ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಮಕ್ಕಳ ಮೇಲೆ ತಾಯಿ ನಡೆಸುತ್ತಿರುವ ದೌರ್ಜನ್ಯಗಳು ವರದಿಯಾಗುತ್ತಿವೆ. ಇದೀಗ, ಅಂತಹದ್ದೇ ಮತ್ತೊಂದು ಪ್ರಕರಣವೊಂದು ಬೆಳಕಿಗೆ ಬಂದಿದೆ. ಮೂರು ವರ್ಷದ ಮಗುವನ್ನು ತಾಯಿ ಕೂಡಿಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ನಗರದ ಹೊರವಲಯದ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ಮೂಲದ ಮಲತಂದೆ ಮಂಜುನಾಥ್ ಹಾಗೂ ತಾಯಿ ಮಂಜುಳ ಇವರಿಬ್ಬರು ಮಗುವಿನ ಮೇಲೆ ಹಲ್ಲೆ ನಡೆಸಿದ್ದಾರೆ.
ಕಳೆದೊಂದು ವರ್ಷದಿಂದ ಮಗುವಿನ ಮೇಲೆ ಮಲತಂದೆ ಕ್ರೌರ್ಯ ಮೆರೆದಿದ್ದು, ಇದಕ್ಕೆ ತಾಯಿಯೂ ಬೆಂಬಲ ನೀಡಿದ್ದಾಳೆ. ಮಗುವಿನ ಕೈ ಮತ್ತು ಕುತ್ತಿಗೆ ಭಾಗದಲ್ಲಿ ಹೀಟರ್ ಮತ್ತು ಸಿಗರೇಟ್‌ನಿಂದ ಮಲತಂದೆ ಸುಟ್ಟಿದ್ದಾನೆ. ಮಗುವಿನ ತಲೆ ಮತ್ತು ಹಣೆ ಭಾಗದಲ್ಲೂ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ದಿಶಾ ಎಂಬ ಹೆಸರಿನ ಸುಮಾರು ನಾಲ್ಕು ವರ್ಷ ವಯಸ್ಸಿನ ಹೆಣ್ಣು ಮಗುವಿನ ಮೇಲೆ ಈ ಇಬ್ಬರು ಕ್ರೌರ್ಯ ಮೆರೆದಿದ್ದಾರೆ.
ಮಾರ್ಚ್ 15ರಂದು ಸಾಯಂಕಾಲ ಕುಡಿದ ಮತ್ತಿನಲ್ಲಿ ಮನೆಗೆ ಬಂದ ಮಲತಂದೆ ಮಗುವಿನ ಮೇಲೆ ಕೇಬಲ್ ವೈರ್‌ನಿಂದ ಹಲ್ಲೆ ಮಾಡಿದ್ದಾನೆ. ಈ ವೇಳೆ, ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿದ್ದಾರೆ. ಮಗು ತಂದೆ-ತಾಯಿ ನೀಡುತ್ತಿರುವ ಹಿಂಸೆಯ ಬಗ್ಗೆ ಸ್ಥಳೀಯರಿಗೆ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ವಿದೇಶಿ ಕರೆನ್ಸಿಗಾಗಿ ಮಹಿಳೆ ಕೊಲೆ; ಇಬ್ಬರ ಬಂಧನ
ಮಲತಂದೆ ಮಂಜುನಾಥ್ ಮತ್ತು ತಾಯಿ ಮಂಜುಳಾಗೆ ಸ್ಥಳೀಯರು ಥಳಿಸಿ, ಬಳಿಕ ಹೆಬ್ಬಗೋಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.