ಅಸ್ಪೃಶ್ಯತೆ, ಅವಮಾನವನ್ನು ಎದುರಿಸಿದರೂ, ಜ್ಞಾನ ಸಂಪಾದನೆ, ಜೀವನದಲ್ಲಿ ಕಲಿತ ಪಾಠಗಳಿಂದ ಸಾದನೆ ಮಾಡಿ ಸಂವಿಧಾನ ಕೊಟ್ಟವರು ಡಾ.ಬಿಆರ್ ಅಂಬೇಡ್ಕರ್ ಎಂದು ದಾವಣಗೆರೆಯ ಸ್ವಾಭಿಮಾನಿ ಬಳಗದ ಸಂಸ್ಥಾಪಕ, ಇನ್ ಸೈಟ್ಸ್ ಐಎಎಸ್ ಸಂಸ್ಥಾಪಕ ನಿರ್ದೇಶಕರು, ರಾಜ್ಯಾಧ್ಯಕ್ಷರಾದ ಜಿ.ಬಿ. ವಿನಯ್ ಕುಮಾರ್ ಅಭಿಪ್ರಾಯ ಪಟ್ಟರು.
ಪೂಜಾ ಭಗವತ್ ಸ್ಮಾರಕ ಮಹಾಜನ ವಿದ್ಯಾಕೇಂದ್ರದ ಪ್ರವಾಸಿ ಇಲಾಖೆಯ ಸಭಾಂಗಣದಲ್ಲಿ ನಡೆದ ಐಎಎಸ್/ಕೆಎಎಸ್ ಒಂದು ದಿನದ ಉಚಿತ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸುದೀರ್ಘ ಸಂವಾದದ ನಂತರ ಅವರನ್ನು ಮೈಸೂರಿನ ಯುವ ಅಭಿಮಾನಿ ಬಳಗದಿಂದ ವಿಶೇಷವಾಗಿ ಸನ್ಮಾನಿಸಲಾಯಿತು.

ಈ ವೇಳೆ ಮಾತನಾಡಿದ ಅವರು, “ಏಪ್ರಿಲ್ 14, 1891 ಅಂಬೇಡ್ಕರ್ ಅವರ ಜನ್ಮದಿನ ಇನ್ನೇನು ಕೆಲವೇ ದಿವಸಗಳಲ್ಲಿ ನಾವು ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿದ್ದೇವೆ. ಆದರೆ ಅವರ ಶಿಕ್ಷಣ, ಬದುಕು ಸಂಘರ್ಷಗಳಿಂದ ಕೂಡಿದೆ. ಅಂದಿನ ಸಮಯದಲ್ಲಿ ಅಸ್ಪೃಶ್ಯ ಜಾತಿಯಲ್ಲಿ ಹುಟ್ಟಿದವರನ್ನು ಯಾರು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ, ಮುಟ್ಟುತ್ತಿರಲಿಲ್ಲ. ನೆರಳು ಬಿದ್ದರೆ ಮನೆಗೆ ಹೋಗಿ ಸ್ನಾನ ಮಾಡಬೇಕು ಎನ್ನುವ ಪರಿಸ್ಥಿತಿ ಇತ್ತು, ಅಂಬೇಡ್ಕರ್ ಶಾಲೆಗೆ ಹೋದರೆ ಗೋಣಿಚೀಲವನ್ನು ತೆಗೆದುಕೊಂಡು ಹೋಗಿ ಕುಳಿತುಕೊಂಡು, ಮತ್ತೆ ವಾಪಸ್ ಬರುವಾಗ ಅದನ್ನು ಮನೆಗೆ ಜೊತೆಯಲ್ಲೇ ತರುವ ಪರಿಸ್ಥಿತಿ ಅಂದಿನ ದಿನಗಳಲ್ಲಿತ್ತು. ಇಷ್ಟೆಲ್ಲಾ ಅವಮಾನ ಅಸಹನೆಯನ್ನು ಎದುರಿಸಿದರೂ, ಅಂಬೇಡ್ಕರ್ ರವರು ಎದೆಗುಂದದೆ ವಿದ್ಯಾಭ್ಯಾಸ, ಸಾಧನೆ ಮುಂದುವರಿಸಿದರು. ಅಂತಿಮವಾಗಿ ಅವರ ವಿದ್ವತ್ತು 1948ರ ಸಂವಿಧಾನ ರಚನೆಯಲ್ಲಿ ಪ್ರಮುಖವಾದ ಪಾತ್ರವಹಿಸಿತ್ತು” ಎಂದು ತಿಳಿಸಿದರು.

“ಇಂದು ನಾವು ನೀವು ಇಲ್ಲಿ ಕುಳಿತು ಮಾತನಾಡುತ್ತಿದ್ದೇವೆ ದೇಶದಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ ಎಂದರೆ ಅದಕ್ಕೆ ಎಂದರೆ ಅದಕ್ಕೆ ಅಂಬೇಡ್ಕರ್ ಬರೆದ ಸಂವಿಧಾನವೇ ಕಾರಣ. ಅಂತಹ ಜ್ಞಾನ ಅಂಬೇಡ್ಕರ್ ಅವರಲ್ಲಿದ್ದು. ಇದಕ್ಕೆಲ್ಲ ಕಾರಣವಾಗಿದ್ದು ಅವರು ಬದುಕಿನಲ್ಲಿ ಸಂಪಾದಿಸಿದ ಜ್ಞಾನ ಮತ್ತು ಅವರು ಬದುಕಿನಲ್ಲಿ ಕಲಿತ ಪಾಠಗಳಿಂದ ಅವರ ಸಾಧನೆ ಸಾದ್ಯವಾಗಿದೆ. ಅಂತಹ ಸಾಧನೆಯನ್ನು ನಾವು ಕೂಡ ಮೈಗೂಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
“ನಾವೇನಾದರೂ ದೊಡ್ಡ ಕನಸು ಕಂಡರೆ ಅದು ಸಮಾಜದ ಸೇವೆ ಮಾಡುವ ಗುರಿಯನ್ನು ಹೊಂದಿರಬೇಕು. ನಮ್ಮ ಸ್ವಾರ್ಥಕ್ಕಾಗಿ ನಾವು ಕನಸನ್ನು ಕಾಣಬಾರದು. ನಮ್ಮ ಕೆಲಸದಲ್ಲಿ ಯಾವಾಗ ಒಳ್ಳೆಯ ಉದ್ದೇಶ, ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ನಮ್ಮ ಕೆಲಸದ ಬಗ್ಗೆ ನಿರ್ದಿಷ್ಟತೆ ಇರುತ್ತದೆಯೋ, ಆಗ ನೀವು ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಸಾಧನೆಗೆ ಅಧ್ಯಯನ, ಓದು ಅತಿ ಮುಖ್ಯವಾಗುತ್ತದೆ. ಜೊತೆಗೆ ಸಮಾಜದಲ್ಲಿ ಏನು ನಡೆಯುತ್ತಿದೆ ಎನ್ನುವ ಅರಿವು ಕೂಡ ಮುಖ್ಯವಾಗುತ್ತದೆ” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಲ್ಪೆಯಲ್ಲಿ ಮಹಿಳೆಯನ್ನು ಕಟ್ಟಿ ಹಲ್ಲೆ, ಕ್ರಮಕ್ಕೆ ಮಹಿಳಾ ಒಕ್ಕೂಟ ಆಗ್ರಹ.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಡಾ. ಸಿ.ಕೆ. ರೇಣುಕಾಚಾರ್ಯ, ಒಕ್ಕಲಿಗ ಯುವ ಬ್ರಿಗೇಡ್ ಅಧ್ಯಕ್ಷರಾದ ಶ್ರೀ ನಂಜೇಗೌಡ ನಂಜುಂಡ, ಶ್ರಿ ಸತ್ಯನಾರಾಯಣ, ಪತ್ರಕರ್ತರಾದ ಶ್ರೀ ಅಂಶಿ ಪ್ರಸನ್ನಕುಮಾರ್, ಡಾ. ಭಾವನ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
