2024ರ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಸಿಲಿಕಾನ್ ಸಿಟಿ ಮಂದಿ ಕಾತುರದಿಂದ ಕಾಯುತ್ತಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ಸ ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ ಸೇರಿ ನಗರದ ಹಲವೆಡೆ ಹೊಸವರ್ಷ ಆಚರಣೆ ನಡೆಯಲಿದೆ. ಹೊಸ ವರ್ಷಾಚರಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು, ವಾಹನ ಸವಾರರು ಹಾಗೂ ಪಾದಚಾರಿಗಳು ಸೇರುವುದರಿಂದ ಅವರ ಹಿತದೃಷ್ಟಿಯಿಂದ ವಾಹನಗಳ ಸಂಚಾರ ಮಾರ್ಪಾಡು ಮಾಡಿ ಬೆಂಗಳೂರು ಸಂಚಾರ ಪೊಲೀಸ್ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಡಿ.31ರಂದು ರಾತ್ರಿ 8 ಗಂಟೆಯಿಂದ 2024 ಜನವರಿ 1ರಂದು ರಾತ್ರಿ 1 ಗಂಟೆಯವರೆಗೆ ಕೆಲವು ರಸ್ತೆಗಳಲ್ಲಿ ಪೊಲೀಸ್ ವಾಹನಗಳು ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಅವು ಇಂತಿವೆ.
ವಾಹನಗಳ ಪ್ರವೇಶ ನಿಷೇಧ
- ಎಂ.ಜಿ.ರಸ್ತೆ ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಜಂಕ್ಷನ್ ವರೆಗೆ.
- ಬ್ರಿಗೇಡ್ ರಸ್ತೆಯಲ್ಲಿ, ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಅಪೇರಾ ಜಂಕ್ಷನ್‌ವರೆಗೆ.
- ಚರ್ಚ್ ಸ್ಟ್ರೀಟ್‌ರಲ್ಲಿ, ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್ ವರೆಗೆ.
- ರೆಸ್ಟ್ ಹೌಸ್ ರಸ್ತೆಯಲ್ಲಿ ಮ್ಯೂಸಿಯಂ ರಸ್ತೆ ಜಂಕ್ಷನ್ ನಿಂದ ಬ್ರಿಗೇಡ್‌ರಸ್ತೆ ಜಂಕ್ಷನ್ ವರೆಗೆ.
- ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ ರೆಸಿಡೆನ್ಸಿ ರಸ್ತೆ ಜಂಕ್ಷನ್ ನಿಂದ ಎಂ.ಜಿ ರಸ್ತೆ ಜಂಕ್ಷನ್‌ವರೆಗೆ (ಶಂಕರ್ ನಾಗ್ ಚಿತ್ರಮಂದಿರ)
- ರೆಸಿಡೆನ್ಸಿ ರಸ್ತೆಯ ಆಶಿರ್ವಾದಂ ಜಂಕ್ಷನ್‌ನಿಂದ ಮೆಯೋ ಹಾಲ್ ಜಂಕ್ಷನ್ ವರೆಗೆ.
ಡಿ.31 ರಂದು ರಾತ್ರಿ 8 ಗಂಟೆಯ ನಂತರ ಎಂ.ಜಿ ರಸ್ತೆಯಲ್ಲಿ, ಕ್ಲೀನ್ಸ್ ವೃತ್ತದ ಕಡೆಯಿಂದ ಹಲಸೂರು ಹಾಗು ಇನ್ನು ಮುಂದಕ್ಕೆ ಹೋಗುವಂತಹ ಚಾಲಕರು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡತಿರುವು ಪಡೆದು, ಸೆಂಟ್ರಲ್ ಸ್ಟ್ರೀಟ್-ಬಿ.ಆರ್.ವಿ ಜಂಕ್ಷನ್-ಬಲ ತಿರುವು ಕಬ್ಬನ್‌ರಸ್ತೆ ಮೂಲಕ ಸಂಚರಿಸಿ ವೆಬ್‌ಜಂಕ್ಷನ್ ಬಳಿ ಎಂ.ಜಿ ರಸ್ತೆಯನ್ನು ಸೇರಿ ಮುಂದೆ ಸಾಗಬಹುದಾಗಿದೆ.
