ನಿರ್ಮಾಣ ಹಂತದ ಕಟ್ಟಡದಲ್ಲಿ ಅನುಮಾನಸ್ಪದವಾಗಿ ಯುವತಿಯ ಮೃತದೇಹ ಪತ್ತೆಯಾಗಿದ್ದು, ಸಂಪಗಿರಾಮ ಠಾಣೆಯ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಯುವತಿ ಬಗ್ಗೆ ಇನ್ನು ಮಾಹಿತಿ ತಿಳಿದುಬಂದಿಲ್ಲ. ಬೆಂಗಳೂರಿನ ಡಬಲ್ ರೋಡ್ ಬಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಶವ ಪತ್ತೆಯಾಗಿದೆ.
ನಿರ್ಮಾಣ ಹಂತದ ಕಟ್ಟಡದಲ್ಲಿ ಸುಮಾರು 25-26 ವಯಸ್ಸಿನ ಯುವತಿಯ ಮೃತದೇಹ ಎಂದು ತಿಳಿದುಬಂದಿದೆ. ಈ ಕಟ್ಟಡವನ್ನು ಅರ್ಧ ನಿರ್ಮಾಣ ಮಾಡಿ ಹಾಗೇಯೇ ಬಿಟ್ಟಿದ್ದಾರೆ. ಸದ್ಯ ಶವ ಪತ್ತೆಯಾದ ಸ್ಥಳಕ್ಕೆ ಸಂಪಂಗಿರಾಮನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಮ್ಮ ಮೆಟ್ರೋ | ಮೊದಲ ಚಾಲಕ ರಹಿತ ರೈಲಿನ ಫೋಟೋ ಬಿಡುಗಡೆ
ಯುವತಿಯ ಸಾವಿನ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಸದ್ಯ ಪೊಲೀಸರು ಮೃತಳ ಗುರುತು ಪತ್ತೆ ಮಾಡುತ್ತಿದ್ದಾರೆ. ಕೊಲೆ, ಆತ್ಮಹತ್ಯೆ ಅಥವಾ ಯಾವ ಕಾರಣಕ್ಕೆ ಸಾವು ಎಂಬುದರ ಬಗ್ಗೆ ತನಿಖೆಯಿಂದ ತಿಳಿದು ಬರಬೇಕಿದೆ.