ಕ್ರೀಡಾ ಸಾಹಿತ್ಯಕ್ಕೆ ಕೇಶವಮೂರ್ತಿಯವರ ಕೊಡುಗೆ ಅನನ್ಯ: ಬಿ.ಎಸ್. ಚಂದ್ರಶೇಖರ್

Date:

Advertisements

ವಿಶ್ವಮಾನ್ಯ ಕ್ರಿಕೆಟ್ ಅಂಕಿ ಅಂಶ ತಜ್ಞ ಚನ್ನಗಿರಿ ಕೇಶವಮೂರ್ತಿ ಅವರು ಕ್ರಿಕೆಟ್ ಕುರಿತು ಪುಸ್ತಕಗಳ ರಚನೆ ಮಾಡಿರುವುದು ಕ್ರೀಡಾ ಸಾಹಿತ್ಯಕ್ಕೆ ಅನನ್ಯ ಕೊಡುಗೆಗಳಾಗಿವೆ ಎಂದು ವಿಶ್ವ ವಿಖ್ಯಾತ ಕ್ರಿಕೆಟ್‌ನ ಸ್ಪಿನ್ ಮಾಂತ್ರಿಕ ಬಿ.ಎಸ್. ಚಂದ್ರಶೇಖರ್ ತಿಳಿಸಿದರು.

ಚನ್ನಗಿರಿ ಕೇಶವಮೂರ್ತಿ ಅವರ ಜೀವನ ಸಾಧನೆಯ ‘ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು’ ಯಶೋಗಾಥೆ ಪುಸ್ತಕವನ್ನು ಬಿ.ಎಸ್. ಚಂದ್ರಶೇಖರ್ ಅವರು ಜಯನಗರದ ತಮ್ಮ ಸ್ವಗೃಹದಲ್ಲಿ ಭಾನುವಾರ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

ಚನ್ನಗಿರಿ ಕೇಶವಮೂರ್ತಿ ಅವರ ಸಾಹಿತ್ಯ ಮತ್ತು ಕ್ರಿಕೆಟ್ ಸೇವೆ ಮಾದರಿಯಾಗಿದ್ದು, ಅವರೊಬ್ಬ ಶ್ರೇಷ್ಠ ಕ್ರಿಕೆಟ್ ಅಂಕಿ ಅಂಶ ತಜ್ಞರಾಗಿರುವುದು ನಮ್ಮ ಕರ್ನಾಟಕದ ಹೆಮ್ಮೆ ಎಂದು ಅವರು ಪ್ರಶಂಸಿಸಿದರು.

Advertisements

ಕೇಶವಮೂರ್ತಿ ಕುರಿತ ‘ಸಾಹಿತ್ಯವೇ ಹಸಿರು ಕ್ರಿಕೆಟೇ ಉಸಿರು’ ಪುಸ್ತಕ ಸಾಹಿತ್ಯ ಹಾಗೂ ಕ್ರಿಕೆಟ್ ಆಸಕ್ತರಿಗೆ ಮಾರ್ಗದರ್ಶಿಯಾಗಿದೆ ಎಂದು ಅವರು ತಿಳಿಸಿದರು.

ಪತ್ತೇದಾರಿ ಕಾದಂಬರಿಗಳನ್ನೂ ಬರೆದಿರುವ ಕೇಶವಮೂರ್ತಿ ಅವರು ಕ್ರಿಕೆಟ್ ಕುರಿತು ಪುಸ್ತಕಗಳ ರಚನೆ ಮಾಡಿರುವುದು ಕ್ರೀಡಾ ಸಾಹಿತ್ಯಕ್ಕೆ ಅನನ್ಯ ಕೊಡುಗೆಗಳಾಗಿವೆ ಎಂದು ಸಂಧ್ಯಾ ಚಂದ್ರಶೇಖರ್ ಹೇಳಿದರು.

85ರ ಇಳಿವಯಸ್ಸಿನಲ್ಲೂ ಚನ್ನಗಿರಿ ಕೇಶವಮೂರ್ತಿ ಅವರು ಇವತ್ತಿಗೂ ಕ್ರಿಕೆಟ್ ಅಂಕಿ ಅಂಶ ದಾಖಲು ಮಾಡುತ್ತಿರುವುದು ಅಪರೂಪ ಎಂದು ಚಂದ್ರಶೇಖರ್ ದಂಪತಿಗಳು ಶುಭ ಹಾರೈಸಿದರು.

ಪುಸ್ತಕದ ಸಂಪಾದಕ ಕಗ್ಗೆರೆ ಪ್ರಕಾಶ್, ಸಿಕೆಎಂ ಮಗ ಸಂಜಯ್ ಚನ್ನಗಿರಿ, ಮಗಳು ಸವಿತಾ ಉಪಸ್ಥಿತರಿದ್ದರು.

ಕಗ್ಗೆರೆ ಪ್ರಕಾಶ್
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿತ್ರದುರ್ಗ | ವಿದ್ಯಾರ್ಥಿನಿ ಕೊಲೆ, ಬೆಂಕಿ ಹಚ್ಚಿ ಸುಟ್ಟ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಎಸ್ ಎಫ್ ಐ ಆಗ್ರಹ

ಚಿತ್ರದುರ್ಗದ ಹೊರವಲಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಹಿರಿಯೂರು ತಾಲೂಕಿನ 19 ವರ್ಷದ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

Download Eedina App Android / iOS

X