ಡಿ.31 ರಂದು ರಾತ್ರಿ 8 ಗಂಟೆಯ ನಂತರ ಹಲಸೂರು ಕಡೆಯಿಂದ ಕಂಟೊನ್ವೆಂಟ್ ಕಡೆಗೆ ಹೋಗುವಂತಹ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ಹಲಸೂರು ರಸ್ತೆ-ಡಿಕನ್ನನ್‌ರಸ್ತೆ ಮಾರ್ಗವಾಗಿ ಸಂಚರಿಸಿ ಕಬ್ಬನ್‌ರಸ್ತೆ ಸೇರಿ ಮುಂದೆ ಸಾಗುವುದು.
ಡಿ.31 ರಂದು ರಾತ್ರಿ 8 ಗಂಟೆಯ ನಂತರ ಹಲಸೂರು ಕಡೆಯಿಂದ ಮೆಜಸ್ಟಿಕ್ ಕಡೆಗೆ ಹೋಗುವಂತಯ ವಾಹನಗಳು ಮೆಯೋಹಾಲ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಕಮೀಷಾರಿಯೇಟ್ ರಸ್ತೆಯ ಮೂಲಕ ಗರುಡ ಮಾಲ್ ಜಂಕ್ಷನ್, ಡಿಸೋಜಾ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು ರಿಚ್‌ಮಂಡ್ ರಸ್ತೆಯ ಮೂಲಕ ಸಾಗಬಹುದಾಗಿದೆ
ಡಿ.31 ರಂದು ರಾತ್ರಿ 8 ಗಂಟೆಯ ನಂತರ ರಿಚ್‌ಮಂಡ್ ವೃತ್ತದ ಕಡೆಯಿಂದ ಹಲಸೂರು ಕಡೆಗೆ ಮತ್ತು ಕಂಟೊನ್‌ಮೆಂಟ್ ಸಾಗುವ ವಾಹನಗಳು ಆಶೀವಾದಂ ಜಂಕ್ಷನ್ ಬಳಿ ಎಡ ತಿರುವು ಪಡೆದು ಮ್ಯೂಸಿಯಂ ರಸ್ತೆಯಲ್ಲಿ ಸಾಗಿ ಅನಿಲ್ ಕುಂಬ್ಳೆ, ಬಿ.ಆರ್.ವಿ ಜಂಕ್ಷನ್‌ನಲ್ಲಿ ಎಡ ಮತ್ತು ಬಲ ತಿರುವು ಪಡೆದು ಕಬ್ಬನ್ ರಸ್ತೆ ಮೂಲಕ ಸಾಹಬಹುದಾಗದೆ.
ಡಿ.31 ರಂದು ಸಂಜೆ 4 ಗಂಟೆಯಿಂದ ಜನವರಿ 1 ರಂದು ಬೆಳಗಿನ ಜಾವ 3 ಗಂಟೆಯ ವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ಪೊಲೀಸ್ ವಾಹನಗಳು ಹಾಗು ಕರ್ತವ್ಯ ನಿತರ ತುರ್ತು ಸೇವಾ ವಾಹನಗಳು ಹೊರತು ಪಡಿಸಿ ಉಳಿದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
ವಾಹನ ನಿಲುಗಡೆ ನಿಷೇಧ
- ಎಂ.ಜಿ ರಸ್ತೆಯಲ್ಲಿ, ಅನಿಲ್ ಕುಂಬ್ಳೆ ವೃತದಿಂದ ಟ್ರಿನಿಟಿ ವೃತ್ತದ ವರೆಗೆ.
- ಬ್ರಿಗೇಡ್ ರಸ್ತೆಯಲ್ಲಿ, ಆರ್ಟ್ಸ್&ಕ್ರಾಫ್ಟ್ ಜಂಕ್ಷನ್ ನಿಂದ ಓಲ್ಡ್ ಪಿ.ಎಸ್ ಜಂಕ್ಷನ್‌ವರೆಗೆ
- ಚರ್ಚ್ ಸ್ಟ್ರೀಟ್‌ನಲ್ಲಿ, ಬ್ರಿಗೇಡ್‌ರಸ್ತೆ ಜಂಕ್ಷನ್ ನಿಂದ ಸೆಂಟ್ ಮಾರ್ಕ್ಸ್ ರಸ್ತೆ ಜಂಕ್ಷನ್‌ವರೆಗೆ.
- ರೆಸ್ಟ್ ಹೌಸ್ ರಸ್ತೆಯಲ್ಲಿ, ಬ್ರಿಗೇಡ್‌ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ.
- ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ ರಸ್ತೆ ಜಂಕ್ಷನ್‌ನಿಂದ ಆಶೀರ್ವಾದಂ ಜಂಕ್ಷನ್‌ವರೆಗೆ
- ಆಶೀರ್ವಾದಂ ಜಂಕ್ಷನ್‌ನಿಂದ ಮೆಯೋಹಾಲ್ ಜಂಕ್ಷನ್‌ವರೆಗೆ.
- ಮ್ಯೂಸಿಯಂ ರಸ್ತೆಯಲ್ಲಿ ಎಂ.ಜಿ ರಸ್ತೆ ಜಂಕ್ಷನ್ ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್.ಬಿ.ಐ) ವೃತ್ತದ ವರೆಗೆ.
ಡಿ.31 ರಂದು ಸಂಜೆ 4 ಗಂಟೆಯೊಳಗೆ ವಾಹನ ತೆರುವುಗೊಳಿಸಿ
- ಎಂ.ಜಿರಸ್ತೆ, ಬ್ರಿಗೇಡ್ ರಸ್ತೆ, ರೆಸ್ಟ್ ಹೌಸ್‌ರಸ್ತೆ, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ, ರಸ್ತೆ& ಸೆಂಟ್ ಮಾರ್ಕ್ಸ್ ರಸ್ತೆಗಳಲ್ಲಿ ನಿಲ್ಲಿಸಿದಂತಹ ವಾಹನಗಳ ಚಾಲಕರು/ಮಾಲಿಕರು ತಮ್ಮ ವಾಹನಗಳನ್ನು ಡಿ.31 ರಂದು ಸಂಜೆ 4 ಗಂಟೆಯೊಳಗೆ ತೆರುವುಗೊಳಿಸುವುದು, ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಹೇಳಿದೆ.
- ಪಾದಚಾರಿಗಳು ಬ್ರಿಗೇಡ್ ರಸ್ತೆಯಲ್ಲಿ ಎಂ.ಜಿ.ರಸ್ತೆ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್ ಕಡೆಗೆ ಕಾಲ್ನಡಿಗೆಯಲ್ಲಿ ಮಾತ್ರ ಹೋಗುವುದು. ವಿರುದ್ದ ದಿಕ್ಕಿನಲ್ಲಿ ಹೋಗುವುದನ್ನು ನಿಷೇದಿಸಲಾಗಿದೆ. ಪುನಃ ಎಂ.ಜಿರಸ್ತೆಗೆ ಬರಬೇಕಾದಲ್ಲಿ ರೆಸಿಡೆನ್ಸಿ ರಸ್ತೆ-ರೆಸಿಡೆನ್ಸಿ ರಸ್ತೆಕ್ರಾಸ್ (ಶಂಕರ್ ನಾಗ್‌ಚಿತ್ರ ಮಂದಿರ) ಮಾರ್ಗವಾಗಿಬರಬಹುದಾಗಿದೆ.
- ಡಿ.31 ರಂದು ರಾತ್ರಿ 8 ಗಂಟೆಯಿಂದ ಜನವರಿ 1ರ ಬೆಳಗಿನ ಜಾವ 6 ಗಂಟೆ ವರೆಗೆ ವಿಭಾಗದ ಎಲ್ಲ ಮೇಲು ಸೇತುವೆಗಳ ಮೇಲೆ ಅಪಘಾತ ಮತ್ತು ಅನಾಹುತಗಳನ್ನು ತಡೆಗಟ್ಟಲು ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇದಿಸಲಾಗಿದೆ.
- ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕಾರ್ಯಾಚರಣೆಯು ರಾತ್ರಿಯಾದ್ಯಂತ ಕೈಗೊಳ್ಳಲಾಗುವುದಲ್ಲದೇ, ನಾಕಬಂಧಿಯನ್ನು ನಗರದ ನಾನಾ ಸ್ಥಳಗಳಲ್ಲಿ ಮಾಡಿಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು.
- ಅತಿವೇಗ ಮತ್ತು ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವ ಹಾಗೂ ವೀಲಿಂಗ್ ರೇಸ್‌ರಲ್ಲಿ ಭಾಗಿಯಾಗಿ ಇತರೆ ಸಾರ್ವಜನಿಕರಿಗೆ ಅನಾನುಕೂಲ ಮಾಡುವಂತಹ ಮೊಟಾರ್ ಸೈಕಲ್ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳು ಕಂಡು ಬಂದಲ್ಲಿ ಪೊಲೀಸ್ ಸಹಾಯವಾಣಿ ಸಂಖ್ಯೆ:112 ಗೆ ಮಾಹಿತಿ ನೀಡಲು ಕೋರಲಾಗಿದೆ.
- ಎಂ.ಜಿ ರಸ್ತೆ, ಮತ್ತು ಬ್ರಿಗೇಡ್ ರಸ್ತೆಗೆ ಬರುವಂತ ಓಲಾ, ಉಬರ್ ಮತ್ತು ಇತ್ಯಾದಿ ಕ್ಯಾಬ್‌ಗಳು ತಮ್ಮ ತಮ್ಮ ವಾಹನಗಳಲ್ಲಿ ಸಾರ್ವಜನಿಕರನ್ನು ಈ ಕೆಳಕಂಡ ಸ್ಥಳಗಳಲ್ಲಿ ಪಿಕ್ ಆಪ್ ಮತ್ತು ಡ್ರಾಪ್ ಮಾಡುವಂತೆ ಕೋರಿದೆ.
- ಹೊಸ ವರ್ಷಾಚರಣೆಗೆ ಎಂ.ಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗೆ ಆಗಮಿಸುವ ಸಾರ್ವಜನಿಕರು ಸ್ವಂತ ವಾಹನಗಳಾದ ದ್ವಿಚಕ್ರ ಮತ್ತು ನಾಲ್ಕು ಚಕ್ರ ವಾಹನಗಳನ್ನು ಬಳಸದೆ ನಮ್ಮ ಮೆಟ್ರೋ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ಓಲಾ, ಉಬರ್, ನಮ್ಮ ಯಾತ್ರಿ, ಆಟೋ ಗಳನ್ನು ಬಳಸುವಂತೆ ಕೋರಿದೆ.
ವಾಹನ ನಿಲುಗಡೆ ನಿರ್ಬಂಧಿಸಿರುವ ರಸ್ತೆಗಳು
ಡಿ.31 ರ ಸಂಜೆ 4 ಗಂಟೆಯಿಂದ ಜ.1 ರ ಬೆಳಗ್ಗೆ 6 ಗಂಟೆಯವರೆಗೆ ಸಂಚಾರ ಪೂರ್ವ ವಿಭಾಗದ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ.
- ಇಂದಿರಾನಗರ 100 ಅಡಿ ರಸ್ತೆಯ ಹಳೆ ಮದ್ರಾಸ್ ರಸ್ತೆ ಜಂಕ್ಷನ್‌ನಿಂದ ದೊಮ್ಮಲೂರು ಪ್ರೈಓವರ್ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಯಲ್ಲಿ.
- ಇಂದಿರಾನಗರ 12ನೇ ಮುಖ್ಯ ರಸ್ತೆಯ 80 ಅಡಿ ರಸ್ತೆಯಿಂದ ಇಂದಿರಾನಗರ ಡಬಲ್ ರೋಡ್ ಜಂಕ್ಷನ್‌ವರೆಗೆ ರಸ್ತೆಯ ಎರಡೂ ಬದಿಯಲ್ಲಿ.
- ಐ.ಟಿ.ಪಿ.ಎಲ್ ಮುಖ್ಯರಸ್ತೆ ಬಿ ನಾರಾಯಣಪುರ ಶೆಲ್ ಪೆಟ್ರೋಲ್ ಬಂಕ್‌ನಿಂದ ಗರುಡಚಾರ್‌ಪಾಳ್ಯ ಡೆಕತ್ಥಾನ್ ವರೆಗೆ ರಸ್ತೆಯ ಎರಡೂ ಬದಿಯಲ್ಲಿ
ಓಲಾ ಮತ್ತು ಉಬರ್ ಪಿಕ್ ಅಪ್ ಮತ್ತು ಡ್ರಾಪ್ ಪಾಯಿಂಟ್‌ಗಳು
- ಫಿನಿಕ್ಸ್ ಮಾಲ್‌ಗೆ ಬರುವವರಿಗೆ ಐ.ಟಿ.ಪಿ.ಎಲ್ ಮುಖ್ಯರಸ್ತೆಯ ಬೆಸ್ಕಾಂ ಕಛೇರಿ ಬಳಿ ಡ್ರಾಪ್ ಪಾಯಿಂಟ್ ಮತ್ತು ಪಿಕ್ ಅಪ್ ಪಾಯಿಂಟ್ ಸಿಂಗಯ್ಯನಪಾಳ್ಯ ಮೆಟ್ರೋ ನಿಲ್ದಾಣದ ಬಳಿ.
