ನಮ್ಮ ಮೆಟ್ರೋ | ಮೊದಲ ಚಾಲಕ ರಹಿತ ರೈಲಿನ ಫೋಟೋ ಬಿಡುಗಡೆ

Date:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಾಹನ ಸಂಚಾರ ದಟ್ಟಣೆಗೆ ನಮ್ಮ ಮೆಟ್ರೋ ಮದ್ದಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ, ನಗರದಲ್ಲಿ 72 ಕಿ.ಮೀ ವ್ಯಾಪಿಸಿರುವ ಮೆಟ್ರೋದ ವಿಸ್ತರಣೆ ಕಾರ್ಯ ಮುಂದುವರೆದಿದೆ. ಇದೀಗ, ನಮ್ಮ ಮೆಟ್ರೋ ಹಳಿಗಳ ಮೇಲೆ ಚಾಲಕ ರಹಿತ ಮೆಟ್ರೋ ರೈಲು ಕಾರ್ಯಾಚರಣೆ ನಡೆಸಲು ಸಜ್ಜಾಗಿದೆ.

ಬೆಂಗಳೂರಿಗೆ ಚೀನಾದಿಂದ ಬಂದಿರುವ ಚಾಲಕ ರಹಿತ ಮೆಟ್ರೋ ರೈಲಿನ ಫೋಟೋ ಮತ್ತು ವಿಡಿಯೋವನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಬಿಡುಗಡೆ ಮಾಡಿದೆ.

ಚೀನಾದ ಶಾಂಘೈ ಬಂದರಿನಿಂದ ಜನವರಿ 24ರಂದು ಸಮುದ್ರ ಮಾರ್ಗವಾಗಿ ಚಾಲಕ ರಹಿತ ರೈಲು ಬೋಗಿಗಳನ್ನು ಸಾಗಿಸಲಾಗಿತ್ತು. ಫೆ.6ರಂದು ಚೆನ್ನೈ ಬಂದರಿಗೆ ಬಂದು ತಲುಪಿತ್ತು. ಫೆಬ್ರುವರಿ 14ರಂದು ಬಂದರಿನಿಂದ ರಸ್ತೆ ಮಾರ್ಗದ ಮೂಲಕವಾಗಿ ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಚಾಲಕ ರಹಿತ ನಮ್ಮ ಮೆಟ್ರೋ ರೈಲು ಬಂದು ತಲುಪಿತ್ತು. ಇದೀಗ, ರೈಲಿನ ಮೇಲೆ ಹೊದಿಸಿದ್ದ ಹೊದಿಕೆಯನ್ನು ತೆಗೆದು ರೈಲನ್ನು ಟ್ರ್ಯಾಕ್‌ಗೆ ಇಳಿಸಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆರು ಬೋಗಿಗಳನ್ನು ಟ್ರೇಲರ್ಗಳ ಮೂಲಕ ಸಾಗಿಸಲಾಗಿತ್ತು. ಪ್ರತಿ ಕೋಚ್ 38.7 ಮೆಟ್ರಿಕ್ ಟನ್ ತೂಕವಿದೆ. ಚಾಲಕ ರಹಿತ ರೈಲು ಆರ್ವಿ ರಸ್ತೆಬೊಮ್ಮಸಂದ್ರ ಲೈನ್ನಲ್ಲಿ ಮುಂದಿನ ದಿನಗಳಲ್ಲಿ ಸಂಚರಿಸಲಿದೆ. ಚೀನಾದ ಸಿಆರ್ಆರ್ಸಿ ನಾನ್ ಜಿಂಗ್ ಪುಜೆನ್ ಕಂ. ಲಿಮಿಟೆಡ್ನಿಂದ ರೈಲು ತಯಾರಾಗಿದೆ.

ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಈ ಚಾಲಕ ರಹಿತ ಮೆಟ್ರೋ ಓಡಾಡಲಿದೆ. ಇನ್ನು ಮೂರು-ನಾಲ್ಕು ತಿಂಗಳ ಕಾಲ 37 ಪರೀಕ್ಷೆಗಳು ನಡೆಯಲಿದೆ. ಟ್ರ್ಯಾಕ್​​ನಲ್ಲಿ ಸುಮಾರು 15 ಮಾದರಿ ಪರೀಕ್ಷೆಗಳು ನಡೆಯಬೇಕಿದೆ. ಒಟ್ಟು 45 ದಿನಗಳವರೆಗೆ ಸಿಗ್ನಲಿಂಗ್ ಪರೀಕ್ಷೆಗಳು ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.

