ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಫ್ಯಾಕ್ಟರಿ ಮೇಲೆ ಮಲ್ಲೇಶ್ವರಂ ಪೊಲೀಸರು ದಾಳಿ ನಡೆಸಿ ನಕಲಿ ಬ್ರಾಂಡ್ ಡಿಟರ್ಜೆಂಟ್ ಪೌಡರ್ ಸೀಜ್ ಮಾಡಿದ್ದಾರೆ.
ಬ್ರ್ಯಾಂಡೆಡ್ ಡಿಟರ್ಜೆಂಟ್ ಪೌಡರ್ ನಕಲು ಮಾಡುತ್ತಿದ್ದ ಬಗ್ಗೆ ಹಿಂದೂಸ್ತಾನ್ ಯೂನಿ ಲಿವರ್ ಸಂಸ್ಥೆ ಮಾಹಿತಿ ಆಧರಿಸಿ ಮಲ್ಲೇಶ್ವರಂ ಪೊಲೀಸರು ಫ್ಯಾಕ್ಟರಿಯ ಮೇಲೆ ದಾಳಿ ನಡೆಸಿದ್ದಾರೆ.
₹20 ಲಕ್ಷ ಮೌಲ್ಯದ ಡಿಟರ್ಜೆಂಟ್ ವಸ್ತುಗಳು, ಸುಮಾರು ₹15 ಲಕ್ಷ ಮೌಲ್ಯದ ಮಿಕ್ಸಿಂಗ್ ಮಷಿನ್ ಸೇರಿದಂತೆ ನಾನಾ ಕಂಪನಿಯ ಲೇಬಲ್ಗಳನ್ನ ಜಪ್ತಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಬ್ಯಾನರ್ ಅಳವಡಿಕೆ ₹50,000 ದಂಡ
ಅರ್ಜುನ್ ಜೈನ್ ಎಂಬಾತ ಪ್ಯಾಕ್ಟರಿ ನಡೆಸುತ್ತಿದ್ದು, ಲೋಡ್ಗಟ್ಟಲೇ ಡಿಟರ್ಜೆಂಟ್ ಪ್ಯಾಕ್ ಸರಬರಾಜು ಮಾಡುತ್ತಿದ್ದರು. ಸದ್ಯ ಅರ್ಜುನ್ ಜೈನ್ ಎಂಬಾತನನ್ನು ಮಲ್ಲೇಶ್ವರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ.