ಬ್ಯಾಡಗಿ ಮಾರುಕಟ್ಟೆ ದುರ್ಘಟನೆ | ಕಾರ್ಪೋರೇಟ್ ಕಂಪನಿಪರ ಕೃಷಿ ನೀತಿಗಳೇ ಕಾರಣ: ಯು ಬಸವರಾಜ ಆರೋಪ

Date:

ಬ್ಯಾಡಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ನಡೆದ ದುರ್ಘಟನೆಗೆ ಒಕ್ಕೂಟ (ಕೇಂದ್ರ) ಸರ್ಕಾರದ ಕಾರ್ಪೋರೇಟ್ ಕಂಪನಿಗಳ ಪರವಾದ ಕೃಷಿ ನೀತಿಗಳೇ ಕಾರಣವೆಂದು ಕರ್ನಾಟಕ ಪ್ರಾಂತ ರೈತ ಸಂಘ(ಕೆಪಿ‌ಆರ್‌ಎಸ್) ಬಲವಾಗಿ ಖಂಡಿಸುತ್ತದೆ. ಸದರಿ ಒಟ್ಟು ಪ್ರಕರಣದ ಸಮಗ್ರ ತನಿಖೆಗೆ ಅಗತ್ಯ ಕ್ರಮವಹಿಸಬೇಕು ಎಂದು ಕೆಪಿಆರ್‌ಎಸ್ ರಾಜ್ಯ ಉಪಾಧ್ಯಕ್ಷ ಯು ಬಸವರಾಜ ಸರ್ಕಾರವನ್ನು ಆಗ್ರಹಿಸಿದ್ದಾರೆ.

‌ಹಾವೇರಿ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ, “ಎಪಿಎಂಸಿ ಬ್ಯಾಡಗಿಯಲ್ಲಿ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿ ಆಸ್ತಿ ಪಾಸ್ತಿಗಳಿಗೆ ದಾಖಲಾತಿಗಳಿಗೆ ಹಾನಿಯುಂಟು ಮಾಡಿರುವುದು ಖಂಡನೀಯ. ಆದರೆ ರೈತರ ಆಕ್ರೋಶಕ್ಕೆ ಕಾರಣವಾದ ಅಂಶಗಳನ್ನು ಸರ್ಕಾರ ಕೂಲಂಕುಶವಾಗಿ ಗಮನಿಸಬೇಕು” ಎಂದರು.

“ರೈತರ ಉದ್ರಿಕ್ತತೆಯ ಹಿಂದೆ ಬೆಲೆ ಕುಸಿತ ಕಾರ್ಯ ನಿರ್ವಹಿಸಿರುವ ಸಾ‌ಧ್ಯತೆಗಳಿವೆ ಎಂಬುದನ್ನು ಸರ್ಕಾರ ಗಮನಿಸಬೇಕು. ಕಳೆದ 2023ರಲ್ಲಿ ಗುಂಟೂರು ಮೆಣಸಿನಕಾಯಿ ದರ ಕ್ವಿಂಟಾಲ್‌ಗೆ ₹25,000 ಇತ್ತು. ಈಗ ₹15,000ಕ್ಕೆ ಕುಸಿದಿದೆ. ಅದೇ ರೀತಿ, ಬ್ಯಾಡಗಿ ಕಡ್ಡಿಗಾಯಿ ಕಳೆದ ವರ್ಷ ₹40,000ದಿಂದ  ₹45,000 ಇದ್ದದ್ದು ಈ ವರ್ಷ ₹8,000ದಿಂದ ₹10,000ಕ್ಕೆ ಕುಸಿದಿದೆ. ಹಾಗೆ ಬ್ಯಾಡಗಿ ಡಬ್ಬಿಕಾಯಿ ಕಳೆದ ವರ್ಷ ₹60,000ದಿಂದ ₹70,000ಗಳಷ್ಟಿದ್ದದ್ದು ಈ ವರ್ಷ ₹6,000ದಿಂದ ₹8,000ಕ್ಕೆ ಕುಸಿದಿದೆ. ಈ ಬೆಲೆ ಕುಸಿತವು ರೈತರನ್ನು ತೀವ್ರ ಚಿಂತಾಕ್ರಾಂತರನ್ನಾಗಿಸಿದೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಮಾಹಿತಿಯಂತೆ ಪ್ರತಿ ಎಕರೆಗೆ ರೈತರು ₹1.5 ಲಕ್ಷದಿಂದ ₹2 ಲಕ್ಷದವರೆಗೆ ಹೂಡಿಕೆ ಮಾಡುತ್ತಿದ್ದಾರೆ. ಈ ವರ್ಷ ಇಳುವರಿಯು ನೀರಾವರಿ ಪ್ರದೇಶದಲ್ಲಿ ಎಕರೆಗೆ ಸರಾಸರಿ ತಲಾ 6 ರಿಂದ 10 ಕ್ಚಿಂಟಾಲ್ ಬಂದಿದೆ ಎನ್ನಲಾಗಿದೆ. ಹೀಗಾದಲ್ಲಿ ಪ್ರಸ್ತುತ ಬೆಲೆಯಿಂದಾಗಿ ತಲಾ ಎಕರೆಗೆ ಹೂಡಿಕೆಯ ಬಡ್ಡಿಯು ಬಾರದೆಂಬ ಆತಂಕವೂ ರೈತರ ಆಕ್ರೋಶಕ್ಕೆ ಕಾರಣವಾಗಿದೆ” ಎಂದು ಹೇಳಿದರು.

“ಕೃಷ್ಣಾ ಹಾಗೂ ತುಂಗಭದ್ರ ಅಚ್ಚುಕಟ್ಟು ಪ್ರದೇಶದ ಲಕ್ಷಾಂತರ ಎಕರೆಗಳಲ್ಲಿನ ಈ ಬೆಳೆಯು ಅಂದಾಜಿನಂತೆ ರೈತರಿಗೆ ₹15 ಸಾವಿರ ಕೋಟಿಗಳಿಗೂ ಅಧಿಕ ಮೊತ್ತದ ನಷ್ಟವನ್ನು ಉಂಟುಮಾಡಿದೆ. ಇಂತಹ ಸಂದರ್ಭದ ರೈತರ ಆಕ್ರೋಶವನ್ನು ಕೆಲವು ಕಿಡಿಗೇಡಿಗಳು ಬಳಸಿಕೊಂಡಿರುವ ಸಂಭವಗಳಿವೆ. ಕಿಡಿಗೇಡಿಗಳ ದುಷ್ಕೃತ್ಯ ತೀವ್ರ ಖಂಡನೀಯವಾಗಿದೆ. ಇವರ ಮೇಲೆ ಕಠಿಣ ಕಾನೂನಿನ ಕ್ರಮವಹಿಸಬೇಕು. ಡಾ. ಎಂ ಎಸ್ ಸ್ವಾಮಿನಾಥನ್ ಕೃಷಿ ಆಯೋಗದ ಸಲಹೆಯಂತೆ ಲಾಭದಾಯಕ ಬೆಂಬಲ ಬೆಲೆ ಖಾತರಿಪಡಿಸುವ ಕಾನೂನು ಜಾರಿಯಾದರೆ ಮಾತ್ರ ಈ ತರಹದ ಘಟನೆಗಳನ್ನು ತಡೆಯಲು ಸಾಧ್ಯ” ಎಂದರು.

“ರೈತರ ಈ ಸಂಕಷ್ಠಕ್ಕೆ ಬೆಲೆಗಳನ್ನು ತಮ್ಮ ಲಾಭಕ್ಕೆ ತಕ್ಕಂತೆ ಏರಿಳಿತ ಮಾಡಿ ಲೂಟಿ ಮಾಡುವ ಕಾರ್ಪೋರೇಟ್ ವ್ಯಾಪಾರಿಗಳ ದುಷ್ಟತನವೇ ಕಾರಣವಾಗಿದೆ. ಈ ಕಾರ್ಪೋರೇಟ್ ಸಂಸ್ಥೆಗಳು ಬೆಲೆಗಳನ್ನು ಏರಿಳಿತ ಮಾಡಿ ಲೂಟಿ ಮಾಡಲು ಅವಕಾಶ ನೀಡಿರುವ ಕೇಂದ್ರ ಸರ್ಕಾರವೇ ಈ ದುರಂತಕ್ಕೆ ನೇರ ಹೊಣೆಯಾಗಿದೆ. ಒಣ ಮೆಣಸಿನಕಾಯಿ ಬೆಳೆಗಾರರನ್ನು ಗುರುತಿಸಿ ಈ ಬೆಲೆ ಕುಸಿತಕ್ಕೆ ತಲಾ ಎಕರೆಗೆ ಕನಿಷ್ಟ ₹50,000 ಪರಿಹಾರ ನೀಡುವುದಾಗಿ ಒಕ್ಕೂಟ ಸರ್ಕಾರ ಘೋಷಿಸಬೇಕು. ಕನಿಷ್ಟ ಬೆಂಬಲ ಬೆಲೆಯನ್ನು ಘೋಷಿಸಿ ಖರೀದಿಸಲು ಅಗತ್ಯ ಕ್ರಮ ವಹಿಸಬೇಕು” ಎಂದು ಆಗ್ರಹಿಸಿದರು.

ಮಾರುಕಟ್ಟೆ ಭೇಟಿ: ಇಂದು ಬ್ಯಾಡಗಿಯ ಪ್ರಖ್ಯಾತ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಇತ್ತೀಚೆಗೆ ನಡೆದ ದುರ್ಘಟನೆ ಕುರಿತು ಸ್ಥಿತಿಗತಿ ತಿಳಿಯಲು ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್) ನೇತೃತ್ವದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣದ ವಾಸ್ತವ ಸ್ಥಿತಿಗತಿ ತಿಳಿಯಲು ಎಪಿಎಂಸಿ ಕಾರ್ಯದರ್ಶಿ ಸತೀಶ್, ಮೆಣಸಿನಕಾಯಿ ವರ್ತಕ ಎಸ್ ಆರ್ ಪಾಟೀಲ, ಪೊಲೀಸ್ ಇಲಾಖೆ, ರೈತರು, ಹಮಾಲಿ ಕಾರ್ಮಿಕರ ಜೊತೆ ಚರ್ಚಿಸಿ ಸಮಗ್ರ ಮಾಹಿತಿ ಪಡೆದಿದ್ದಾರೆ.

ಈ ಸುದ್ದಿ ಓದಿದ್ದೀರಾ? ತುಮಕೂರು | ಸ್ಪರ್ಧೆ ಬಯಸಿರಲಿಲ್ಲ, ಪಕ್ಷ ಅವಕಾಶ ಕೊಟ್ಟಿದೆ: ವಿ ಸೋಮಣ್ಣ

ಕೆಪಿಆರ್‌ಎಸ್ ರಾಜ್ಯ ಉಪಾಧ್ಯಕ್ಷ ಯು ಬಸವರಾಜ, ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಸಿಐಟಿಯು ರಾಜ್ಯ ಕಾರ್ಯದರ್ಶಿ ಆರ್ ಎಸ್ ಬಸವರಾಜ, ಕರ್ನಾಟಕ ರಾಜ್ಯ ದೇವದಾಸಿ ವಿಮೋಚನಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಳಮ್ಮ, ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್, ಅಂಗನವಾಡಿ ನೌಕರರ ಸಂಘಟನೆ ಮುಖಂಡ ಮಹಾಂತೇಶ ಎಲಿ, ಹಮಾಲಿ ಕಾರ್ಮಿಕ ಸಂಘಟನೆ ಅಧ್ಯಕ್ಷ ಮಹಾದೇವಪ್ಪ ಸೇರಿದಂತೆ ಇತರರು ಇದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಮೊದಲ ಹಂತದ ಮತದಾನ ದಿನ 2,172 ಪ್ರಕರಣ ದಾಖಲು

ಲೋಕಸಭಾ ಚುನಾವಣೆ ಹಿನ್ನೆಲೆ, ಏ.26 ರಂದು ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...

ಚಿಕ್ಕಮಗಳೂರು | ಹಿಂದು ಕಾರ್ಯಕರ್ತನ ಮೇಲೆ ಬಿಜೆಪಿಗರ ಹಲ್ಲೆ

ಹಿಂದುತ್ವವಾದಿ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿ, ಥಳಿಸಿರುವ ಘಟನೆ...

ಮಂಡ್ಯ | 8,000 ಕಿ.ಮೀ ದೂರದಿಂದ ಬಂದು ಮತದಾನ ಮಾಡಿದ ಯುವತಿ!

ಯುವತಿಯೊಬ್ಬರು ಬರೋಬರಿ 8,000 ಕಿ.ಮೀ ದೂರದ ಲಂಡನ್‌ನಿಂದ ಮಂಡ್ಯಕ್ಕೆ ಬಂದು ಮತದಾನ...

ದಕ್ಷಿಣ ಕನ್ನಡ | 100% ಮತದಾನ ದಾಖಲಿಸಿದ ಕುಗ್ರಾಮ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ನಡೆದಿದೆ. ದಕ್ಷಿಣ...