ಪ್ರಗತಿಪರರಿಗೆ ಬೆದರಿಕೆ ಪತ್ರ ಬರೆಯುತ್ತಿದ್ದ ಆರೋಪಿ ಜೊತೆ ಗೌರಿ ಹಂತಕರ ನಂಟು: ತನಿಖೆ

Date:

Advertisements

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುಜಿತ್‌ ಕುಮಾರ್‌ ಅನೇಕ ಬಾರಿ ತನ್ನನ್ನು ಭೇಟಿಯಾಗಿದ್ದ ಎಂದು ಶಿವಾಜಿ ರಾವ್ ಜಾಧವ್ ಒಪ್ಪಿಕೊಂಡಿದ್ದಾನೆ

ಕಳೆದ ಒಂದು ವರ್ಷದಿಂದ ರಾಜ್ಯದ ಹಲವಾರು ಪ್ರಮುಖ ಬರಹಗಾರರಿಗೆ, ಪ್ರಗತಿಪರರಿಗೆ ಕೊಲೆ ಬೆದರಿಕೆ ಪತ್ರ ಬರೆಯುತ್ತಿದ್ದ ವ್ಯಕ್ತಿಗೂ ಗೌರಿ ಲಂಕೇಶ್‌, ಎಂ.ಎಂ.ಕಲ್ಬುರ್ಗಿಯವರ ಹಂತಕರಿಗೂ ಸಂಪರ್ಕ ಇರುವುದು ತನಿಖೆಯಲ್ಲಿ ಬಯಲಾಗಿದೆ.

ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದ ದಾವಣಗೆರೆ ಮೂಲದ ಶಿವಾಜಿ ರಾವ್ ಜಾಧವ್ (41) ಎಂಬಾತನನ್ನು ಕಳೆದ ಸೆಪ್ಟೆಂಬರ್‌ನಲ್ಲಿ ಪೊಲೀಸರು ಬಂಧಿಸಿದ್ದರು. ಸಂಶೋಧಕರಾದ ಎಂ.ಎಂ.ಕಲ್ಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್‌ ಅವರನ್ನು ಹತ್ಯೆ ಮಾಡಿದ ಗ್ಯಾಂಗ್‌ಗೆ ರೆಕ್ರೂಟರ್‌ ಆಗಿ ಕೆಲಸ ಮಾಡುತ್ತಿದ್ದ ಸುಜಿತ್‌ ಕುಮಾರ್‌ ಎಂಬಾತನ ಸ್ನೇಹವಿರುವುದು ತನಿಖೆಯಲ್ಲಿ ಬಯಲಾಗಿರುವುದಾಗಿ ’ದಿ ಹಿಂದೂ’ ವಿಶೇಷ ವರದಿ ಮಾಡಿದೆ.

Advertisements

ಪ್ರವೀಣ್, ಮಂಜುನಾಥ್ ಮೊದಲಾದ ಹೆಸರುಗಳಿಂದ ಗುರುತಿಸಿಕೊಂಡು ಪಾತಕ ಕೃತ್ಯಗಳಲ್ಲಿ ಸಕ್ರಿಯನಾಗಿದ್ದ ಸುಜಿತ್‌ ಕುಮಾರ್‌ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವನು. ಗೌರಿ ಲಂಕೇಶ್ ಪ್ರಕರಣದಲ್ಲಿ 13ನೇ ಆರೋಪಿಯಾಗಿರುವ ಈತ ಸನಾತನ ಸಂಸ್ಥೆಯ ಸಂಪರ್ಕದಲ್ಲಿದ್ದ. ಹಿಂದುತ್ವ ಗುಂಪುಗಳಲ್ಲಿದ್ದು ಪ್ರಚೋದಿತವಾಗಿ ಕೆಲಸ ಮಾಡಬಲ್ಲ, ಅಪರಾಧ ಕೃತ್ಯಗಳನ್ನು ಎಸಗುವ ಸಾಮರ್ಥ್ಯವಿರುವ ಯುವಕರನ್ನು ಗುರುತಿಸಿ ಅವರನ್ನು ಗ್ಯಾಂಗ್‌ಗೆ ನೇಮಕ ಮಾಡಿಕೊಳ್ಳುವ ಕೆಲಸವನ್ನು ಸುಜಿತ್‌ ಮಾಡುತ್ತಿದ್ದ ಎಂದು ತನಿಖಾ ಸಂಸ್ಥೆಗಳು ಹೇಳಿವೆ.

