ದಾವಣಗೆರೆ | ಪಂಚಪೀಠಗಳು, ವಿರಕ್ತರು,ಶರಣರು ಒಗ್ಗೂಡಿದರೆ ವೀರಶೈವ ಲಿಂಗಾಯತ ಸಮಾಜ ಸದೃಢವಾಗಲಿದೆ; ಪಂಚಾಚಾರ್ಯರು

Date:

Advertisements

“ಸಣ್ಣ ಪುಟ್ಟ ವಿಚಾರ ಬಿಟ್ಟು ಒಟ್ಟಾಗಿ ನೆಡೆಯುವ ಸಂಕಲ್ಪ ಶಿವಾಚಾರ್ಯರಲ್ಲಿ ಬರಬೇಕು. ಪಂಚಪೀಠಗಳ ಪಂಚಾಚಾರ್ಯರು, ವಿರಕ್ತರು, ಶರಣರು ಒಗ್ಗೂಡಿ ಹೆಜ್ಜೆ ಹಾಕಿದಲ್ಲಿ ಸದೃಢ ವೀರಶೈವ ಲಿಂಗಾಯತ ಸಮಾಜ ಕಟ್ಟಿ ಬೆಳೆಸಲು ಸಾಧ್ಯವಾಗುತ್ತದೆ” ಎಂದು ಪಂಚಪೀಠಗಳ ಪಂಚಾಚಾರ್ಯರು ದಾವಣಗೆರೆಯಲ್ಲಿ ನಡೆದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ದಾವಣಗೆರೆ ನಗರದ ರೇಣುಕಾ ಮಂದಿರದಲ್ಲಿ ಜರುಗಿದ ವೀರಶೈವ ಪೀಠಾಚಾರ್ಯರ ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವ ವೇಳೆ ಮಾತನಾಡಿದ ಬಾಳೆಹೊನ್ನೂರಿನ ರಂಭಾಪುರಿ ಡಾ.ವೀರಸೋಮೇಶ್ವರ ಶ್ರೀಗಳು “ಕಳೆದ 16 ವರ್ಷಗಳಿಂದ ಭಕ್ತರು ನಿರೀಕ್ಷಿಸುತ್ತಿದ್ದ ಶುಭ ಘಳಿಗೆ ಇಂದು ಕೂಡಿ ಬಂದಿದೆ. ಮುಂದಿನ ದಿನಗಳಲ್ಲಿ ಶಿವಾಚಾರ್ಯ ಸಮೂಹ, ಭಕ್ತರು ನಾವೆಲ್ಲ ಒಂದೇ ಎಂಬ ಭಾವನೆಯಿಂದ ಮುನ್ನಡೆದಿದ್ದಾದರೆ ಸಮಾಜದ ಹಿತದೃಷ್ಟಿಯಿಂದ ಗಟ್ಟಿ ಹೆಜ್ಜೆ ಇಡಲು ಸಾಧ್ಯವಾಗುತ್ತದೆ. ಶಾಮನೂರು ಶಿವಶಂಕರಪ್ಪನವರ ಒತ್ತಾಸೆಯಿಂದ ಇಂದು ಇದೆಲ್ಲ ಸಾಧ್ಯವಾಗಿದೆ. ಇಂದು ಜಾತಿ ಜಾತಿಗಳ ಹೆಸರಿನಲ್ಲಿ ಸಮಾಜ ಛಿದ್ರ ಛಿದ್ರವಾಗುತ್ತಿರುವುದನ್ನು ನೋಡಿ ಮನಸ್ಸಿಗೆ ಬಹಳ ವೇದನೆಯಾಗುತ್ತಿದೆ. ಪೂರ್ವದ ಆಚಾರ್ಯರು ಜಾತಿ ಮತ ಪಂಥಗಳನ್ನು ಮೀರಿ ಭಾವೈಕ್ಯತೆಯನ್ನು ಮೂಡಿಸುವ ದೃಷ್ಟಿಯಿಂದ ದೇಶದಾದ್ಯಂತ ಪಂಚ ಪೀಠಗಳನ್ನು ಸ್ಥಾಪಿಸಿದ್ದಾರೆ. ಅಸ್ಪೃಶ್ಯರ ಉದ್ದಾರ, ಮಹಿಳೆಯರಿಗೆ ಸಮಾನ ಸ್ಥಾನ ಕಲ್ಪಿಸುವ ಕಾರ್ಯವನ್ನು ಸಹಸ್ರಾರು ವರುಷಗಳ ಹಿಂದೆಯೇ ಮಾಡಿದ್ದಾರೆ. ಸಮಾಜದ ಒಳಪಂಗಡಗಳು ಮೂಲ ನೆಲೆಯಲ್ಲಿ ಬರುವ ಅವಶ್ಯಕತೆಯಿದೆ” ಎಂದು ಆಶಯ ವ್ಯಕ್ತಪಡಿಸಿದರು.

