ಸಿಎಂ ಸಿದ್ದರಾಮಯ್ಯ ಅವರು ಕೃಷ್ಣರಾಜಸಾಗರ ಅಣೆಕಟ್ಟಿಗೆ (ಕೆಆರ್‌ಎಸ್) ಬಾಗಿನ ಅರ್ಪಿಸುವ ಮೂಲಕ ದಾಖಲೆ ಬರೆದಿದ್ದಾರೆ.
ಕೆಆರ್‌ಎಸ್ 93 ವರ್ಷಗಳ ಇತಿಹಾಸದಲ್ಲಿ ಜೂನ್ ತಿಂಗಳಿನಲ್ಲಿ ಭರ್ತಿ ಆಗಿರಲಿಲ್ಲ. ಆದರೆ ಜಲಾಶಯ ನಿರ್ಮಾಣವಾದ ಬಳಿಕ ಮೊದಲ ಬಾರಿಗೆ ಭರ್ತಿಯಾಗಿದೆ.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು 1979 ರಲ್ಲಿ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಮೊದಲು ಚಾಲನೆ ನೀಡಿದ್ದರು. ಅಂದಿನಿಂದ ಇಂದಿನವರೆಗೂ ಜೂನ್ ತಿಂಗಳಲ್ಲಿ ಯಾವ ಸಿಎಂ ಕೂಡ ಬಾಗಿನ ಸಲ್ಲಿಸಿರಲಿಲ್ಲ. ಹೀಗಾಗಿ ಜೂನ್ ತಿಂಗಳಿನಲ್ಲೇ ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಮೊದಲ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರವಾಗಿದ್ದಾರೆ. ಇಲ್ಲಿಯವರೆಗೆ ಒಟ್ಟು 4ನೇ ಬಾರಿ ಕೆಆರ್‌ಎಸ್‌ಗೆ ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಿದ್ದಾರೆ.
ಇದನ್ನು ಓದಿದ್ದೀರಾ? ದಿನ ಸಂಪಾದಕೀಯ | ನಾಗರಹೊಳೆ ಬುಡಕಟ್ಟು ಜನಾಂಗಕ್ಕೆ ಸಿಗಲಿ ನ್ಯಾಯ
ಬಾಗಿನ ಕಾರ್ಯಕ್ರಮ ಹಿನ್ನೆಲೆ ಕನ್ನಡ ಬಾವುಟದಿಂದ ಕನ್ನಂಬಾಡಿ ಕಟ್ಟೆಯನ್ನು ಶೃಂಗರಿಸಲಾಗಿತ್ತು. ಮೈಸೂರಿನ ಸರ್ಕಾರಿ ಅತಿಥಿ ಗೃಹದಿಂದ ಬಸ್ಸಿನಲ್ಲಿ ಸಿಎಂ, ಡಿಸಿಎಂ ಹಾಗೂ ಸಚಿವ ಸಂಪುಟ ಸದಸ್ಯರು ಒಂದೇ ಬಸ್ ನಲ್ಲಿ ಪ್ರಯಾಣಿಸಿ ಕೆಆರ್‌ಎಸ್‌ಗೆ ಆಗಮಿಸಿದರು.
ಸಿಎಂ ಜೊತೆಗೆ ಕಾವೇರಿ ಮಾತೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಬಾಗಿನ ಅರ್ಪಿಸಿದರು. ಸಿಎಂಗೆ ಸಚಿವರಾದ, ಚಲುವರಾಯಸ್ವಾಮಿ, ಮಹದೇವಪ್ಪ, ಬೋಸರಾಜು, ವೆಂಕಟೇಶ್ ಹಾಗೂ ಶಾಸಕರು ಜೊತೆ ನೀಡಿದರು.