ತಮ್ಮ ಸಂಪರ್ಕಕ್ಕೆ ಬಂದವರ ಬ್ರೈನ್ ವಾಶ್ ಮಾಡಿ ಹಂತಕರ ಗ್ಯಾಂಗ್‌ಗೆ ಸೇರಿಸಿಕೊಳ್ಳಲಾಗುತ್ತಿತ್ತು. ಈ ಗ್ಯಾಂಗ್‌ನಲ್ಲಿದ್ದವರು ಗೋವಾ ಮೂಲದ ಸನಾತನಾ ಸಂಸ್ಥೆ ಮತ್ತು ಅದರ ಸಹೋದರ ಸಂಘಟನೆಯಾದ ಹಿಂದೂ ಜನಜಾಗೃತಿ ಸಮಿತಿಯೊಂದಿಗೆ ಸಂಪರ್ಕದಲ್ಲಿದ್ದವರಾಗಿದ್ದಾರೆ. 2013ರಿಂದ 2017ರವರೆಗೆ ಕರ್ನಾಟಕ, ಮಹಾರಾಷ್ಟ್ರ ರಾಜ್ಯದಲ್ಲಿ ನಾಲ್ವರು ಹೋರಾಟಗಾರರು ಮತ್ತು ಬರಹಗಾರರನ್ನು ಹತ್ಯೆ ಮಾಡಿದ ಆರೋಪ ಈ ಗ್ಯಾಂಗ್‌ ಮೇಲಿದೆ.

ಗೌರಿ ಲಂಕೇಶ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ಸಲ್ಲಿಸಿರುವ ಚಾರ್ಜ್‌‌ಶೀಟ್‌ನಲ್ಲಿ ಸುಜಿತ್‌ ಕುಮಾರ್‌ 13ನೇ ಆರೋಪಿ ಎಂದು ಗುರುತಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಬಂಧಿತ 17 ಆರೋಪಿಗಳು ಈವರೆಗೂ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಗೌರಿ ಲಂಕೇಶ್‌ ಅವರಿಗೆ ಗುಂಡು ಹಾರಿಸಿದ ಪರಶುರಾಮ್‌ ವಾಘ್ಮೋರೆಯನ್ನು ಗ್ಯಾಂಗ್‌ಗೆ ನೇಮಕ ಮಾಡಿಕೊಂಡಿದ್ದೇ ಈ ಸುಜಿತ್‌ ಕಮಾರ್‌ ಎಂದು ಚಾರ್ಜ್‌ಶೀಟ್ ಹೇಳುತ್ತದೆ.

2018ರಲ್ಲಿ ಸುಜಿತ್‌ ಕುಮಾರ್‌ನನ್ನು ತನಿಖಾ ತಂಡ ಬಂಧಿಸಿತ್ತು. ಆಗ ಆತನಿಂದ ವಶಕ್ಕೆ ಪಡೆಯಲಾಗಿದ್ದ ಡೈರಿಯಲ್ಲಿ ಶಿವಾಜಿ ರಾವ್‌ ಜಾಧವ್‌ನ ಹೆಸರು ಮತ್ತು ಆತನ ಹಳೆಯ ಪೋನ್‌ ನಂಬರ್‌ ಪತ್ತೆಯಾಗಿದೆ. ಹೀಗಾಗಿ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ಸುಜಿತ್‌ ಕುಮಾರ್‌ ಫೋಟೋವನ್ನು ಗುರುತಿಸಿರುವ ಬಂಧಿತ ಆರೋಪಿ ಶಿವಾಜಿ, ತಾನು ಅನೇಕ ಬಾರಿ ಈತನನ್ನು (ಸುಜಿತ್‌ನನ್ನು) ಭೇಟಿಯಾಗಿದ್ದೆ. ಈತನ ಹೆಸರು ಮಂಜುನಾಥ್‌ ಎಂಬುದಾಗಿತ್ತು ಎಂದು ತಿಳಿಸಿರುವುದಾಗಿ ತನಿಖಾ ಅಧಿಕಾರಿಗಳು ಹೇಳಿದ್ದಾರೆ.

