370 ರದ್ದು ಎತ್ತಿಹಿಡಿದ ಸುಪ್ರೀಂ ತೀರ್ಪು ಒಕ್ಕೂಟ ವ್ಯವಸ್ಥೆಗೆ ಮಾರಕ: ಜಸ್ಟಿಸ್ ದಾಸ್

Date:

Advertisements

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿರುವುದನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ತೀರ್ಪು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ ಎಂದು ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್.ನಾಗಮೋಹನ ದಾಸ್ ಆತಂಕ ವ್ಯಕ್ತಪಡಿಸಿದ್ದಾರೆ.

‘ಈದಿನ.ಕಾಂ’ ಜೊತೆಯಲ್ಲಿ ಮಾತನಾಡಿದ ಅವರು, “ಸುಪ್ರೀಂ ಕೋರ್ಟ್ ತೀರ್ಪು ಒಂದು ಮುಖ್ಯವಾದ ವಿಚಾರವನ್ನು ಗಮನಿಸಿಲ್ಲ. ಒಂದು ರಾಜ್ಯದ ಚುನಾಯಿತ ವಿಧಾನಸಭೆಯನ್ನು ರದ್ದುಪಡಿಸಿ ರಾಜ್ಯಪಾಲರ ಆಡಳಿತವನ್ನು ತರಲಾಯಿತು. ರಾಜ್ಯಪಾಲರ ಆಡಳಿತ ಇದ್ದಾಗ ಒಂದು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿದರು. ಈ ರೀತಿಯ ಕ್ರಮವನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿರುವುದು ನಮ್ಮ ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ” ಎಂದು ಎಚ್ಚರಿಸಿದರು.

“ಜಮ್ಮು ಮತ್ತು ಕಾಶ್ಮೀರಕ್ಕೆ ಬಂದಿರುವ ಸ್ಥಿತಿ ಮುಂದೊಂದು ದಿನ ಕರ್ನಾಟಕ ಅಥವಾ ಬೇರೆ ಯಾವುದೇ ರಾಜ್ಯಕ್ಕೂ ಬರಬಹುದು. ಇಲ್ಲಿನ ಚುನಾಯಿತ ಸರ್ಕಾರವನ್ನು ರದ್ದುಪಡಿಸಿ ರಾಜ್ಯಪಾಲರ ಆಡಳಿತ ತಂದು ರಾಜ್ಯಪಾಲರ ಒಪ್ಪಿಗೆ ಪಡೆದು ಕರ್ನಾಟಕವನ್ನೂ ಎರಡು ವಿಭಾಗ ಮಾಡಬಹುದು. ಆಗ ಇಲ್ಲಿನ ಜನರ ಆಯ್ಕೆಗೆ ಕಿಮ್ಮತ್ತೇ ಇಲ್ಲವಾಗುತ್ತದೆ” ಎಂದು ಎಚ್ಚರಿಸಿದರು.

Advertisements

“ಇಲ್ಲಿನ ಚುನಾಯಿತ ಪ್ರತಿನಿಧಿಗಳ ಗೈರು ಹಾಜರಿಯಲ್ಲಿ ವಿಭಾಗ ನಡೆಯುತ್ತದೆ. ಜನರ ಅಭಿಪ್ರಾಯ ಏನು ಎಂಬುದಕ್ಕೆ ಅವಕಾಶವೇ ಇಲ್ಲದಂತೆ ಆಗುತ್ತದೆ. ಹೀಗೆ ಕೇಂದ್ರ ಸರ್ಕಾರ ತನ್ನ ಅಧಿಕಾರವನ್ನು ಮುಂದೆ ಎಲ್ಲಾ ರಾಜ್ಯಗಳ ಮೇಲೂ ಬಳಸಬಹುದು” ಎಂದು ತಿಳಿಸಿದರು.

“ಸುಪ್ರೀಂ ಕೋರ್ಟ್ ಈ ಸಮಸ್ಯೆಯನ್ನು ಗಮನಿಸದೆ 370ನೇ ವಿಧಿಯ ರದ್ಧತಿಯನ್ನು ಎತ್ತಿ ಹಿಡಿದಿರುವುದು ಒಕ್ಕೂಟ ವ್ಯವಸ್ಥೆಗೆ ಮಾರಕವಾಗಿದೆ. ಸರ್ವೋಚ್ಚ ನ್ಯಾಯಾಲಯವು ಈ ತೀರ್ಪನ್ನು ಪುನರ್‌ ಪರಿಶೀಲನೆ ಮಾಡಬೇಕು. ಯಾವುದೇ ಪೀಠದ ತೀರ್ಪನ್ನು ಪುನರ್‌ ಪರಿಶೀಲನೆ ಮಾಡಲು ಅವಕಾಶವಿದೆ. ಕ್ಯೂರೇಟಿವ್‌ ಪಿಟೆಷನ್‌ಗೂ ಅವಕಾಶವಿದೆ. ಅದೂ ಆಗಲಿಲ್ಲವೆಂದರೆ ಇನ್ಯಾವುದೋ ತೀರ್ಪಿನ್ನೂ ರೀವಿಸಿಟ್ ಮಾಡಬಹುದು” ಎಂದು ಹೇಳಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

14 COMMENTS

  1. Continuing 370 is against one law one country. Then what is the point of commenting on. Governor rule, and making as union territory. First speak about 370 removing is OK or not.
    Why eedina is supporting thus kind of people. Don’t you have responsibility of one nation one law.

