ಪಂಚಪೀಠಾಧಿಶರು ಲಿಂಗಾಯತ ಸಮಾಜದ ಮೇಲೆ ಮಾಡುತ್ತಿರುವ ಸವಾರಿ ನಿಲ್ಲಿಸಲಿ

Date:

Advertisements

ಪಂಚಪೀಠದ ಪೀಠಾಧಿಪತಿಗಳು ಹತಾಶರಾಗಿ ʼಲಿಂಗಾಯತʼ ಕುರಿತು ಮಿಥ್ಯ ಹಾಗೂ ದ್ವಂದ್ವ ಸೃಷ್ಟಿಸುವ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆ ಖಂಡನಾರ್ಹ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರಾದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಎಲ್ಲ ಲಿಂಗಾಯತ ಹಾಗೂ ವೀರಶೈವ ಸಂಘಟನೆಗಳು ಒಗ್ಗೂಡಿ ಮಾಡಿದ ‘ವಚನ ದರ್ಶನ ಮಿಥ್ಯ, ಸತ್ಯ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಯಶಸ್ವಿಯಾಗಿರುವುದು ಪಂಚಪೀಠದ ಪೀಠಾಧಿಪತಿಗಳ ನಿದ್ದೆಗೆಡಿಸಿದ ಹಾಗೆ ಕಾಣುತ್ತಿದೆ. ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಅವರು ಭಾಗವಹಿಸಿ ಲಿಂಗಾಯತ ಸಮಾಜ ಸಂಘಟನೆ ಮತ್ತು ಬಸವತತ್ವದ ಪರವಾಗಿ ಮಾತನಾಡಿರುವುದು ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ’ ಎಂದು ತಿಳಿಸಿದ್ದಾರೆ.

‘ಪಂಚಪೀಠದ ಜಗದ್ಗುರುಗಳ ಹೇಳಿಕೆಯಲ್ಲಿ ವೀರಶೈವ ಧರ್ಮದ ಪ್ರಾಚೀನತೆ, ಶರಣರ ವಚನಗಳಲ್ಲಿ ವೀರಶೈವ ಪದಬಳಕೆ, ಹಿಂದೂ ಕಾಯ್ದೆಗಳು ಹಾಗೂ ಕೆಲವು ಅಧಿವೇಶನಗಳ ನಿರ್ಣಯಗಳ ಕುರಿತು ನಿಲುವು ಸ್ಪಷ್ಟಪಡಿಸುವಲ್ಲಿ ದ್ವಂದ್ವ ನೀತಿ ಅನುಸರಿಸಿದ್ದಾರೆ. ಒಂದು ಕಡೆ ವೀರಶೈವ ಧರ್ಮ ಪ್ರಾಚೀನ ಎಂದು ಹೇಳುತ್ತಲೇ ಅದು ಹಿಂದೂ ಧರ್ಮದ ಭಾಗವೆಂದು ಘೋಷಿಸಿದ್ದಾರೆ. ಪಂಚಪೀಠಾಧೀಶರು ವೀರಶೈವರೇ ಅಥವಾ ಹಿಂದೂಗಳೇ ಎಂಬುದು ಮೊದಲು ನಿರ್ಣಯಿಸಿಕೊಳ್ಳಬೇಕುʼ ಎಂದು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisements

ʼಒಂದು ಧರ್ಮದಲ್ಲಿ ಇನ್ನೊಂದು ಧರ್ಮ ಇರಲು ಸಾಧ್ಯವಿಲ್ಲ. ಪಂಚಪೀಠಗಳಿಗೆ ವೀರಶೈವ ಧರ್ಮ ಎಂದು ಹೇಳುವುದಾದರೆ ಅವರು ಹಿಂದೂಗಳಲ್ಲ ಎಂದು ಹೇಳಬೇಕಾಗುತ್ತದೆ. ಅವರು ನಾವು ಹಿಂದೂಗಳು ಎಂದು ಹೇಳುವುದಾದರೆ ವೀರಶೈವ ಧರ್ಮದವರಲ್ಲ ಎಂದು ಹೇಳಬೇಕಾಗುತ್ತದೆ. ಪಂಚಪೀಠಗಳ ಪ್ರಕಾರ ಐವರು ಆಚಾರ್ಯರು ಶಿವನ ಪಂಚಮುಖಗಳಿಂದ ಉದ್ಭವಿಸಿದರೆಂದು ಹೇಳಲಾಗಿದೆ. ಮತ್ತೆ ಅವರು ಶಿವನು ಆಯ್ಕೆ ಮಾಡಿ ಧರ್ಮ ಸಂಸ್ಥಾಪಿಸಲೋಸುಗ ಭೂಲೋಕಕ್ಕೆ ಕಳುಹಿಸಿಕೊಟ್ಟ ಐವರು ಶಿವಗಣಂಗಳೆಂದು ಹೇಳಲಾಗಿದೆ. ಹೇಳಲಾಗುತ್ತದೆ. ಇವು ಎರಡು ಹೇಳಿಕೆ ಪರಸ್ಪರ ವಿರುದ್ಧವಾಗಿರುವುದು ಕಣ್ಣಿಗೆ ಹೊಡೆಯುತ್ತದೆʼ ಎಂದು ಹೇಳಿದ್ದಾರೆ.

