ದಾವಣಗೆರೆ | ಅಸ್ಪೃಶ್ಯತೆ, ಅವಮಾನ ಎದುರಿಸಿ, ಜ್ಞಾನ ಸಂಪಾದನೆಯಿಂದ ಸಂವಿಧಾನ ಕೊಟ್ಟವರು ಅಂಬೇಡ್ಕರ್: ಜಿಬಿ ವಿನಯ್ ಕುಮಾರ್

Date:

ಅಸ್ಪೃಶ್ಯತೆ, ಅವಮಾನವನ್ನು ಎದುರಿಸಿದರೂ, ಜ್ಞಾನ ಸಂಪಾದನೆ, ಜೀವನದಲ್ಲಿ ಕಲಿತ ಪಾಠಗಳಿಂದ ಸಾದನೆ ಮಾಡಿ ಸಂವಿಧಾನ ಕೊಟ್ಟವರು ಡಾ.ಬಿಆರ್ ಅಂಬೇಡ್ಕರ್ ಎಂದು ದಾವಣಗೆರೆಯ ಸ್ವಾಭಿಮಾನಿ ಬಳಗದ ಸಂಸ್ಥಾಪಕ, ಇನ್ ಸೈಟ್ಸ್ ಐಎಎಸ್‌ ಸಂಸ್ಥಾಪಕ ನಿರ್ದೇಶಕರು, ರಾಜ್ಯಾಧ್ಯಕ್ಷರಾದ ಜಿ.ಬಿ. ವಿನಯ್ ಕುಮಾರ್ ಅಭಿಪ್ರಾಯ ಪಟ್ಟರು.

- Advertisement -

ಪೂಜಾ ಭಗವತ್ ಸ್ಮಾರಕ ಮಹಾಜನ ವಿದ್ಯಾಕೇಂದ್ರದ ಪ್ರವಾಸಿ ಇಲಾಖೆಯ ಸಭಾಂಗಣದಲ್ಲಿ ನಡೆದ ಐಎಎಸ್‌/ಕೆಎಎಸ್ ಒಂದು ದಿನದ ಉಚಿತ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸುದೀರ್ಘ ಸಂವಾದದ ನಂತರ ಅವರನ್ನು ಮೈಸೂರಿನ ಯುವ ಅಭಿಮಾನಿ ಬಳಗದಿಂದ ವಿಶೇಷವಾಗಿ ಸನ್ಮಾನಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...
1001746773

ಈ ವೇಳೆ ಮಾತನಾಡಿದ ಅವರು, “ಏಪ್ರಿಲ್ 14, 1891 ಅಂಬೇಡ್ಕರ್ ಅವರ ಜನ್ಮದಿನ ಇನ್ನೇನು ಕೆಲವೇ ದಿವಸಗಳಲ್ಲಿ ನಾವು ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಿದ್ದೇವೆ. ಆದರೆ ಅವರ ಶಿಕ್ಷಣ, ಬದುಕು ಸಂಘರ್ಷಗಳಿಂದ ಕೂಡಿದೆ. ಅಂದಿನ ಸಮಯದಲ್ಲಿ ಅಸ್ಪೃಶ್ಯ ಜಾತಿಯಲ್ಲಿ ಹುಟ್ಟಿದವರನ್ನು ಯಾರು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ, ಮುಟ್ಟುತ್ತಿರಲಿಲ್ಲ. ನೆರಳು ಬಿದ್ದರೆ ಮನೆಗೆ ಹೋಗಿ ಸ್ನಾನ ಮಾಡಬೇಕು ಎನ್ನುವ ಪರಿಸ್ಥಿತಿ ಇತ್ತು, ಅಂಬೇಡ್ಕರ್ ಶಾಲೆಗೆ ಹೋದರೆ ಗೋಣಿಚೀಲವನ್ನು ತೆಗೆದುಕೊಂಡು ಹೋಗಿ ಕುಳಿತುಕೊಂಡು, ಮತ್ತೆ ವಾಪಸ್ ಬರುವಾಗ ಅದನ್ನು ಮನೆಗೆ ಜೊತೆಯಲ್ಲೇ ತರುವ ಪರಿಸ್ಥಿತಿ ಅಂದಿನ ದಿನಗಳಲ್ಲಿತ್ತು. ಇಷ್ಟೆಲ್ಲಾ ಅವಮಾನ ಅಸಹನೆಯನ್ನು ಎದುರಿಸಿದರೂ, ಅಂಬೇಡ್ಕರ್ ರವರು ಎದೆಗುಂದದೆ ವಿದ್ಯಾಭ್ಯಾಸ, ಸಾಧನೆ ಮುಂದುವರಿಸಿದರು. ಅಂತಿಮವಾಗಿ ಅವರ ವಿದ್ವತ್ತು 1948ರ ಸಂವಿಧಾನ ರಚನೆಯಲ್ಲಿ ಪ್ರಮುಖವಾದ ಪಾತ್ರವಹಿಸಿತ್ತು” ಎಂದು ತಿಳಿಸಿದರು.

