ಸೈಬರ್ ವಂಚನೆಗೆ | ₹56.5 ಸಾವಿರ ಸಾಲಕ್ಕಾಗಿ ಬರೋಬ್ಬರಿ ₹5.69 ಲಕ್ಷ ಹಣ ಕಳೆದುಕೊಂಡ ಉಪನ್ಯಾಸಕ

Date:

Advertisements

ಇಂದಿನ ದಿನಗಳಲ್ಲಿ ಸೈಬರ್ ವಂಚನೆ ಅವ್ಯಾಹತವಾಗಿ ನಡೆಯುತ್ತಿದ್ದು, ಜನರು ಈ ರೀತಿಯ ವಂಚನೆಗಳಿಗೆ ಸಿಲುಕಿ ಸಾಕಷ್ಟು ನೋವು ಅನುಭವಿಸುವಂತಾಗಿದೆ. ಅಲ್ಲದೇ, ಹಣ ಕಳೆದುಕೊಂಡಿದ್ದಾರೆ. ಇದೀಗ, ಕಾಲೇಜು ಉಪನ್ಯಾಸಕರೊಬ್ಬರು ₹56.5 ಸಾವಿರ ಸಾಲಕ್ಕಾಗಿ ಸೈಬರ್ ವಂಚನೆಗೆ ಸಿಲುಕಿ ಬರೋಬ್ಬರಿ ₹5.69 ಲಕ್ಷ ಹಣ ಕಳೆದುಕೊಂಡಿದ್ದಾರೆ. ಜತೆಗೆ, ಮೂರು ತಿಂಗಳ ಕಾಲ ಕಿರುಕುಳ ಅನುಭವಿಸಿದ್ದಾರೆ.

ಕರುಣಾಕರ್ ಪ್ರಸಾದ್ (ಹೆಸರು ಬದಲಾಯಿಸಲಾಗಿದೆ) ವಂಚನೆಗೊಳಗಾದವರು. ವೈಯಕ್ತಿಕ ಕಾರಣಗಳಿಂದಾಗಿ ಪ್ರಸಾದ್ ಅವರಿಗೆ ಸಾಲದ ಅವಶ್ಯಕತೆ ಇರುತ್ತದೆ. ಈ ಹಿನ್ನೆಲೆ, ಅವರು 2023ರ ಅಕ್ಟೋಬರ್ 27 ರಂದು ಅವರ ಸ್ನೇಹಿತರೊಬ್ಬರ ಸಲಹೆ ಮೇರೆಗೆ ತ್ವರಿತವಾಗಿ ಸಾಲ ಪಡೆಯಲು ಸಾಲದ ಅಪ್ಲಿಕೇಶನ್‌ಗಳನ್ನು ಫೇಸ್‌ಬುಕ್‌ನಲ್ಲಿನ ಲಿಂಕ್‌ಗಳ ಮೂಲಕ ಡಿಜಿಟಲ್ ಬ್ಯಾಂಕ್ ಮತ್ತು ಮನಿ ಪಾಕೆಟ್ ಅನ್ನು ಡೌನ್‌ಲೋಡ್ ಮಾಡಿದ್ದಾರೆ. ಈ ಆಪ್‌ಗಳಲ್ಲಿ ಶೇಕಡಾ 0.7 ಕಡಿಮೆ ಬಡ್ಡಿ ದರ ಮತ್ತು 120 ದಿನಗಳ ಮರುಪಾವತಿ ಅವಧಿ ಪ್ರಸಾದ್ ಅವರನ್ನು ಆಕರ್ಷಿಸಿದೆ.

2023ರ ಅಕ್ಟೋಬರ್ 27 ರಿಂದ 2023ರ ನವೆಂಬರ್ 2 ರವರೆಗೆ ಪ್ರಸಾದ್ ಅವರು ಎರಡು ಅಪ್ಲಿಕೇಶನ್‌ ಬಳಸಿದ್ದಾರೆ. ಅವರ ಬ್ಯಾಂಕ್ ಖಾತೆಗೆ ಸಮಾನ ಕಂತುಗಳಲ್ಲಿ ತಲಾ ₹18,850 ಮತ್ತು ₹37,700 ಪಡೆದಿದ್ದಾರೆ.

