ಕುಸ್ತಿಪಟುಗಳಂತೆ ಪರಸ್ಪರ ಹೊಡೆದಾಡಿದ ಮಾಲ್ಡೀವ್ಸ್ ಸಂಸದರು

Date:

ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಸಂಸದರು ಕುಸ್ತಿಪಟುಗಳಂತೆ ಒಬ್ಬರಿಗೊಬ್ಬರು ಹೊಡೆದಾಡಿದ ಘಟನೆ ಮಾಲ್ಡೀವ್ಸ್‌ ಸಂಸತ್ತಿನಲ್ಲಿ ನಡೆದಿದೆ.

- Advertisement -

ವಿಶೇಷ ಅಧಿವೇಶನದಲ್ಲಿ ಅಧ್ಯಕ್ಷ ಮೊಹಮದ್ ಮೋಯಿಝು ಅವರ ಸಂಪುಟ ಸಚಿವರಿಗಾಗಿ ಧ್ವನಿ ಮತದ ಮೂಲಕ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಆಡಳಿತ ಹಾಗೂ ವಿಪಕ್ಷದ ಸಂಸದರು ಕಿತ್ತಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಆಡಳಿತ ಪಕ್ಷದ ಪಿಎನ್‌ಸಿ, ಪಿಪಿಎಂ ಹಾಗೂ ವಿಪಕ್ಷದ ಎಂಡಿಎಂ ಸದಸ್ಯರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ವೈರಲ್‌ ಆಗುತ್ತಿರುವ ವಿಡಿಯೋದಲ್ಲಿರುವಂತೆ ಒಬ್ಬರು ಸಂಸದರು ಇನ್ನೊಬ್ಬ ಸಂಸದರನ್ನು ಕೆಳಕ್ಕೆ ಬೀಳಿಸಿ ಒದೆಯುವುದು, ಹೊಡೆಯುವುದು ಮಾಡುತ್ತಿದ್ದಾರೆ. ಮತ್ತೊಬ್ಬ ಸಂಸದರು ಗಲಾಟೆಯನ್ನು ಬಿಡಿಸುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮೂವರು ಮಾನಗೆಟ್ಟ ನಾಯಕರು ಮತ್ತು ರಾಮ ರಾಜಕಾರಣ

ಇನ್ನೊಂದು ದೃಶ್ಯದಲ್ಲಿ ಸಂಸದರೊಬ್ಬರು ಸ್ಪೀಕರ್‌ ಅವರ ಕೂದಲು ಎಳೆದು ತುತ್ತೂರಿ ತರಹದ ವಾದ್ಯ ಊದುತ್ತಿರುವುದು ಕಂಡಿಬಂದಿದೆ.

ಅಧ್ಯಕ್ಷ ಮೊಹಮದ್ ಮೋಯಿಝು ಅವರ ಸಂಪುಟಕ್ಕೆ ನಾಲ್ವರು ಸಚಿವರನ್ನು ಅನುಮೋದಿಸುವುದನ್ನು ನಿರಾಕರಿಸಲು ಆಡಳಿತ ಪಕ್ಷದ ಸಂಸದರನ್ನು ವಿಪಕ್ಷ ಪಕ್ಷದ ಸದಸ್ಯರು ಸದನಕ್ಕೆ ಪ್ರವೇಶಿಸದಂತೆ ತಡೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಆದಾಗ್ಯೂ ಆಡಳಿತ ಪಕ್ಷದ ಮುಖ್ಯ ಸಲಹೆಗಾರರಾದ ಅಬ್ದುಲ್ ರಹೀಮ್ ಅಬ್ದುಲ್ಲ ಸಚಿವರ ಮರು ನೇಮಕವನ್ನು ಸಮರ್ಥಿಸಿಕೊಂಡರು. ಅನುಮತಿ ನಿರಾಕರಿಸುವುದು ವಿಪಕ್ಷಗಳ ಬೇಜವಾಬ್ದಾರಿಯುತ ನಡೆ ಎಂದು ತಿಳಿಸಿದರು. ಇದನ್ನು ವಿಪಕ್ಷ ಸಂಸದರು ವಿರೋಧಿಸಿದ್ದು, ಸ್ಪೀಕರ್‌ ರಾಜೀನಾಮೆಗೆ ಒತ್ತಾಯಿಸಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂಟಾರ್ಕ್ಟಿಕದಲ್ಲಿ ಪೆಂಗ್ವಿನ್ ಎಣಿಸುವ ಅಪರೂಪದ ಉದ್ಯೋಗ: ಲಕ್ಷಗಳ ಸಂಭಾವನೆ, ಹೇಗಿರುತ್ತದೆ ಹಿಮದ ನಾಡಿನ ಬದುಕು?

ಜನಜಂಗುಳಿ, ಟ್ರಾಫಿಕ್ ಕಿರಿಕಿರಿ ಹಾಗೂ ದೈನಂದಿನ ಯಾಂತ್ರಿಕ ಬದುಕಿನಿಂದ ದೂರ ಸರಿದು,...

ಯಮೆನ್ ರಾಷ್ಟ್ರಪತಿ ಭವನದ ಮೇಲೆ ಹೂತಿಗಳ ಕ್ಷಿಪಣಿ ದಾಳಿ: ಐವರ ಸಾವು

ಯಮೆನ್‌ನ ದಕ್ಷಿಣ ಭಾಗದ ಪ್ರಮುಖ ನಗರವಾದ ಅದನ್‌ನಲ್ಲಿರುವ ಅಲ್-ಮಾಶಿಕ್ ರಾಷ್ಟ್ರಪತಿ ಭವನದ...

ಭಾರತದ ಮೇಲೆ ಶೇ.100 ಸುಂಕ: 10 ದಿನಗಳಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅಂತಿಮ ತೀರ್ಮಾನ!

ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ಸರಕುಗಳ ಮೇಲೆ ಶೇ. 100ರಷ್ಟು ಭಾರಿ ಆಮದು...

ರಾತ್ರಿ ವೇಳೆಯಲ್ಲೂ ರವಿ; ಸೂರ್ಯನ ಬೆಳಕು ಮಾರಾಟ ಮಾಡಲು ಅಮೆರಿಕ-ಭಾರತ ಸಹಭಾಗಿತ್ವ: ಏನಿದು ಯೋಜನೆ?

ವಿಜ್ಞಾನ ಕಲ್ಪನೆಗಳಿಗಿಂತಲೂ ಮಿಗಿಲಾದ ಅಪರೂಪದ ಯೋಜನೆಯೊಂದು ಈಗ ಜಾಗತಿಕ ಇಂಧನ ಕ್ಷೇತ್ರದಲ್ಲಿ...