“ಇವನಾರವ ಇವನಾರವ ಎಂದೆನಿಸದಿರಯ್ಯಾ ಎಂದು ಭಕ್ತಿಭಂಡಾರಿ ಬಸವಣ್ಣನವರೇ ಹೇಳಿದ್ದಾರೆ. ಕೆಲ ಮಠಾಧೀಶರು ಲಿಂಗಾಯತ, ವೀರಶೈವ ಬೇರೆ ಬೇರೆ ಎನ್ನುವ ಕಂದಕ ಸೃಷ್ಟಿ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತ ಮಠಗಳು, ಪಂಚಪೀಠಗಳು ಸಮಾಜಕ್ಕೆ ಉತ್ತಮ ಸಹಬಾಳ್ವೆಯ ಸಂದೇಶ ನೀಡುತ್ತಿವೆ. ವೀರಶೈವ ಲಿಂಗಾಯತ ಮಠಗಳು, ಪಂಚಪೀಠಗಳು ಸಮಾಜಕ್ಕೆ ಉತ್ತಮ ಸಹಬಾಳ್ವೆಯ ಸಂದೇಶ. ವೀರ ಗಂಗಾಧರ ಶ್ರೀಗಳು ಶಂಕರ, ಮಾಧ್ವ, ಗೌತಮ, ಮಹಾವೀರ , ಕ್ರಿಸ್ತ , ಪೈಗಂಬರ್, ಸನಾತನಕ್ಕೆ ಜಯವಾಗಲಿ ಎಂದು ಅಂದೇ ಹೇಳಿದ್ದಾರೆ. ಲಿಂಗಾಯತ ಎನ್ನುವ ಪದ ರೂಢಿಯಿಂದ ಬಂದಿದೆ. 12 ನೇ ಶತಮಾನದಲ್ಲಿ ಬಸವಣ್ಣ ಈ ಧರ್ಮವನ್ನು ಬೆಳೆಸಿ ಉದ್ದಾರ ಮಾಡಿದರು.‌ ಕೆಲವರು ಶರಣರ ಚಿಂತನೆ ಅಷ್ಟೇ ಹೇಳುತ್ತಾರೆ.‌ ಬಸವಾದಿ ಶರಣರ ಸಾಮಾಜಿಕ ಚಿಂತನೆಗಳನ್ನು ಪಂಚಪೀಠಗಳ ಯಾವತ್ತೂ ಹೇಳುತ್ತವೆ” ಎಂದು ಸ್ಪಷ್ಟಪಡಿಸಿದರು.

Advertisements

ಸಮಾರಂಭವನ್ನು ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪನವರು ಮಾತನಾಡಿ “ಪಂಚ ಪೀಠಾಧೀಶರನ್ನು ಒಗ್ಗೂಡಿಸುವ ಆಶಯ ಇಂದು ಸಾಧ್ಯವಾಗಿದ್ದು ಸಂತಸ ತಂದಿದೆ. ವೀರಶೈವ ಲಿಂಗಾಯತ ಸಮಾಜ ಒಗ್ಗೂಡಿಸಲು ಸಹಕಾರಿಯಾಗಲಿದೆ” ಎಂದು ಅಭಿಪ್ರಾಯಪಟ್ಟರು

1002360758

ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಬಿದರಿ ಮಾತನಾಡಿ “ವೀರಶೈವ ಮಹಾಸಭೆಯ ಇತಿಹಾಸದಲ್ಲಿ ಇಂದು ಸುವರ್ಣ ಘಳಿಗೆ ಇದು ಮೊದಲನೆಯ ಹೆಜ್ಜೆ ಆಗಿದ್ದು ಮುಂದಿನ ದಿನಗಳಲ್ಲಿ ಗುರು-ವಿರಕ್ತರು ಮತ್ತು ಶರಣ ಸಂಪ್ರದಾಯವನ್ನು ಒಗ್ಗೂಡಿಸಿ ಭವ್ಯ ಕಾರ್ಯಕ್ರಮ ಮಾಡುವ ಉದ್ದೇಶವಿದೆ. 1975ರ ಪೂರ್ವದಲ್ಲಿ ಆರ್ಥಿಕ ಮೀಸಲಾತಿ ಇದ್ದುದು, ನಂತರ ಜಾತಿ ಆಧಾರಿತ ಮೀಸಲಾತಿ ಪ್ರಾರಂಭದ ನಂತರ ಈ ಸಮಸ್ಯೆಗಳು ಉದ್ಭವಿಸಿವೆ” ಎಂದರು.

ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಮಾತನಾಡಿ “ಜಾಗತಿಕವಾಗಿ ದೊಡ್ಡದಾದ ವೀರಶೈವ ಲಿಂಗಾಯತ ಸಮಗ್ರ ಅಭಿವೃದ್ಧಿ ನಮ್ಮ ಗುರಿಯಾಗಲಿ” ಎಂದರು.

1002360754

ಸಾನ್ನಿಧ್ಯ ವಹಿಸಿದ ಶ್ರೀ ಹಿಮವತ್ತೇದಾರ ಭೀಮಾಶಂಕರಲಿಂಗ ಜಗದ್ಗುರುಗಳು ಮಾತನಾಡಿ “ಜಾತಿ ಜನಗಣತಿ ಸಂದರ್ಭದಲ್ಲಿ ನೀಡುವ ನಮೂನೆಗಳ ಪರಿಷ್ಕರಣೆ ಆಗಬೇಕು. ಧರ್ಮ, ಜಾತಿ, ಉಪಜಾತಿಗಳನ್ನು ಪ್ರತ್ಯೇಕ ಕಾಲಂನಲ್ಲಿ ತೋರಿಸುವಂತೆ ಜಾತಿ ಗಣತಿ ನಮೂನೆಯಲ್ಲಿ ಪರಿಷ್ಕರಣೆ ಕೇಂದ್ರ ಸರ್ಕಾರದಿಂದ ಆಗಬೇಕು. ಇದನ್ನು ಮನದಟ್ಟು ಮಾಡುವ ಕೆಲಸ ಎಲ್ಲ ಪಕ್ಷಗಳ ಸಂಸದರು ಮಾಡುವ ಅವಶ್ಯಕತೆಯಿದೆ” ಎಂದರು.

1002360756

ಶ್ರೀಶೈಲ ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶ್ರೀಗಳು ಮಾತನಾಡಿ “ವೀರಶೈವ ಧರ್ಮ ಸನಾತನ ಧರ್ಮವಾಗಿದೆ. ಇಂದು ವೀರಶೈವ ಲಿಂಗಾಯತ ಸಮಾಜವನ್ನು ಹೆಚ್ಚು ಹೆಚ್ಚಾಗಿ ಸಂಘಟಿಸುವ ಕಾಲ ಬಂದಿದೆ. ಪ್ರತಿಯೊಬ್ಬರೂ ಒಗ್ಗಟ್ಟಾಗಿ ಧರ್ಮ ಕಟ್ಟುವ ಕೆಲಸ ಮಾಡಬೇಕಾಗಿದೆ. ಬರಲಿರುವ ಜಾತಿ ಗಣತಿಯಲ್ಲಿ ಯಾರಿಗೂ ಅನ್ಯಾಯವಾಗದಂತೆ ಕಾರ್ಯ ನಿರ್ವಹಿಸಬೇಕಾಗಿದೆ. ಪೀಠಾಚಾರ್ಯರು ಒಂದಾಗಿದ್ದಾರೆ. ಶಿವಾಚಾರ್ಯರು ಮತ್ತು ಸಮಾಜದ ಜನತೆ ಒಗ್ಗಟ್ಟಿನಿಂದ ಕೆಲಸ ಮಾಡಲಿ” ಎಂದು ಕರೆ ನೀಡಿದರು.‌

1002360753

ಶ್ರೀ ಕಾಶಿ ಪೀಠದ ಡಾ. ಚಂದ್ರಶೇಖರ ಶ್ರೀಗಳು ಮಾತನಾಡಿ “ವೀರಶೈವರನ್ನು ಅವರ ವೇಷ ಭೂಷಣಗಳಿಂದ ಗುರುತಿಸದೇ ಅವರ ಆಚಾರ ವಿಚಾರಗಳಿಂದ ಗುರುತಿಸುವಂತಾಗಬೇಕು. ಅ.ಭಾ.ವೀರಶೈವ ಮಹಾಸಭೆ ತನ್ನ ಕಾರ್ಯ ಕ್ಷೇತ್ರವನ್ನು ದೇಶದ ಉತ್ತರ ಭಾಗಕ್ಕೂ ಪಸರಿಸಬೇಕು” ಎಂದರು.