Advertisements

2023ರ ಅಕ್ಟೋಬರ್ 29ರಂದು ಪ್ರಸಾದ್ ಅವರು ಆಪ್‌ ಮೂಲಕ ಮೊದಲ ಕರೆ ಸ್ವೀಕರಿಸಿದ್ದಾರೆ. ಏಜೆಂಟ್ ಆರಂಭಿಕ ಮರುಪಾವತಿಯನ್ನು ಕೇಳಿದ ನಂತರ ಅವರು ಮೊದಲ ಬಾರಿಗೆ ₹10,150 ಹಾಕಿದ್ದಾರೆ. ಈ ಬಳಿಕ, ಮತ್ತೆ 2023ರ ಡಿಸೆಂಬರ್ 3ರಂದು ಪ್ರಸಾದ್ ಅವರ ಅನುಮತಿ ಪಡೆಯದೇ ಅವರ ಬ್ಯಾಂಕ್ ಖಾತೆಗೆ ₹18,850 ಜಮೆಯಾಗಿದೆ. ಆಗ ಅವರ ಸಾಲದ ಮೊತ್ತ ₹56,550 ಏರಿಕೆ ಆಗಿದೆ. ಅಂದಿನಿಂದ, ಪ್ರಸಾದ್ ಅವರು ಪ್ರತಿದಿನ ಕಿರುಕುಳ ನೀಡುವ ಕರೆಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ.

ಅಲ್ಲದೇ, ಪ್ರಸಾದ್ ಅವರ ಚಿತ್ರಗಳು ಮತ್ತು ವೀಡಿಯೊಗಳನ್ನು ಮಾರ್ಫ್ ಮಾಡಿ, ಅವುಗಳನ್ನು ಅವರ ಸ್ನೇಹಿತರಿಗೆ ಮತ್ತು ಅವರ ಸಂಪರ್ಕದಲ್ಲಿರುವವರಿಗೆ ಕಳುಹಿಸಿದ್ದಾರೆ. “ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟು ಈ ರೀತಿ ಮಾಡಿದ ಕಾರಣ ನನಗೆ ಬೇರೆ ಆಯ್ಕೆ ಇರಲಿಲ್ಲ. ಅವರಿಗೆ ಹಣ ಪಾವತಿ ಮಾಡಲು ನಾನು ನನ್ನ ಸ್ನೇಹಿತರು ಮತ್ತು ಪರಿಚಯಸ್ಥರಿಂದ ಹಣವನ್ನು ಸಾಲ ಪಡೆದಿದ್ದೇನೆ” ಎಂದು ಪ್ರಸಾದ್ ಹೇಳಿದರು.

“ನಾನು ಮದುವೆಯಾಗಿರುವ ವ್ಯಕ್ತಿ, ತನ್ನ ಕಾಲೇಜಿನ ಇಬ್ಬರು ಸ್ನೇಹಿತರು ಮತ್ತು ಸಿಬ್ಬಂದಿಗೆ ನನ್ನ ಮಾರ್ಫ್ ಮಾಡಿದ ವಿಡಿಯೋ ಸಿಕ್ಕಿದೆ. ನಾನು ಅವರಿಗೆ ನನ್ನ ಸ್ಥಿತಿಯನ್ನು ವಿವರಿಸಿದೆ, ಅವರು ಅರ್ಥಮಾಡಿಕೊಂಡರು. ಆದರೆ, ಅದನ್ನು ಬೇರೆ ಯಾರು ಸ್ವೀಕರಿಸಿದ್ದಾರೆ ಎಂದು ನನಗೆ ತಿಳಿದಿಲ್ಲ” ಎಂದು ಅವರು ಹೇಳಿದರು.