ರೈಲ್ವೆ ಸುರಕ್ಷತೆಯ ಮುಖ್ಯ ಆಯುಕ್ತರು, ರೈಲ್ವೆ ಸುರಕ್ಷತೆ ಮತ್ತು ರೈಲ್ವೆ ಮಂಡಳಿಯಿಂದ ಅನುಮೋದನೆಯ ಬಳಿಕ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚರಿಸಲಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸುಮನಹಳ್ಳಿ ಚಿತಾಗಾರ 10 ದಿನ ತಾತ್ಕಾಲಿಕ ಬಂದ್​

ಮುಂದಿನ ದಿನಗಳಲ್ಲಿ ಕಾಳೇನ ಅಗ್ರಹಾರದಿಂದ ನಾಗವಾರ ಮಾರ್ಗ, ಏರ್‌ಪೋರ್ಟ್‌ ಮಾರ್ಗದಲ್ಲೂ ಡ್ರೈವರ್ ಲೆಸ್‌ ಮೆಟ್ರೋ ಓಡಾಟ ನಡೆಸಲು ಸಕಲ ತಯಾರಿ ನಡೆಸಲಾಗಿದೆ. ಆರಂಭಿಕವಾಗಿ ಹಳದಿ ಮಾರ್ಗದಲ್ಲಿ ಪ್ರಾರಂಭ ಮಾಡಿ ನೀಲಿ ಮಾರ್ಗಕ್ಕೆ ವಿಸ್ತರಣೆ ಬಳಿಕ ನೇರಳೆ, ಹಸಿರು ಮಾರ್ಗಕ್ಕೂ ಈ ವ್ಯವಸ್ಥೆ ಅಳವಡಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ ಎನ್ನಲಾಗಿದೆ.

ಹಳದಿ ಮಾರ್ಗ ಪ್ರಮುಖ ಮೆಟ್ರೋ ಕಾರಿಡಾರ್ ಆಗಿದ್ದು, ದಕ್ಷಿಣ ಬೆಂಗಳೂರನ್ನು ಎಲೆಕ್ಟ್ರಾನಿಕ್ ಸಿಟಿಯೊಂದಿಗೆ ಸಂಪರ್ಕಿಸುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರತಿ ತಿಂಗಳು ನಾನು ಮತ್ತು ಸಿಎಂ ಸೇರಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿ ಮಾಡುತ್ತೇವೆ: ಡಿ ಕೆ ಶಿವಕುಮಾರ್

ಬೂತ್ ಮಟ್ಟದಲ್ಲಿ ಪಕ್ಷದ ಸಂಘಟನೆ ಬಲವರ್ಧನೆಗೆ “ಕಾಂಗ್ರೆಸ್ ಕುಟುಂಬ” ಕಾರ್ಯಕ್ರಮ ರೂಪಿಸಲಾಗುವುದು....

ಬೆಂಗಳೂರು | ಮಾಲ್, ಮನರಂಜನಾ ಕೇಂದ್ರಗಳ ಸುರಕ್ಷತಾ ಕ್ರಮಗಳ ಪರಿಶೀಲನೆಗೆ ಸೂಚನೆ ನೀಡಿದ ಡಿಸಿಎಂ

ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಮಾಲ್‌ಗಳು, ಗೇಮಿಂಗ್ ಜೋನ್‌ಗಳು, ಮನರಂಜನಾ ಕೇಂದ್ರಗಳಲ್ಲಿ ಅಗ್ನಿ ದುರಂತ...

ಬಿಜೆಪಿ ತನ್ನ ಮೂಗಿನ ನೇರದ ಹಿಂದೂ ದೇಶ ನಿರ್ಮಾಣ ಮಾಡುವುದು ಅಸಾಧ್ಯ: ಸಿಎಂ ಸಿದ್ದರಾಮಯ್ಯ

"ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಭಾರತ ಬಹುತ್ವದ ದೇಶ. ಈ ಬಹುತ್ವದ ದೇಶವನ್ನು ನಾಶ...

ಬೆಂಗಳೂರು | ಕಾಲಮಿತಿಯೊಳಗೆ ರಸ್ತೆ ಗುಂಡಿ ಮುಚ್ಚಲು ಸೂಚನೆ ನೀಡಿದ ಬಿಬಿಎಂಪಿ ಮುಖ್ಯ ಆಯುಕ್ತ

"ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ರಸ್ತೆಗಳಲ್ಲಿ ಬಿದ್ದಿರುವ ರಸ್ತೆಗುಂಡಿಗಳನ್ನು...