ಶ್ರೀ ಉಜ್ಜಯಿನಿ ಸಿದ್ದಲಿಂಗ ಜಗದ್ಗುರುಗಳು ಮಾತನಾಡಿ “ಹಲವಾರು ಕಾರಣಗಳಿಂದ ಸಮಾಜ ಕವಲು ದಾರಿಯಲ್ಲಿ ಹೋಗುತ್ತಿದೆ. ಅದನ್ನು ಸರಿಪಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ವೀರಶೈವ ಲಿಂಗಾಯತ ಸಮಾಜದ ವಿಚಾರ ಬಂದಾಗ ಎಲ್ಲ ಪಕ್ಷ ಭೇದಗಳನ್ನು ಜಾತಿ ಭೇದಗಳನ್ನು ಮರೆತು ಮುನ್ನಡೆಯಬೇಕು.‌ ವೀರಶೈವ ಸಮುದಾಯ ಮತ್ತು ಶಿವಾಚಾರ್ಯರ ಇಷ್ಟು ದಿನಗಳ ಆತಂಕ, ದುಗುಡಗಳು ಕಳೆಯುವ ಸನ್ನಿವೇಶ ಇಂದು ಶೃಂಗ ಸಮ್ಮೇಳನದಲ್ಲಿ ವ್ಯಕ್ತವಾಗಿದೆ.‌ ಎಲ್ಲರೂ ಒಟ್ಟಾಗಿ ಹೋಗುವ ಸೂಚನೆ ಮತ್ತು ಸಂದೇಶ ಶೃಂಗ ಸಮ್ಮೇಳನದಿಂದ ಹೊರಹೊಮ್ಮಿದೆ” ಎಂದು ಸಂತಸ ವ್ಯಕ್ತಪಡಿಸಿದರು.‌

1002360755

ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ, ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ, ಬಿ.ಜೆ.ಪಿ. ರಾಜ್ಯಾಧ್ಯಕ್ಷ-ಶಾಸಕ ಬಿ.ವೈ.ವಿಜಯೇಂದ್ರ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಭಾಗವಹಿಸಿ ಮಾತನಾಡಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪ್ರತ್ಯೇಕ ಲಿಂಗಾಯತ ಧರ್ಮ ಬೆಂಬಲಿಸಿ, ಅವರ ಮೇಲೆಯೇ ಈ ಸರ್ಕಾರ ಲಾಠಿ ಪ್ರಹಾರ ನೆಡೆಸಿದೆ;ರಂಭಾಪುರಿ ಶ್ರೀ

ವೀರಶೈವ ಲಿಂಗಾಯತ ಪೀಠಾಚಾರ್ಯರ ಮತ್ತು ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಹಂಪಿಸಾವಿರದೇವರಮಠದ ವಾಮದೇವ ಮಹಂತ ಶಿವಾಚಾರ್ಯ ಶ್ರೀ, ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಶ್ರೀ, ವಿಶ್ವಪ್ರಭುದೇವ ಶಿವಾಚಾರ್ಯ ಶ್ರೀ ಸೇರಿದಂತೆ ಕರ್ನಾಟಕ ಆಂದ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳ ಶಿವಾಚಾರ್ಯರು ಪಾಲ್ಗೊಂಡಿದ್ದರು.

ವಿಶೇಷ ಆಹ್ವಾನಿತರಾಗಿ ಅ.ಭಾ.ವೀ.ಮಹಾಸಭೆ ಉಪಾಧ್ಯಕ್ಷರಾದ ಆಥಣಿ ವೀರಣ್ಣ, ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಡಾ.ಎ.ಎಚ್. ಶಿವಯೋಗಿಸ್ವಾಮಿ, ಶಿವಶಂಕರ ಶಾಸ್ತ್ರಿ, ಕೆ.ಎಂ.ಸುರೇಶ್, ಶಾಂತಾ ಆನಂದ ಹಾಗೂ ವೀರಶೈವ ಲಿಂಗಾಯತ ಸಮಾಜದ ಮುಖಂಡರು, ಜನತೆ ಭಾಗವಹಿಸಿದ್ದರು.

IMG 20250205 WA0034
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಧರ್ಮಸ್ಥಳ | 20 ವರ್ಷಗಳ ಅಸಹಜ ಸಾವು ಪ್ರಕರಣ; ತನಿಖೆ ತೀವ್ರಗೊಳಿಸಲು ಸಮಾನ ಮನಸ್ಕರ ಆಗ್ರಹ

ಬೆಂಗಳೂರಿನ ಪ್ರಮುಖ ಸಮಾನ ಮನಸ್ಕ ಸಂಘಟನೆಗಳು ಗುರುವಾರ ಸಭೆ ಸೇರಿ ಧರ್ಮಸ್ಥಳ...

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X