ರಾಜ್ಯದಲ್ಲಿ ಇಂದು ಸಾಲು ಸಾಲು ಅಪಘಾತ ಸಂಭವಿಸುತ್ತಿವೆ. ಇದೀಗ, ಅಪರಿಚಿತ ವಾಹನವೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಫ್ಲೈಓವರ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಮುಖ್ಯ ರಸ್ತೆಯ ಮುಂಭಾಗದಲ್ಲಿರುವ ಫ್ಲೈ ಓವರ್ ಮೇಲೆ ನಡೆದಿದೆ.
ಮೃತ ಯುವಕ ಪ್ರಸಾದ್ ಎಂದು ಗುರುತಿಸಲಾಗಿದೆ. ಅಪರಿಚಿತ ವಾಹನ ಬೈಕ್‌ಗೆ ಡಿಕ್ಕಿ ರಭಸಕ್ಕೆ ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸದ್ಯ ಪ್ರಸಾದ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸಂಬಂಧಪಟ್ಟ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಲೋಕಸಭೆ ಚುನಾವಣೆ | ಏ.13ರಿಂದ ಅಂಚೆ ಮತದಾನ
ಸ್ಕೂಟರ್ಗೆ ಡಿಕ್ಕಿ ಸವಾರ ಸಾವು
ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ ಪ್ರಕರಣ ನಡೆದಿದ್ದು, ಅಪರಿಚಿತ ವಾಹನವೊಂದು ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕ ಸಾವನ್ನಪ್ಪಿದ ಘಟನೆ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮುಖೇಶ್ (22) ಮೃತ ದುರ್ದೈವಿ. ಏ.12ರ ರಾತ್ರಿ 9.30ರ ಸುಮಾರಿಗೆ ಬೈಕ್ನಲ್ಲಿ ಮುಖೇಶ್ ತಮ್ಮ ಬೈಕ್ ನಲ್ಲಿ ನೈಸ್ ರಸ್ತೆಯ ಹೊಸಕೆರೆಹಳ್ಳಿ ಕಡೆಯಿಂದ ಸೋಂಪುರ ಕ್ಲವರ್ ಲೀಫ್ ಕಡೆಗೆ ತೆರಳುತ್ತಿದ್ದರು. ಈ ವೇಳೆ, ಅತಿ ವೇಗ ಮತ್ತು ನಿರ್ಲಕ್ಷತೆಯಿಂದ ಬಂದ ಅಪರಿಚಿತ ವಾಹನವೊಂದು ಮುಖೇಶ್ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ.
ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಮುಖೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಕೆಂಗೇರಿ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.