“ಸುಜಿತ್‌ ಕುಮಾರ್‌ ಮಾಡಿಕೊಳ್ಳುತ್ತಿದ್ದ ನೇಮಕಗಳಲ್ಲಿ ಶಿವಾಜಿ ಜಾಧವ್‌ ಸಂಭಾವ್ಯ ಪಟ್ಟಿಯಲ್ಲಿದ್ದ. ಕೊಲೆಗಳ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಶಿವಾಜಿ ಹೇಳುತ್ತಿದ್ದಾನೆ. 2018ರಲ್ಲಿ ಸುಜಿತ್‌ನನ್ನು ಎಸ್‌ಐಟಿ ಬಂಧಿಸದಿದ್ದರೆ, ಬಹುಶಃ ಆತ ಶಿವಾಜಿಯನ್ನು ಮತ್ತಷ್ಟು ತಲೆ ತೊಳೆಯುತ್ತಿದ್ದ ಅನಿಸುತ್ತದೆ. ಜೊತೆಗೆ ಯಾವುದಾದರೂ ಅಪರಾಧ ಎಸಗಲು ಬಳಸಿಕೊಳ್ಳುತ್ತಿದ್ದ ಎಂದೂ ನೋಡಬಹುದು. ಆದರೆ ಇದು ಕೇವಲ ಅಂದಾಜಷ್ಟೇ” ಎಂದಿದ್ದಾರೆ ಅಧಿಕಾರಿಗಳು.

8ನೇ ತರಗತಿಗೆ ಶಾಲೆಯನ್ನು ಬಿಟ್ಟಿದ್ದ ಶಿವಾಜಿ ರಾವ್ ಜಾಧವ್ ದಾವಣಗೆರೆಯ ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಯಾಗಿದ್ದು, ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದನು. ಹಿಂದುತ್ವ ಸಿದ್ಧಾಂತವನ್ನು ಪ್ರತಿಪಾದಿಸುವ ಪುಸ್ತಕಗಳನ್ನು ಓದುತ್ತಿದ್ದ, ಜೊತೆಗೆ ಹತ್ತಿರದ ಲೈಬ್ರರಿಯಲ್ಲಿ ಪತ್ರಿಕೆಗಳನ್ನು ಓದುವ ಅಭ್ಯಾಸ ರೂಢಿಸಿಕೊಂಡಿದ್ದ. ಹೀಗಾಗಿ ಹಿಂದುತ್ವವನ್ನು ವಿರೋಧಿಸುವವರಿಗೆ ಬೆದರಿಕೆ ಪತ್ರಗಳನ್ನು ಬರೆಯಲು ಪ್ರೇರಿತನಾದ. ಬರಹಗಾರರು ಹಾಗೂ ವಿಚಾರವಾದಿಗಳಾದ ಕುಂ.ವೀರಭದ್ರಪ್ಪ, ಬಿ.ಟಿ.ಲಲಿತಾ ನಾಯಕ್, ವಸುಂಧರಾ ಭೂಪತಿ, ಬಂಜಗೆರೆ ಜಯಪ್ರಕಾಶ್, ಬಿ.ಎಲ್. ವೇಣು, ನಿಜಗುಣಾನಂದ ಸ್ವಾಮೀಜಿಯವರಿಗೆ ಬಂಧನಕ್ಕೂ ಮೊದಲು ಬೆದರಿಕೆ ಪತ್ರಗಳನ್ನು ಬರೆದಿದ್ದ.

ಇದನ್ನೂ ಓದಿರಿ: ಗೌರಿ ಲಂಕೇಶ್‌ ಹತ್ಯೆಯಾಗಿ ಆರು ವರ್ಷ ; ಯಾವ ಹಂತದಲ್ಲಿದೆ ಪ್ರಕರಣದ ತನಿಖೆ? ಇಲ್ಲಿದೆ ಪೂರ್ಣ ವಿವರ