    • In case the honourable retired justice is bother about the federal system of India , firstly I mention that the provisions provided in our constitution clearly accepts that our country is more unitary than federal.. if center divids any other states unnecessarily means the respected government will face a huge riddle in next election…so No government has guts to divide states without any reason…

    • ಇದರಲ್ಲಿ BJP ತಂತ್ರ ಅಡಗಿದೆ. ಕಾಶ್ಮೀರ ಒಂದು ವಿಭಿನ್ನ ಸಮಸ್ಯೆ. ಮೇಲೆ ಕೊಟ್ಟ ಕಾರಣ court ನೋಡಿಲ್ಲ ಅನ್ನಬಹುದು. ಆದ್ರೆ 370 ಎಷ್ಟು ದಿನ ಇಡಬೇಕು? ಅದೇ ಪ್ರಶ್ನೆ.

      ಆದ್ರೆ ದೆಹಲಿ ಸರಕಾರದ ಅಧಿಕಾರ ಮೊಟಕು ಮಾಡಿದ್ದು ತಪ್ಪು. BJPಗೆ ರಾಜ್ಯ ಸರ್ಕಾರದ ಅಧಿಕಾರ ಕತ್ತರಿಸುವ ಆಸೆ ಇದೆ. ಅದು ರಾಜ್ಯಗಳನ್ನು ತುಂಡು ತುಂಡು ಮಾಡಿ ನಂತರ ತನ್ನ ಆಟ ಆಡಬಹುದು.

  2. ಇವತ್ತಿನ ಕಾಶ್ಮೀರಾದ ಬಹುಮತ ಜನ ಪಾಕಿಸ್ತಾನ ಸೇರಲು ಬಯಸಿದರೆ ಅದನ್ನು ಒಪ್ಪಿಬೇಕಾ? ಇವರು ಭಾರತ ಜನತೆಯ ಬಹುಮತ ಸರ್ಕಾರದ ನಿರ್ಣಯ ಯಾಕೆ ಒಪ್ಪುವುದಿಲ್ಲ. ನಮ್ಮ ಯೋಧರು ಸುಮ್ಮನೆ ಪ್ರಾಣ ಕಳೆದುಕೊಂಡಿದ್ದಾರೆ. ವಿವಾದಿತ ಗಡಿಗಳ ರಕ್ಷಣೆ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಸೈನ್ಯದ ಕೆಲಸ ಬಿಡುವುದು ಒಳ್ಳೆಯದು

  3. Did 370 article bring by legislative representatives of Jammu and kashmir. President of India had implemented with so and so conditions and so president has rights to withdraw it.

  4. Art 370 is abrogated with an intention of bringing the Kashmirians irrespective their caste or creed, to main stream so that developmental activities take place on par with other developed states. India being secular in nature, there should not be any priority to any one community in owning, developing or utilizing the local resources but open to all the Indians on equal terms. This abrogation rectified the historical error.

  5. He belongs to congress party, he might have given all decisions in favor of that party in his tenure. Needs open all his judgements. As a justice, he blaming other justice. Needs urgent precautionary measures.
    He is not thinking about lakhs + murdered of our brother and sisters in kashmir.

  6. “ಜಸ್ಟೀಸ್ “ಪವಿತ್ರ ಹುದ್ದೆಗೆ ನೀವು ಹೇಗೆ ಪಾವಿತ್ರ್ಯ ಕಾಪಾಡಬಲ್ಲಿರಿ???

  7. ಸಂವಿಧಾನದ Article 370, ಎನು ಹೇಳುತ್ತದೆ, ಎಂದು ಮೊದಲು ಜನರಿಗೆ ತಿಳಿಸುವ ಪ್ರಯತ್ನ ಮಾಡಿ.

  8. ಇದರಲ್ಲಿ BJP ತಂತ್ರ ಅಡಗಿದೆ. ಕಾಶ್ಮೀರ ಒಂದು ವಿಭಿನ್ನ ಸಮಸ್ಯೆ. ಮೇಲೆ ಕೊಟ್ಟ ಕಾರಣ court ನೋಡಿಲ್ಲ ಅನ್ನಬಹುದು. ಆದ್ರೆ 370 ಎಷ್ಟು ದಿನ ಇಡಬೇಕು? ಅದೇ ಪ್ರಶ್ನೆ.

    ಆದ್ರೆ ದೆಹಲಿ ಸರಕಾರದ ಅಧಿಕಾರ ಮೊಟಕು ಮಾಡಿದ್ದು ತಪ್ಪು. BJPಗೆ ರಾಜ್ಯ ಸರ್ಕಾರದ ಅಧಿಕಾರ ಕತ್ತರಿಸುವ ಆಸೆ ಇದೆ. ಅದು ರಾಜ್ಯಗಳನ್ನು ತುಂಡು ತುಂಡು ಮಾಡಿ ನಂತರ ತನ್ನ ಆಟ ಆಡಬಹುದು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

Download Eedina App Android / iOS

X