“ನಾನು ಹನ್ನೊಂದು ವರ್ಷದಿಂದ ಇಲ್ಲಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಇರಲಿಲ್ಲ. ಒಂದು ವಾರದ ಹಿಂದೆ ಮಹಿಳಾ ಸಹೋದ್ಯೋಗಿಯೊಬ್ಬರು ಸಮಸ್ಯೆಯನ್ನು ಸೃಷ್ಟಿ ಮಾಡಿದರು. ಅದು ನನಗೆ ಮುಜುಗರಕ್ಕೆ ಕಾರಣವಾಯಿತು. ಆಡಳಿತ ಮಂಡಳಿಗೆ ತಿಳಿಸಲಾಯಿತು. ನನ್ನ ಸ್ನೇಹಿತರೊಬ್ಬರು 20 ದಿನಗಳ ಹಿಂದೆ ಸೈಬರ್ ಕ್ರೈಮ್ ಸಹಾಯವಾಣಿಗೆ ದೂರು ನೀಡಿದ್ದರು. ಕರೆಗಳು 10 ದಿನಗಳವರೆಗೆ ನಿಂತಿದ್ದವು. ಆದರೆ, ಮತ್ತೆ ಪ್ರಾರಂಭವಾಯಿತು” ಎಂದರು.

“ಪ್ರಸಾದ್ ಅವರನ್ನು ಸಂಪರ್ಕಿಸಿದ ಸಾಲ ಏಜೆಂಟ್‌ಗಳೆಲ್ಲರೂ ಪುರುಷರಾಗಿದ್ದು, ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಮತ್ತು ನಿಂದನೀಯ ಭಾಷೆ ಬಳಸಿದ್ದಾರೆ. ತುಮ್ಹಾರಾ ನಸೀಬ್ ಖರಬ್ ಕರ್ ದೇಂಗೆ. ಹಮೆ ಕುಚ್ ನಹಿ ಮಾಲುಮ್. ಪೈಸಾ ಭೇಜ್ ದೋ (ನಾವು ನಿಮ್ಮ ಜೀವನವನ್ನು ಹಾಳು ಮಾಡುತ್ತೇವೆ. ನಮಗೆ ಏನೂ ತಿಳಿದಿಲ್ಲ. ನಮಗೆ ಹಣವನ್ನು ಕಳುಹಿಸಿ)” ಎಂದು ಸಾಲದ ಆ್ಯಪ್ ಏಜೆಂಟ್ ಹೇಳಿರುವುದಾಗಿ ಪ್ರಸಾದ್ ಹೇಳಿದ್ದಾರೆ.

“ಪ್ರಸಾದ್ ಅವರು ನಾನಾ ದೇಶದ ಕೋಡ್‌ಗಳೊಂದಿಗೆ (ನೇಪಾಳ, ಕೀನ್ಯಾ, ಪಾಕಿಸ್ತಾನ ಮತ್ತು ಭಾರತ) ಏಳು ಸಂಖ್ಯೆಗಳಿಂದ ಕರೆಗಳನ್ನು ಸ್ವೀಕರಿಸಿದ್ದಾರೆ. ಸೈಬರ್ ವಂಚನೆಕೋರರು ಕರೆ ಮಾಡಲು ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ ಅನ್ನು ಬಳಸುತ್ತಾರೆ. ಪೂರೈಕೆದಾರರಿಂದ ವಿಳಂಬವಾದ ಪ್ರತಿಕ್ರಿಯೆ ಅಥವಾ ಕೆಲವೊಮ್ಮೆ ಅವರು ಪ್ರತಿಕ್ರಿಯಿಸುವುದಿಲ್ಲ. ಇದು ಮೂಲವನ್ನು ಪತ್ತೆಹಚ್ಚಲು ಸಮಸ್ಯೆ ಉಂಟುಮಾಡುತ್ತದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಉಪನಗರ ರೈಲು ಯೋಜನೆ : 5.5 ಕಿ.ಮೀ ವಿಸ್ತರಣೆ

“2024ರ ಜನವರಿ 25 ರಂದು ಐಟಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X