ಬೆಂಗಳೂರು | ಜಯನಗರದಲ್ಲಿ ನಾಳೆ ಸಾರ್ವಜನಿಕರಿಗಾಗಿ ‘ಮಸೀದಿ ದರ್ಶನ’ ಕಾರ್ಯಕ್ರಮ

Date:

Advertisements

ಮಸೀದಿ ಎಂದರೇನು? ಮಸೀದಿ, ಮದ್ರಸಾಗಳಿಗೆ ಇರುವ ವ್ಯತ್ಯಾಸ ಏನು? ಮಸೀದಿ ಒಳಗಡೆ ಏನೆಲ್ಲ ಇರುತ್ತೆ? ಮುಸ್ಲಿಮರ ಪ್ರಾರ್ಥನೆ ಹೇಗಿರುತ್ತದೆ? ಮಸೀದಿಯಲ್ಲಿ ಮುಸ್ಲಿಮರು ಯಾವ ದೇವರಿರುತ್ತಾರೆ? ಇಂತಹ ನೂರಾರು ಪ್ರಶ್ನೆಗಳು ಮುಸ್ಲಿಮೇತರರಲ್ಲಿ ಇರುವುದು ಸಹಜ. ಮಸೀದಿ ಬಗ್ಗೆ ಹೆಚ್ಚಿನ ಜನರಿಗೆ ಯಾವುದೇ ಸ್ಪಷ್ಟ ಪರಿಕಲ್ಪನೆ ಇರುವುದಿಲ್ಲ. ಕೇವಲ ಮುಸ್ಲಿಮರಿಗಷ್ಟೇ ಆ ಕೇಂದ್ರವು ಸೀಮಿತವಾಗಿರುತ್ತದೆ ಅನ್ನುವ ಭಾವನೆ ಇದೆ.

ಹೀಗಾಗಿ, ಮಸೀದಿಯ ಬಗ್ಗೆ ತಿಳಿದುಕೊಳ್ಳಲು ಎಲ್ಲ ಧರ್ಮೀಯರಿಗೂ ಅವಕಾಶ ಕಲ್ಪಿಸಲಾಗಿದ್ದು, ಬೆಂಗಳೂರಿನ ಜಯನಗರದಲ್ಲಿ ನಾಳೆ(ಫೆ.17) ಸಾರ್ವಜನಿಕರಿಗಾಗಿ ‘ಮಸೀದಿ ದರ್ಶನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಮಸೀದಿ ದರ್ಶನ ಸಂಘಟಕರು ಮಾಹಿತಿ ನೀಡಿದ್ದಾರೆ.

ಯಾವಾಗ ಕಾರ್ಯಕ್ರಮ?
‘ಮಸೀದಿ ದರ್ಶನ’ ಅನ್ನುವ ಈ ವಿಶಿಷ್ಟ ಕಾರ್ಯಕ್ರಮವು ಫೆ.17ರ ಶನಿವಾರದಂದು ಬೆಳಗ್ಗೆ 11ರಿಂದ ಸಂಜೆ 8 ಗಂಟೆಯವರೆಗೆ ನಡೆಯಲಿದೆ. ಸಂಜೆ 4ರಿಂದ 8ರವರೆಗೆ ‘ಮೀಡಿಯಾ ಸೆಷನ್’ ಇರಲಿದೆ. ಈ ಸಂದರ್ಭ ಸಾಯಂಕಾಲ, ಸೂರ್ಯಾಸ್ತ ಹಾಗೂ ರಾತ್ರಿಯ ನಮಾಝ್ ಹಾಗೂ ಆಝಾನ್ ಕೂಗುವುದನ್ನು ಹತ್ತಿರದಿಂದ ನೋಡಬಹುದಾಗಿದೆ.‌ ಈ ಕಾರ್ಯಕ್ರಮದ ವೇಳೆ ಇಸ್ಲಾಮಿಕ್ ವಸ್ತು ಪ್ರದರ್ಶನ, ಸಂವಾದಗಳನ್ನು ನಡೆಸಬಹುದಾಗಿದೆ.

Advertisements

WhatsApp Image 2024 02 16 at 9.01.04 PM

ಯಾರೆಲ್ಲ ಭಾಗವಹಿಸಬಹುದು?
‘ಮಸೀದಿ ದರ್ಶನ’ ಕಾರ್ಯಕ್ರಮದಲ್ಲಿ ಯಾವುದೇ ಮುಸ್ಲಿಮೇತರ ಧರ್ಮೀಯ ಪುರುಷ ಹಾಗೂ ಮಹಿಳೆಯರು ಭಾಗವಹಿಸಬಹುದಾಗಿದೆ.

ಸ್ಥಳ ಎಲ್ಲಿ?

‘ಮಸೀದಿ ದರ್ಶನ’ ಕಾರ್ಯಕ್ರಮವು ಬೆಂಗಳೂರಿನ ಜಯನಗರದ ಬನ್ನೇರುಘಟ್ಟ ಮುಖ್ಯ ರಸ್ತೆ(ಶ್ರೀ ಜಯದೇವ ಆಸ್ಪತ್ರೆಯ ಹತ್ತಿರ)ಯಲ್ಲಿರುವ ಬಿಲಾಲ್ ಮಸೀದಿಯಲ್ಲಿ ನಡೆಯಲಿದೆ.

Location Map Link ಇಲ್ಲಿದೆ: ಮಸೀದಿಯ ಹೆಸರಿನ ಮೇಲೆ ಕ್ಲಿಕ್ ಮಾಡಿ

ಬಿಲಾಲ್ ಮಸೀದಿ, ಬನ್ನೇರುಘಟ್ಟ ಮುಖ್ಯ ರಸ್ತೆ(ಶ್ರೀ ಜಯದೇವ ಆಸ್ಪತ್ರೆಯ ಹತ್ತಿರ), ಜಯನಗರ, ಬೆಂಗಳೂರು

363

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X