ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ಜಯದೇವ ಸರ್ಕಲ್ ನಲ್ಲಿ 2025, ಜುಲೈ 9ಕ್ಕೆ ಕೇಂದ್ರ ಸಮಿತಿ ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರದ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಸಂಯುಕ್ತ ಹೋರಾಟ ಕರ್ನಾಟಕ (ಎಸ್ ಕೆ ಎಂ)ಮತ್ತು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ (JCTU) ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಈ ವೇಳೆ ಸಂಯುಕ್ತ ಹೋರಾಟ ಕರ್ನಾಟಕ (ಎಸ್ ಕೆ ಎಂ), ಜೆಸಿಟಿಯು, ಸಿಪಿಐ, ಸಿಪಿಎಂ, ಕರ್ನಾಟಕ ಶ್ರಮಿಕ ಶಕ್ತಿ, ರೈತ ಸಂಘಟನೆ ಸೇರಿದಂತೆ ಹಲವು ಜನಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಹಾಜರಿದ್ದು ಪೋಸ್ಟರ್ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಮುಖಂಡರು “ಜುಲೈ 9ರ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿದ್ದು, ಸರ್ಕಾರಗಳ ರೈತ, ಕಾರ್ಮಿಕ, ಜನವಿರೋಧಿ ನೀತಿಗಳ ವಿರುದ್ಧ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಸಂಯುಕ್ತ ಹೋರಾಟ ಕರ್ನಾಟಕ ಧ್ವನಿಯೆತ್ತಲಿವೆ. ಕಾರ್ಯಕ್ರಮದಲ್ಲಿ ಎಲ್ಲಾ ಜನಪರ, ಪ್ರಗತಿಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಅಂದು ಬೆಳಿಗ್ಗೆ 11ಕ್ಕೆ ಜಯದೇವ ವೃತ್ತದಿಂದ ಅಂಬೇಡ್ಕರ್ ವೃತ್ತ, ಎವಿಕೆ ರಸ್ತೆ, ರೇಣುಕಾ ಮಂದಿರ ಮಾರ್ಗದಲ್ಲಿ ಗಾಂಧಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಸಾಗಿ ಪ್ರತಿಭಟನೆ ನಡೆಸಿ ನಂತರ ಜಯದೇವ ವೃತ್ತದಲ್ಲಿ ಬಂದು ಬಹಿರಂಗ ಸಭೆಯ ನಂತರ ಸಮಾರೋಪಗೊಳ್ಳಲಿದೆ” ಎಂದು ತಿಳಿಸಿದರು.

“ಪ್ರತಿಭಟನಾ ರ್ಯಾಲಿ ಉದ್ಘಾಟನೆ ಬೆಳಿಗ್ಗೆ 11ಕ್ಕೆ ನಡೆಯಲಿದ್ದು, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ.ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ದಾವಣಗೆರೆ ಜಿಲ್ಲೆಯ ಎಲ್ಲಾ ರೈತ ಸಂಘದ, ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದು, ಎಲ್ಲಾ ಕಾರ್ಮಿಕರು, ರೈತರು, ಸಾರ್ವಜನಿಕರು ಭಾಗವಹಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | “ಧೃವೀಕೃತ ದಲಿತ ಚಳುವಳಿಯ ಕಟ್ಟುವಿಕೆ ದಿನ”ವಾಗಿ ಪ್ರೊ. ಬಿ ಕೃಷ್ಣಪ್ಪನವರ ಜನ್ಮದಿನ; ಆದಿ ಕರ್ನಾಟಕ ವಸತಿನಿಲಯದಲ್ಲಿ ಕಾರ್ಯಕ್ರಮ
ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಪ್ರೊ. ರಾಮಚಂದ್ರಪ್ಪ, ಸಿಪಿಐ ಪ್ರಧಾನ ಕಾರ್ಯದರ್ಶಿ ಚಂದ್ರು ಆವರಗೆರೆ, ಸಹಕಾರ್ಯದರ್ಶಿ ಹೆಚ್ ಜಿ ಉಮೇಶ್ ಅವರಗೆರೆ, ರೈತ ಮುಖಂಡ ಮುನಿಯಪ್ಪ, ನಿ. ಡಿವೈಎಸ್ಪಿ ರವಿ ನಾರಾಯಣ್, ಎಐಯುಟಿಯುಸಿಯ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಕೈದಾಳೆ, ಮಧು ತೊಗಲೇರಿ,
ಕರ್ನಾಟಕ ಶ್ರಮಿಕ ಶಕ್ತಿಯ ಸತೀಶ್ ಅರವಿಂದ್, ಆದಿಲ್ ಖಾನ್, ರವಿ, ದಲಿತ ಮುಖಂಡ ಹೆಗ್ಗೆರೆ ರಂಗಪ್ಪ, ಕಾರ್ಮಿಕ ಮುಖಂಡರಾದ ಐರಣಿ ಚಂದ್ರು, ಲಕ್ಷ್ಮಣ್, ರಫೀಕ್ ಅಹಮದ್ ಹಾಗೂ ಇತರರು ಹಾಜರಿದ್ದರು.