ʼಪಂಚಪೀಠದ ಹೇಳಿಕೆಗಳಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದ ನಿರ್ಣಯಗಳ ಕುರಿತು ಉಲ್ಲೇಖ ಇದೆ. ಆದರೆ ಇತ್ತೀಚಿಗೆ 2023 ರಲ್ಲಿ ದಾವಣಗೆರೆಯಲ್ಲಿ ನಡೆದ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ 26 ಅಧಿವೇಶನದಲ್ಲಿ ‘ವೀರಶೈವ-ಲಿಂಗಾಯತರು ಹಿಂದುಗಳಲ್ಲ’ ಎಂಬ ನಿರ್ಣಯ ತೆಗೆದುಕೊಂಡಿರುವುದು ಪಂಚಪೀಠಗಳಿಗೆ ಮರೆವು ಆದಂತೆ ಕಾಣುತ್ತದೆ. ವಿಶೇಷವೆಂದರೆ ಈ ನಿರ್ಣಯ ಮಂಡನೆಯ ಸಂದರ್ಭದಲ್ಲಿ ವೇದಿಕೆಯಲ್ಲಿ ಪಂಚಪೀಠದ ಕೆಲವು ಪೀಠಾಧೀಶರು ಉಪಸ್ಥಿರಿದ್ದರು. ಆ ಸಂದರ್ಭದಲ್ಲಿ ಅವರು ತಾಳಿದ ಮೌನ ಏನೂ ಸೂಚಿಸುತ್ತದೆʼ ಎಂದು ಪ್ರಶ್ನಿಸಿದ್ದಾರೆ.

ಪಂಚಪೀಠದವರು ಅಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಕೇಂದ್ರ ಸರಕಾರ ತಿರಸ್ಕರಿಸಿದೆ ಎಂದು ಹೇಳುತ್ತಾರೆ. ಆದರೆ ಕೇಂದ್ರ ಸರಕಾರ ನೀಡಿರುವ ಉತ್ತರದಲ್ಲಿ 1.ಅಂಗಾಯತದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಇದ್ದಾರೆ. ಅಂಗಾಯತರನ್ನು ಪ್ರತ್ಯೇಕ ಧರ್ಮವೆಂದು ಘೋಷಿಸಿದರೆ ಅವರಿಗೆ ದೊರೆಯುವ ಎಲ್ಲ ಸೌಲಭ್ಯಗಳು ನಿಂತು ಹೋಗುತ್ತದೆ. 2.1871 ಜನಗಣತಿಯಿಂದ ಈವರೆಗಿನ ಎಲ್ಲ ಜನಗಣತಿಯಲ್ಲಿ ಅಂಗಾಯತರನ್ನು ಹಿಂದು ಧರ್ಮದ ಒಂದು ಶಾಖೆಯೆಂದು ಪರಿಗಣಿಸಲ್ಪಟ್ಟಿದೆ. ಹಾಗಾಗಿ ಲಿಂಗಾಯತರನ್ನು ಪ್ರತ್ಯೇಕ ಧರ್ಮವೆಂದು ಘೋಷಿಸಲು ಕಷ್ಟ ಆಗುತ್ತಿದೆ. ಈ ಎರಡು ಕಾರಣಗಳನ್ನು ತಿಳಿಸಿದೆ. ಆದರೆ ಈ ಎರಡು ಕಾರಣಗಳು ಮಿಥ್ಯ ಮತ್ತು ತಪ್ಪು ಗ್ರಹಿಕೆಯ ಮೇಲೆ ನಿಂತಿವೆ. ಅದಕ್ಕಾಗಿ ಪಂಚಪೀಠದ ಪೀಠಾಧಿಪತಿಗಳು ಕೇಂದ್ರ ಸರಕಾರದ ಉತ್ತರವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕುʼ ಎಂದು ಆಗ್ರಹಿಸಿದರು.