- ಇಂದಿರಾನಗರಕ್ಕೆ ಬರುವವರಿಗೆ ಇಂದಿರಾನಗರ 100 ಅಡಿ ರಸ್ತೆಯ 17ನೇ ಮುಖ್ಯರಸ್ತೆ ಜಂಕ್ಷನ್ ಬಳಿ ಡ್ರಾಪ್ ಪಾಯಿಂಟ್ ಮತ್ತು ಪಿಕ್ ಅಪ್ ಪಾಯಿಂಟ್ ಇಂದಿರಾನಗರ 100 ಅಡಿ ರಸ್ತೆಯ ಬಿ.ಎಂ.ಶ್ರೀ ಜಂಕ್ಷನ್ ಬಳಿ.
ಮೇಲು ಸೇತುವೆ (ಪ್ರೈಓವರ್) ಮೇಲೆ ವಾಹನ ಸಂಚಾರ ನಿರ್ಬಂಧ
(ರಾತ್ರಿ 11.00 ಗಂಟೆಯಿಂದ ಬೆಳಗ್ಗೆ 6.00 ಗಂಟೆಯವರೆಗೆ)
ಹೆಣ್ಣೂರು ಪ್ರೈಓವರ್, ಐ.ಟಿ.ಸಿ ಪ್ರೈಓವರ್, ಬಾಣಸವಾಡಿ ಮುಖ್ಯರಸ್ತೆ ಪ್ರೈಓವರ್, ಲಿಂಗರಾಜಪುರಂ ಪ್ರೈಓವರ್, ಹೆಣ್ಣೂರು ಮುಖ್ಯರಸ್ತೆ ಪ್ರೈಓವರ್, ಕಲ್ಪಳ್ಳಿ ರೈಲ್ವೆಗೇಟ್ ಪ್ರೈಓವರ್, ದೊಮ್ಮಲೂರು ಪ್ರೈಓವರ್, ನಾಗವಾರ ಪ್ರೈಓವರ್, ಮೇಡಹಳ್ಳಿ ಪ್ರೈಓವರ್, ಓ.ಎಂ.ರೋಡ್ ಪ್ರೈಓವರ್, ದೇವರಬಿಸನಹಳ್ಳಿ ಪ್ರೈಓವರ್, ಮಹದೇವಪುರ ಪ್ರೈಓವರ್, ದೊಡ್ಡನಕ್ಕುಂದಿ ಪ್ರೈಓವರ್‌ಗಳು.
ವಿಶೇಷ ಕಾರ್ಯಾಚರಣೆ
ಸಂಚಾರ ಪೂರ್ವ ವಿಭಾಗದ ಸರಹದ್ದಿನಲ್ಲಿ ಡಿ.31 ರ ರಾತ್ರಿ 10 ಗಂಟೆಯಿಂದ ಜನವರಿ 1 ರ ಬೆಳಗ್ಗೆ 6 ಗಂಟೆಯವರೆಗೆ ಮದ್ಯಪಾನ ಮಾಡಿ ವಾಹನ ಚಾಲನೆ/ಸವಾರಿ ಮಾಡುವ, ವೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುವವರ ಪತ್ತೆಗೆ ವಿಶೇಷ ತಂಡವನ್ನು ನಿಯೋಜಿಸಲಾಗಿದ್ದು, ತಪ್ಪಿತಸ್ಥರ ವಿರುದ್ದ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಡಿ.30 ರಂದು 201 ಜನರಿಗೆ ಕೊರೋನಾ ಸೋಂಕು ದೃಢ
2024ನೇ ಸಾಲಿನ ಹೊಸ ವರ್ಷಾಚರಣೆಯ ಸಂಭ್ರಮದ ಪ್ರಯುಕ್ತ ಬೆಂಗಳೂರಿನಲ್ಲಿರುವ ಪೈಓವರ್‌ಗಳ ಮೇಲೆ ಹೊಸ ವರ್ಷ ಆಚರಣೆ ಮಾಡಿಕೊಂಡು ಅಪಾಯಕಾರಿ ರೀತಿಯಲ್ಲಿ ವಿಲ್ಲೀಂಗ್ ಮಾಡಿಕೊಂಡು ವಾಹನವನ್ನು ಚಾಲನೆ ಮಾಡುವ ಸಾಧ್ಯತೆ ಇರುವುದರಿಂದ ಅಪಘಾತಗಳಾಗುವ ಸಂಭವ ಹೆಚ್ಚಾಗಿರುತ್ತದೆ. ಈ ಹಿನ್ನೆಲೆ, ವಾಹನ ಸವಾರರ ಸುರಕ್ಷತೆಯ ಹಿತದೃಷ್ಟಿಯಿಂದ ದಕ್ಷಿಣ ವಿಭಾಗದ ಪ್ರೈಓವರ್‌ಗಳನ್ನು ಡಿ.31 ರಂದು ರಾತ್ರಿ 10 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 6 ಗಂಟೆಯವರೆಗೆ ಮುಚ್ಚಲಾಗುವುದು ಎಂದು ಬೆಂಗಳೂರು ಸಂಚಾರ ಪೊಲೀಸ್ ತಿಳಿಸಿದೆ.
- ಬನಶಂಕರಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಡಾ|| ಪುನೀತ್ ರಾಜಕುಮಾರ್ ರಸ್ತೆ, ಕಿತ್ತೂರು ರಾಣು ಚೆನ್ನಮ್ಮ ಮೇಲು ಸೇತುವೆ ಬಂದ್ ಮಾಡಲಾಗುತ್ತದೆ. ಈ ಮೇಲ್ಸೆತುವೆ ಬಿಪಿನ್ ರಾವತ್ ಪಾರ್ಕ್‌ನಿಂದ ಅಪೋಲೋ ಶಾಲೆವರೆಗೆ ಇದೆ.
- ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯ ಡಾ|| ಪುನೀತ್ ರಾಜಕುಮಾರ್ ರಸ್ತೆ, ಕೆಯಬಿ ಮೇಲು ಸೇತುವೆ ಬಂದ್ ಇರಲಿದ್ದು, ಈ ಮೇಲು ಸೇತುವೆ ಉಡುಪಿ ಗ್ರ್ಯಾಂಡ್ ಹೋಟೇಲ್‌ನಿಂದ ದ್ವಾರಕನಗರ ಕ್ರಾಸ್‌ವರೆಗೂ ಇದೆ
- ಬಸವನಗುಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಕೇಶ್‌ಪಾಲ್ ಜಂಕ್ಷನಿಂದ ವಾಣಿ ವಿಲಾಸ ಜಂಕ್ಷನ್‌ವರೆಗೂ ಇರುವ ನ್ಯಾಷನಲ್ ಕಾಲೇಜು ಮೇಲು ಸೇತುವೆ ಬಂದ್ ಇರಲಿದೆ.
- ಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪಿ ನಗರದ 14ನೇ ಮುಖ್ಯ ರಸ್ತೆ, 2ನೇ ಮುಖ್ಯ ರಸ್ತೆ, ರಿಂಗ್ ರಸ್ತೆಗೆ ಸಂಪರ್ಕ ಹೊಂದಿರುವ ಜೆಪಿನಗರದ ದಾಲ್ಮಿಯಾ ಫ್ಲೈಓವರ್ ಬಂದ್ ಇರಲಿದೆ.
- ಮಡಿವಾಳ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರೂಪೇನ್ ಅಗ್ರಹಾರ ಮತ್ತು ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಹೊಂದಿರುವ ಹೊಸೂರು ಮುಖ್ಯರಸ್ತೆಯ ರೂಪೇನ್ ಅಗ್ರಹಾರ ಎಲಿವೇಟೆಡ್ ಫ್ಲೈಓವರ್ ಬಂದ್ ಇರಲಿದೆ.
- ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ ಎಲೆಕ್ಟ್ರಾನಿಕ್ ಸಿಟಿ ಮತ್ತು ರೂಪೇನ್ ಅಗ್ರಹಾರ ಸಂಪರ್ಕ ಹೊಂದಿರುವ ಹೊಸುರು ಮುಖ್ಯರಸ್ತೆ ರೂಪೇನ್ ಅಗ್ರಹಾರ ಎಲಿವೇಟೆಡ್ ಫ್ಲೈಓವರ್ ಬಂದ್ ಇರಲಿದೆ.
- ಮೈಕೋಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ತಾವರೆಕೆರೆಯಿಂದ ನಿಮ್ಹಾನ್ಸ್ ಸಂಪರ್ಕ ಹೊಂದಿರುವ ಜಿಬಿ ರಸ್ತೆಯ ಡೈರಿ ಸರ್ಕಲ್ ಫ್ಲೈಓವರ್ ಬಂದ್ ಇರಲಿದೆ.