ನೀಟ್ ಅಕ್ರಮ | ಹಣಕ್ಕಾಗಿ ಬದ್ಧತೆ ಮರೆತವಾ ಮಾಧ್ಯಮಗಳು?

Date:

Advertisements

ಸದ್ಯ ದೇಶಾದ್ಯಂತ ನೀಟ್-ಯುಜಿ ವೈದ್ಯಕೀಯ ಪ್ರವೇಶ ಪರೀಕ್ಷೆ ದೊಡ್ಡ ಚರ್ಚೆಯಾಗಿದೆ. ವೈದ್ಯಕೀಯ ಲೋಕಕ್ಕೆ ಕಾಲು ಇಡಬೇಕೆಂದು ಕನಸು ಹೊತ್ತಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಈ ಬಾರಿಯ ನೀಟ್ ಪರೀಕ್ಷೆ ಆಘಾತ ಉಂಟುಮಾಡಿದೆ. ಅವರ ಆತ್ಮಸ್ಥೈರ್ಯವನ್ನೂ ಕುಂದಿಸಿದೆ. ಗ್ರೇಸ್‌ ಅಂಕ ನೀಡಿದ್ದು ಒಂದೆಡೆಯಾದರೆ, ನಿಗದಿತ ಸಮಯಕ್ಕೂ ಮುನ್ನವೇ ಫಲಿತಾಂಶ ಪ್ರಕಟವಾಗಿದ್ದು, ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ನೀಟ್‌ ಪರೀಕ್ಷೆ ನೀಟಾಗಿ ನಡೆದಿದೆಯೇ ಎಂಬ ಸಂದೇಹಗಳಿಗೂ ದಾರಿ ಮಾಡಿಕೊಟ್ಟಿದೆ.

ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಪ್ರವೇಶ ಪರೀಕ್ಷೆಯಾಗಿ 2012ರಲ್ಲಿ ನೀಟ್‌ ಅನ್ನು ಆರಂಭಿಸಲಾಯಿತು. ಈ ಪರೀಕ್ಷೆಯನ್ನು ಎದುರಿಸಲಾಗದೆ, ಪಾಸ್ ಮಾಡಲಾಗದೆ ಹಲವಾರು ವಿದ್ಯಾರ್ಥಿಗಳು ಆತ್ಮಹತ್ಯೆಯ ಹಾದಿಹಿಡಿದಿದ್ದಾರೆ. ವೈದ್ಯರಾಗಬೇಕು ಎಂಬ ಕನಸು ಹೊತ್ತಿದ್ದ ಹಲವು ಯುವಜನರ ಕನಸು ಕಮರಿ ಹೋಗಿದೆ.

ಈ ನಡುವೆ, ನೀಟ್‌ ಪರೀಕ್ಷೆಯನ್ನೇ ಬಂಡವಾಳ ಮಾಡಿಕೊಂಡ ಹಲವಾರು ಸಂಸ್ಥೆಗಳು ಕೋಚಿಂಗ್‌ ನೆಪದಲ್ಲಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರನ್ನು ಹಿಂಡುತ್ತಿವೆ. ಕೋಚಿಂಗ್‌ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿವೆ. ತಮ್ಮ ಮಕ್ಕಳು ವೈದ್ಯನಾಗಬೇಕೆಂಬ ಆಸೆಯಲ್ಲಿ ಬಡವರು, ರೈತರು, ಕಾರ್ಮಿಕರು ಕೂಡ ತಾವು ದುಡಿದಿದ್ದೆಲ್ಲವನ್ನೂ ಕೂಡಿಟ್ಟು, ಸಾಲ ಮಾಡಿ ಕೋಚಿಂಗ್‌ ಸೆಂಟಂರ್‌ಗಳಿಗೆ ಸುರಿಯುತ್ತಿದ್ದಾರೆ. ಆದರೆ, ಈಗ ನೀಟ್‌ನಲ್ಲಿಯೂ ಅಕ್ರಮ ನಡೆಯುತ್ತಿದೆ ಎಂಬುದು ವಿದ್ಯಾರ್ಥಿಗಳು-ಪೋಷಕರಿಗೆ ಆಘಾತ ಹುಟ್ಟುಹಾಕಿದೆ.

