರಿಗಳಿಂದ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.