1001746774

“ಇಂದು ನಾವು ನೀವು ಇಲ್ಲಿ ಕುಳಿತು ಮಾತನಾಡುತ್ತಿದ್ದೇವೆ ದೇಶದಲ್ಲಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ ಎಂದರೆ ಅದಕ್ಕೆ ಎಂದರೆ ಅದಕ್ಕೆ ಅಂಬೇಡ್ಕರ್ ಬರೆದ ಸಂವಿಧಾನವೇ ಕಾರಣ. ಅಂತಹ ಜ್ಞಾನ ಅಂಬೇಡ್ಕರ್ ಅವರಲ್ಲಿದ್ದು. ಇದಕ್ಕೆಲ್ಲ ಕಾರಣವಾಗಿದ್ದು ಅವರು ಬದುಕಿನಲ್ಲಿ ಸಂಪಾದಿಸಿದ ಜ್ಞಾನ ಮತ್ತು ಅವರು ಬದುಕಿನಲ್ಲಿ ಕಲಿತ ಪಾಠಗಳಿಂದ ಅವರ ಸಾಧನೆ ಸಾದ್ಯವಾಗಿದೆ. ಅಂತಹ ಸಾಧನೆಯನ್ನು ನಾವು ಕೂಡ ಮೈಗೂಡಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.

“ನಾವೇನಾದರೂ ದೊಡ್ಡ ಕನಸು ಕಂಡರೆ ಅದು ಸಮಾಜದ ಸೇವೆ ಮಾಡುವ ಗುರಿಯನ್ನು ಹೊಂದಿರಬೇಕು. ನಮ್ಮ ಸ್ವಾರ್ಥಕ್ಕಾಗಿ ನಾವು ಕನಸನ್ನು ಕಾಣಬಾರದು. ನಮ್ಮ ಕೆಲಸದಲ್ಲಿ ಯಾವಾಗ ಒಳ್ಳೆಯ ಉದ್ದೇಶ, ಕೆಲಸದಲ್ಲಿ ಪ್ರಾಮಾಣಿಕತೆ ಮತ್ತು ನಮ್ಮ ಕೆಲಸದ ಬಗ್ಗೆ ನಿರ್ದಿಷ್ಟತೆ ಇರುತ್ತದೆಯೋ, ಆಗ ನೀವು ಗುರಿ ಮುಟ್ಟಲು ಸಾಧ್ಯವಾಗುತ್ತದೆ. ಸಾಧನೆಗೆ ಅಧ್ಯಯನ, ಓದು ಅತಿ ಮುಖ್ಯವಾಗುತ್ತದೆ. ಜೊತೆಗೆ ಸಮಾಜದಲ್ಲಿ ಏನು ನಡೆಯುತ್ತಿದೆ ಎನ್ನುವ ಅರಿವು ಕೂಡ ಮುಖ್ಯವಾಗುತ್ತದೆ” ಎಂದು ಸಲಹೆ ನೀಡಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಮಲ್ಪೆಯಲ್ಲಿ ಮಹಿಳೆಯನ್ನು ಕಟ್ಟಿ ಹಲ್ಲೆ, ಕ್ರಮಕ್ಕೆ ಮಹಿಳಾ ಒಕ್ಕೂಟ ಆಗ್ರಹ.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಡಾ. ಸಿ.ಕೆ. ರೇಣುಕಾಚಾರ್ಯ, ಒಕ್ಕಲಿಗ ಯುವ ಬ್ರಿಗೇಡ್ ಅಧ್ಯಕ್ಷರಾದ ಶ್ರೀ ನಂಜೇಗೌಡ ನಂಜುಂಡ, ಶ್ರಿ ಸತ್ಯನಾರಾಯಣ, ಪತ್ರಕರ್ತರಾದ ಶ್ರೀ ಅಂಶಿ ಪ್ರಸನ್ನಕುಮಾರ್, ಡಾ. ಭಾವನ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು...

ಹವಾಮಾನ | ರಾಜ್ಯದಲ್ಲಿ ಮುಂದಿನ 2 ದಿನ ಭಾರಿ ಮಳೆ: 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಬಿರುಗಾಳಿ ಸಹಿತ...

ಮೈಸೂರು | ಅ.13ರಂದು ಯುವ ದಸರಾ ಉದ್ಘಾಟಿಸಲಿರುವ ನಟ ಪ್ರಭುದೇವ್‌

2026ರ ಯುವ ದಸರಾ ಕಾರ್ಯಕ್ರಮವನ್ನು ಅಕ್ಟೋಬರ್ 13ರಂದು ಖ್ಯಾತ ನೃತ್ಯ ನಿರ್ದೇಶಕ...

‘SIR’ ಪರಿಶೋಧ-ಪ್ರತಿರೋಧ: ಸೆ.29ರಂದು ಮೈಸೂರಿನಲ್ಲಿ ಪ್ರಕಾಶ್ ರಾಜ್ ಸಂವಾದ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (Special Intensive Revision-SIR) ಪ್ರಕ್ರಿಯೆ...