Advertisements

ಅಂದಹಾಗೆ, ನೀಟ್‌ ಪರೀಕ್ಷೆಯ ಫಲಿತಾಂಶ ಜೂನ್‌ 14ರಂದು ಪ್ರಕಟವಾಗಬೇಕಿತ್ತು. ಆದರೆ, ನಿಗದಿ ಮಾಡಿದ ದಿನಕ್ಕಿಂತ 10 ದಿನ ಮುಂಚಿತವಾಗಿಯೇ ಅಂದರೆ, ಲೋಕಸಭಾ ಚುನಾವಣೆಯ ಫಲಿತಾಂಶದ ದಿನವೇ (ಜೂನ್ 4) ನೀಟ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಯಿತು.

ಚುನಾವಣಾ ಫಲಿತಾಂಶದಂದೇ ನೀಟ್ ಫಲಿತಾಂಶ ಪ್ರಕಟಿಸಿದ್ದು, ನೀಟ್‌ನಲ್ಲಿ ಅಕ್ರಮ ನಡೆದಿರಬಹುದು. ಅದನ್ನು ಮುಚ್ಚಿ ಹಾಕುವ ಹುನ್ನಾರ ಇರಬಹುದು ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಅಲ್ಲದೆ, ಮೇ 5ರಂದೇ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಕೆಲವೆಡೆ ಒಂದೇ ಕೇಂದ್ರ ವಿದ್ಯಾರ್ಥಿಗಳು ಟಾಪರ್‌ಗಳಾಗಿದ್ದಾರೆ. ಮೊದಲೇ ಉತ್ತರಿಸಿದ್ದ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟು, ಮರಳಿ ಪಡೆಯಲಾಗಿದೆ. ಕೆಲ ಕೇಂದ್ರಗಳ ವಿದ್ಯಾರ್ಥಿಗಳಿಗಷ್ಟೇ ಗ್ರೇಸ್ ಅಂಕ ನೀಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಅವ್ಯವಹಾರ ಆರೋಪದ ಹಿನ್ನೆಲೆ, ಹೊಸದಾಗಿ ನೀಟ್‌-ಯುಜಿ ಪರೀಕ್ಷೆ ನಡೆಸಬೇಕೆಂದು ಕೋರಿ 10 ನೀಟ್‌ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ವಿಕ್ರಮ್‌ ನಾಥ್‌ ಮತ್ತು ನ್ಯಾ. ಅಹ್ಸಾನುದ್ದೀನ್‌ ಅಮಾನುಲ್ಲಾ ಅವರಿದ್ದ ಪೀಠ, “ಇದೇನೂ ಸರಳ ವಿಚಾರವಲ್ಲ. ನೀವು ಪರೀಕ್ಷೆಯ ಪಾವಿತ್ರ್ಯವನ್ನೇ ಹಾಳು ಮಾಡಿದ್ದೀರಿ” ಎಂದು ಎನ್‌ಟಿಎ ವಿರುದ್ಧ ಗುಡುಗಿತ್ತು. ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿ ಎನ್‌ಟಿಎ ಹಾಗೂ ಕೇಂದ್ರ ಸರಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಆದರೂ, ಎಂಬಿಬಿಎಸ್‌, ಬಿಡಿಎಸ್‌ ಮತ್ತು ಇತರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುತ್ತಿರುವ ಕೌನ್ಸೆಲಿಂಗ್‌ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲು ಕೋರ್ಟ್‌ ನಿರಾಕರಿಸಿತು.

ನೀಟ್‌ ಪರೀಕ್ಷೆ ಮತ್ತು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ನೀಟ್‌ ರದ್ದುಗೊಳಿಸುವಂತೆ, ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಗಳು ಕೇಳಿಬರುತ್ತಿವೆ. ಇಂತಹ ಹತ್ತಾರು ಸುದ್ದಿಗಳನ್ನು ಮಾಧ್ಯಮಗಳು ಬಿತ್ತರಿಸುತ್ತಿವೆ. ಅಲ್ಲದೆ, ಇಂತಹ ಪರೀಕ್ಷಾ ಅಕ್ರಮಗಳಲ್ಲಿ ತರಬೇತಿ ಕೇಂದ್ರಗಳ ಪಾತ್ರ ಹೆಚ್ಚಾಗಿಯೇ ಇರುತ್ತದೆ. ಅದು ಮಾಧ್ಯಮಗಳಿಗೂ ಗೊತ್ತು. ಆದರೆ, ವಿದ್ಯಾರ್ಥಿಗಳ ಭವಿಷ್ಯ, ಜೀವ-ಜೀವನದ ಬಗ್ಗೆ ಮಾಧ್ಯಮಗಳು ತಮ್ಮ ಕಾಳಜಿಯನ್ನು ಪ್ರದರ್ಶಿಸುವಲ್ಲಿ ವಿಫಲವಾಗಿವೆ.