ಗೌರಿ ಲಂಕೇಶ್‌, ಎಂ.ಎಂ.ಕಲ್ಬುರ್ಗಿ, ನರೇಂದ್ರ ದಾಬೋಲ್ಕರ್‌, ಗೋವಿಂದ ಪಾನ್ಸರೆ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಅಮೋಲ್ ಕಾಳೆ, ಸುಜಿತ್ ಕುಮಾರ್ ಮತ್ತು ಮನೋಹರ್ ಎಡವೆ ಅವರಿಂದ ಹಲವಾರು ಡೈರಿಗಳನ್ನು ತನಿಖಾಧಿಕಗಳು ವಶಕ್ಕೆ ಪಡೆದಿದ್ದಾರೆ. ಆ ಡೈರಿಗಳಲ್ಲಿ ಹಲವು ಹೆಸರುಗಳು, ಕೋಡ್‌ಗಳು, ಪೋನ್‌ ನಂಬರ್‌ಗಳು ಪತ್ತೆಯಾಗಿವೆ. ಹಂತಕರ ಹಿಟ್‌ ಲಿಸ್ಟ್‌ನಲ್ಲಿ ಇನ್ನೂ ಅನೇಕ ಹೋರಾಟಗಾರರಿದ್ದರು.

ಈ ಡೈರಿಗಳಲ್ಲಿ ನಮೂದಿಸಿರುವವರೆಲ್ಲ ಈ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ. ಆದರೆ ಇವರೆಲ್ಲರೂ ಗ್ಯಾಂಗ್‌ಗೆ ಸೇರ್ಪಡೆಯಾಗುವ ಹಂತದಲ್ಲಿದ್ದರಿಂದ ಎಸ್‌ಐಟಿ ಈ ಹೆಸರುಗಳ ಪಟ್ಟಿಯನ್ನು ತಯಾರಿಸಿ, ರಾಜ್ಯ ಹಾಗೂ ಕೇಂದ್ರದ ತನಿಖಾ ಸಂಸ್ಥೆಗಳಿಗೆ ತಿಳಿಸಿದೆ. ಈ ಪಟ್ಟಿಯನ್ನು ವೀಕ್ಷಣೆಯಲ್ಲಿಡುವುದು ಅಗತ್ಯವೂ ಆಗಿದೆ.

“ನಾಲ್ವರು ಹೋರಾಟಗಾರರನ್ನು ಕೊಂದ ಗ್ಯಾಂಗ್‌ನ ಇತಿಹಾಸವು ದೊಡ್ಡದಿದೆ. ಸಿಬಿಐನಿಂದ ಬಂಧಿಸಲ್ಪಟ್ಟ ವೀರೇಂದ್ರ ತಾವ್ಡೆ, ನಂತರ ಮುಂಚೂಣಿಗೆ ಬಂದ ಅಮೋಲ್ ಕಾಳೆ ಗ್ಯಾಂಗ್ ಅನ್ನು ಮುನ್ನಡೆಸಿದ್ದಾರೆ. ಹಂತಕರ ಈ ತಂಡ ಬಂಧನಕ್ಕೆ ಒಳಪಟ್ಟಿದೆ. ಸರಣಿ ಬಾಂಬ್ ಸ್ಪೋಟ, ವಿಚಾರವಾದಿಗಳ ಹತ್ಯೆ ಪ್ರಕರಣಗಳ ಕಾರ್ಯವಿಧಾನವನ್ನು ನೋಡಿದರೆ ಈ ಗ್ಯಾಂಗ್‌ ಮರುಸಂಘಟನೆಯ ಇತಿಹಾಸವನ್ನು ಹೊಂದಿದೆ” ಎನ್ನುತ್ತಾರೆ ಅಧಿಕಾರಿಗಳು.

(ಚಿತ್ರ: ಶಿವಾಜಿ ರಾವ್ ಜಾಧವ್‌ ಮತ್ತು ಗೌರಿ ಲಂಕೇಶ್)
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಧರ್ಮಸ್ಥಳ ಪ್ರಕರಣಗಳ ಸಮಗ್ರ ತನಿಖೆಗೆ ಎಡಪಕ್ಷಗಳ ಒತ್ತಾಯ

ಧರ್ಮಸ್ಥಳದಲ್ಲಿ ನಡೆದಿರುವ ವೇದವಲ್ಲಿ, ಪದ್ಮಲತಾ, ನಾರಾಯಣ, ಯಮುನಾ ಮತ್ತು ಸೌಜನ್ಯ, ಮುಂತಾದ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

Download Eedina App Android / iOS

X