ʼಬಸವಾದಿ ಶರಣರ ವಚನಗಳಲ್ಲಿ ವೀರಶೈವ ಪದ ಬಳಕೆಯ ಬಗ್ಗೆ ಪಂಚಪೀಠದವರು ಹೇಳಿದ್ದಾರೆ. ಶರಣರ ವಚನಗಳಲ್ಲಿ 15ನೇ ಶತಮಾನದ ನಂತರ ಸೇರಿಸಲಾದ ಸಂಸ್ಕೃತ ಶ್ಲೋಕಗಳಲ್ಲಿ ವೀರಶೈವ ಪದ ಹೆಚ್ಚಿನ ರೀತಿಯಲ್ಲಿ ಬಳಕೆಯಾಗಿರುವುದು ನಾಡಿನ ವಿದ್ವಾಂಸರು ಖಚಿತಪಡಿಸಿದ್ದಾರೆ. ಆದರೆ ವಚನಗಳಲ್ಲಿ ಬರುವ ಅಂಗಾಯತ, ಲಿಂಗವಂತ ಪದ ಪ್ರಯೋಗ ಮೂಲ ವಚನಗಳಲ್ಲಿದ್ದು, ಅದು ಸಹಜವಾಗಿ ಬಳಕೆಯಾಗಿದೆ. ಕೇವಲ ಯಾವುದೇ ಒಂದು ಶಬ್ದದ ಬಳಕೆಯಿಂದ ಆ ಧರ್ಮದ ಇತಿಹಾಸ ಮತ್ತು ಸಿದ್ಧಾಂತ ಹೇಳಲು ಸಾಧ್ಯವಿಲ್ಲ. ಯಾವ ಶಬ್ದ ಯಾವ ಅರ್ಥದಿಂದ ಬಳಕೆಯಾಗಿದೆ ಎಂಬುದು ಹೆಚ್ಚು ಅರ್ಥಪೂರ್ಣʼ ಎಂದಿದ್ದಾರೆ.

ʼಶರಣರ ಸಮಗ್ರ ಚಿಂತನೆ ಯಾವ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ ಎಂಬ ಅರಿವಿನಿಂದ ಅವರ ವಚನಗಳು ಅರ್ಥೈಸಬೇಕೇ ವಿನಃ ತಮ್ಮ ಪೂರ್ವಗ್ರಹಪೀಡಿತ ಆಲೋಚನೆಗಳು ಶರಣರ ಮೇಲೆ ಹೇರಿಸಿ ಲಿಂಗಾಯತ ಸಮಾಜದ ಮೇಲೆ ಮಾಡುತ್ತಿರುವ ಸವಾರಿ ಪಂಚಪೀಠಗಳು ನಿಲ್ಲಿಸಬೇಕು. ಪಂಚಪೀಠದ ಜಗದ್ಗುರುಗಳು ಮಾತಿನ ಭರಾಟೆಯಲ್ಲಿ ನಾಡಿನ ಖ್ಯಾತ ಚಿಂತಕ ಗೊ.ರು.ಚನ್ನಬಸಪ್ಪನವರ ಕುರಿತು ಏಕವಚನದಲ್ಲಿ ಮಾತನಾಡಿರುವುದು ಅವರ ಗುರುತ್ವಕ್ಕೆ ಅವರೇ ಮಾಡಿದ ದ್ರೋಹʼ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬೀದರ್‌ | ಬಿಸಿಎಂ ಹಾಸ್ಟೆಲ್‌ಗಳಲ್ಲಿ ಅವ್ಯವಹಾರ ; ತನಿಖೆಗೆ ಆಗ್ರಹ

ಪಂಚಪೀಠಗಳು ಪದೇ ಪದೇ ಧರ್ಮ ಒಡೆಯುವ ಮಾತನಾಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಅಂಗಾಯತ ಹೋರಾಟ ಅಖಂಡ ಅಂಗಾಯತ ಸಮಾಜ ಒಗ್ಗೂಡಿಸುವ ಲಿಂಗಾಯತ ಧರ್ಮದಲ್ಲಿರುವ ನೂರಾರು ಒಳಪಂಗಡಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹೋರಾಡುವ ಹೋರಾಟವಾಗಿದೆ. ಅದಕ್ಕಾಗಿ ಪಂಚಪೀಠದ ಪೀಠಾಧಿಪತಿಗಳು ಸಮಸ್ತ ಅಂಗಾಯತ ಸಮಾಜದ ಅಸ್ಮಿತೆಯ ಹೋರಾಟಕ್ಕೆ ಪದೇ ಪದೇ ಅಡ್ಡ ಬರುವ ಮೂಲಕ ಸಮಾಜದ ಸಮಗ್ರ ಏಳಿಗೆಗೆ ಕೊಡಲಿ ಪೆಟ್ಟು ಹಾಕುವ ಬದಲಾಗಿ ಈ ಹೋರಾಟವನ್ನು ಬೆಂಬಲಿಸಬೇಕುʼ ಎಂದು ಕೋರಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ: ಚಲನಚಿತ್ರ ನಿರ್ದೇಶಕಿ ಸುಮನ್ ಕಿತ್ತೂರು

ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರದಲ್ಲಿ ಅಲೆಮಾರಿ ಸಮುದಾಯಗಳಿಗೆ ಸಾಂವಿಧಾನಿಕ ನ್ಯಾಯ ಸಿಗಲಿ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

ಚಿತ್ರದುರ್ಗ | ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಅನ್ಯಾಯ ಸರಿಪಡಿಸಿ; ಮಹಾನಾಯಕ ದಲಿತ ಸೇನೆ

ಒಳಮೀಸಲಾತಿ ವರ್ಗೀಕರಣದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಿ ಸಾಮಾಜಿಕ ನ್ಯಾಯ ಎತ್ತಿ...

Download Eedina App Android / iOS

X