ನೀಟ್

ನೀಟ್ ಅವ್ಯವಹಾರವನ್ನೂ ಒಂದು ಸುದ್ದಿಯಾಗಿಯಷ್ಟೇ ನೋಡುತ್ತಿವೆ. ಒಳಗೆ ನೀಟ್‌ ವಿರುದ್ಧದ ಸುದ್ದಿ ಪ್ರಕಟಿಸಿ, ಮುಖಪುಟದಲ್ಲಿ, ಜಾಕೆಟ್ ಪುಟದಲ್ಲಿ ನೀಟ್‌ ತರಬೇತಿ ಕೇಂದ್ರಗಳ ಪುಟಗಟ್ಟಲೆ ಜಾಹೀರಾತುಗಳನ್ನು ಪ್ರಕಟಿಸುತ್ತಿವೆ. ಹಣಕ್ಕಾಗಿ ತಮ್ಮ ಬದ್ದತೆ, ಕಾಳಜಿಗಳನ್ನು ಮಾರಿಕೊಳ್ಳುತ್ತಿವೆ. ಜಾಹೀರಾತುಗಳ ಮೂಲಕ ವಿದ್ಯಾರ್ಥಿಗಳು-ಪೋಷಕರ ಮನೆ ಬಾಗಿಲಿಗೆ ತರಬೇತಿ ಕೇಂದ್ರಗಳನ್ನು ಕೊಂಡೊಯ್ದು, ತರಬೇತಿಗಾಗಿ ಸೇರುವಂತೆ ಪ್ರೇರೇಪಿಸುತ್ತಿವೆ. ಪ್ರಚೋದಿಸುತ್ತಿವೆ.

ತರಬೇತಿ ಕೇಂದ್ರಗಳು ತಮ್ಮ ಆದಾಯಕ್ಕಾಗಿ ತರಬೇತಿಯನ್ನು ಮಾರಾಟದ ವಸ್ತುವಾಗಿಯೂ, ವಿದ್ಯಾರ್ಥಿಗಳನ್ನು ಗ್ರಾಹಕರನ್ನಾಗಿಯೂ ಮಾಡಿಕೊಂಡಿವೆ. ಅವುಗಳ ಪಾಲಿಗೆ ವಿದ್ಯಾರ್ಥಿಗಳ ಪೋಷಕರು ‘ಎಟಿಎಂ’ಗಳಾಗಿದ್ದಾರೆ. ತಮ್ಮ ಕೇಂದ್ರಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯಲು ಪತ್ರಿಕೆಗಳಲ್ಲಿ, ಮಾಧ್ಯಮಗಳಲ್ಲಿ ಬೃಹತ್ ಜಾಹೀರಾತುಗಳನ್ನು ನೀಡುತ್ತಿವೆ. ವಿದ್ಯಾರ್ಥಿಗಳಿಂದ ಸುಲಿಗೆ ಮಾಡಿದ ಹಣವನ್ನು ಜಾಹೀರಾತುಗಳನ್ನು ನೀಡುವ ಮಾಧ್ಯಮಗಳಿಗೂ ಹಂಚುತ್ತಿವೆ.

ಪರೀಕ್ಷಾ ಕೇಂದ್ರಗಳನ್ನು ಪ್ರಶ್ನಿಸಬೇಕಾದ, ವಿದ್ಯಾರ್ಥಿಗಳ ಮೇಲೆ ಅವುಗಳ ಧೋರಣೆಯನ್ನು ಖಂಡಿಸಬೇಕಾದ ಮಾಧ್ಯಮಗಳು ಜಾಹೀರಾತು ಪಡೆದು, ಪ್ರಕಟಿಸುವ ಮೂಲಕ ವಿದ್ಯಾರ್ಥಿಗಳ ಪರಿಶ್ರಮ, ಸಂಕಷ್ಟ, ಅವರ ಪೋಷಕರ ಕಣ್ಣೀರಿನ ಹಣದಲ್ಲಿ ಪಾಲು ಪಡೆಯುತ್ತಿವೆ. ತರಬೇತಿ ಕೇಂದ್ರಗಳ ಒತ್ತಡ, ಸುಲಿಗೆಯಲ್ಲಿ ಪರೋಕ್ಷವಾಗಿ ಭಾಗಿಯಾಗುತ್ತಿವೆ.

ಈ ಸುದ್ದಿ ಓದಿದ್ದೀರಾ? ನಟ ದರ್ಶನ್ ಬಂಧನ | ಸಾಮಾಜಿಕ ಜಾಲತಾಣ, ನಾಗರಿಕ ಸಮಾಜ ಮತ್ತು ಕಾನೂನು ವೈಫಲ್ಯ

ಈ ಬಗ್ಗೆ ಈ ದಿನ.ಕಾಮ್‌ ಜತೆಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಶ್ರೀಪಾದ್ ಭಟ್, “ಹಿಂದೆ ಟೂಶನ್‌ಗಳಿದ್ದವು. ಈಗ ಕೋಚಿಂಗ್ ಸೆಂಟರ್‌ಗಳಾಗಿ ಬೆಳದಿವೆ. ವಿದ್ಯಾರ್ಥಿಗಳಿಂದ ಲಕ್ಷಾಂತರ ಪೀಕುವ ಮಾಫಿಯಾ ಆಗಿದೆ. ನೀಟ್‌ ಅನ್ನೊದನ್ನ ಕೋಚಿಂಗ್ ಸೆಂಟರ್‌ಗಳು ಕೇಂದ್ರಿತವಾಗಿ ತರುತ್ತಿವೆ. ಮಾಧ್ಯಮಗಳು ಈ ಬಗ್ಗೆ ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ ಅರಿವು ಮೂಡಿಸಬೇಕು. ಆದರೆ, ಮಾಧ್ಯಮಗಳು ಮತ್ತು ಪತ್ರಿಕೆಗಳು ಈ ಕೋಚಿಂಗ್‌ ಸೆಂಟರ್‌ಗಳ ಜಾಹೀರಾತನ್ನು ತಮ್ಮದೇ ಪತ್ರಿಕೆಯಲ್ಲಿ ಮೊದಲನೇಯ ಪುಟದಲ್ಲಿಯೆ ಹಾಕುತ್ತಾರೆ. ಒಳಗಡೆ ಈ ನೀಟ್‌ ಬಗ್ಗೆ ವಿಮರ್ಶೆ ಮಾಡಿ ಬರೆಯುತ್ತವೆ. ಸದ್ಯಕ್ಕೆ ಈ ರೀತಿಯಲ್ಲಿ ಸುದ್ದಿಗಳು ಬರುತ್ತಿದ್ದಾವಲ್ಲ ಎಂಬ ಬಗ್ಗೆ ಖುಷಿ ಪಡಬೇಕು” ಎಂದರು.

ಶಿಕ್ಷಣ ತಜ್ಞ ನಿರಂಜನಾರಾಧ್ಯ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಶಿಕ್ಷಣದಲ್ಲಿ ಸಮಾನತೆಗೆ ಅವಕಾಶವೇ ಇಲ್ಲ. ಈ ಪರೀಕ್ಷೆಗಳು ಶಿಕ್ಷಣ ವ್ಯವಸ್ಥೆಯನ್ನು ಶಿಥಿಲ ಮಾಡಿ ಶಾಲೆ ಬದಲು ಕೋಚಿಂಗ್ ಸೆಂಟರ್ ಮಾಡುತ್ತಿವೆ. ಶಾಲೆ ಜ್ಞಾನವನ್ನು ಕಟ್ಟಿಕೊಳ್ಳುವಂತಹ ಸಾಧನ ಆದರೆ, ಈ ಕೋಚಿಂಗ್ ಸೆಂಟರ್ ಅನಾರೋಗ್ಯಕರವಾಗಿದೆ. ಇಲ್ಲಿ ಸೇರಬೇಕೆಂದರೆ, ಬಡ ಮಕ್ಕಳು ಹೊಲ-ಮನೆ ಮಾರಬೇಕಾಗುತ್ತದೆ. ಏಕೆಂದರೆ, ಲಕ್ಷಾಂತರ ಫೀಸ್ ಇರುತ್ತೆ. ಇದೊಂದು ಹೊಸ ಬಗೆಯ ದರೋಡೆ” ಎಂದು ಹೇಳಿದರು.

“ಈ ರೀತಿಯ ದರೋಡೆಗೆ ಮಾಧ್ಯಮಗಳು ಜಾಹೀರಾತು ನೀಡುತ್ತವೆ. ಇಂತಹ ಜಾಹೀರಾತುಗಳನ್ನು ಪ್ರಕಟ ಮಾಡಿ ಮಕ್ಕಳನ್ನು ಸೆಳೆಯಬೇಕೆಂಬ ಕೃತ್ಯ ಇದೆ. ಇದಕ್ಕೆ ಮಾಧ್ಯಮಗಳು ಕೂಡ ಒಂದು ನಿಲುವು ತೆಗೆದುಕೊಳ್ಳಬೇಕು” ಎಂದು ತಿಳಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X