ಬೆಂಗಳೂರಿನ ವೈಟ್‌ಫೀಲ್ಡ್ ಬಳಿಯ ದಿ ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಎನ್‌ಐಎ ಅಧಿಕಾರಿಗಳು ಇಬ್ಬರು ಪ್ರಮುಖ ಆರೋಪಿಗಳನ್ನು ಪಶ್ಚಿಮ ಬಂಗಾಳದ ಕೋಲ್ಕತ್ತಾ ಬಳಿ ಬಂಧಿಸಿದ್ದಾರೆ. ಆರೋಪಿಗಳನ್ನು ಕೊಲ್ಕತ್ತಾದ ಎನ್‌ಐಎ ವಿಶೇಷ ಕೋರ್ಟ್ ಮುಂದೆ ಹಾಜರುಪಡಿಸಿದ ತಂಡ ಇಬ್ಬರನ್ನು ಟ್ರಾನ್ಸಿಟ್ ರಿಮ್ಯಾಂಡ್ಗೆ ನೀಡುವಂತೆ ಮನವಿ ಮಾಡಿತ್ತು. ಅದರಂತೆ, ನ್ಯಾಯಾಲಯ 3 ದಿನಗಳ ಟ್ರಾನ್ಸಿಟ್ ರಿಮ್ಯಾಂಡ್ಗೆ ಅನುಮತಿ ನೀಡಿದೆ.
ಇನ್ನು ಎನ್‌ಐಎ ತಂಡ ಆರೋಪಿಗಳನ್ನು ಕೋರ್ಟ್‌ನಿಂದ ವಶಕ್ಕೆ ಪಡೆದು ಬೆಂಗಳೂರಿಗೆ ಕರೆತರಲಿದೆ ಎನ್ನಲಾಗಿದೆ.
ಕೋಲ್ಕತ್ತಾದ ಸಮೀಪವಿರುವ ಲಾಡ್ಜ್‌ವೊಂದರಲ್ಲಿ ಪ್ರಮುಖ ಆರೋಪಿಗಳು ಅಡಗಿಕೊಂಡಿದ್ದರು. ಅವರ ಅಡಗುತಾಣವನ್ನು ಪತ್ತೆಹಚ್ಚಿ ಎನ್‌ಐಎ ತಂಡ ಅವರನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮಾರ್ಚ್ 1ರಂದು ರಾಮೇಶ್ವರಂ ಕೆಫೆಯಲ್ಲಿ ಸ್ಪೋಟ ಸಂಭವಿಸಿತ್ತು. ಘಟನೆ ನಡೆದು ಸುದೀರ್ಘ 42 ದಿನಗಳ ನಂತರ ಎನ್‌ಐಎ ಪ್ರಮುಖ ಆರೋಪಿಗಳನ್ನು ಪತ್ತೆ ಮಾಡಿದೆ. ಸ್ಪೋಟ ನಡೆಸಿದ ಬಳಿಕ ಅದ್ಬುಲ್ ಮಥೀನ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜೆಬ್ ಪರಾರಿಯಾಗಿದ್ದರು. ರಾಮೇಶ್ವರಂ ಕೆಫೆಯ ಪ್ಲೇಟ್ ವಾಷಿಂಗ್ ಏರಿಯಾ ಮತ್ತು ಗ್ರಾಹಕರು ಕುಳಿತುಕೊಳ್ಳುವ ಸ್ಥಳದ ಬಳಿ ಸ್ಫೋಟ ಸಂಭವಿಸಿತ್ತು. ಇದರಿಂದಾಗಿ ಕೆಫೆಯಲ್ಲಿದ್ದ ಹಲವಾರು ಗ್ರಾಹಕರು ಮತ್ತು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರು.
#WATCH | Bengaluru’s The Rameswaram Cafe blast case | West Bengal: The two prime suspects – Adbul Matheen Taha and Mussavir Hussain Shazeb – brought to the NIA Court in Kolkata. pic.twitter.com/taVbFaeziA
— ANI (@ANI) April 12, 2024
ಮುಸ್ಸಾವಿರ್ ಹುಸೇನ್ ಶಾಜಿಬ್ ಕೆಫೆಯಲ್ಲಿ ಐಇಡಿ ಹಾಕಿದ ವ್ಯಕ್ತಿ ಎಂದು ಎನ್‌ಐಎ ಗುರುತಿಸಿದೆ. ಅಬ್ದುಲ್ ಮಥೀನ್ ತಾಹಾ ಈ ಪಿತೂರಿಯ ಹಿಂದಿನ ಮಾಸ್ಟರ್‌ಮೈಂಡ್ ಮತ್ತು ಸ್ಫೋಟವನ್ನು ಯೋಜಿಸಿ ಕಾರ್ಯಗತಗೊಳಿಸಿದ್ದನು. ಇವರಿಬ್ಬರು ಸಹ ಆರೋಪಿ ಮಾಜ್ ಮುನೀರ್ ಅಹ್ಮದ್ ಜತೆಗೆ ಈ ಹಿಂದೆ ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಎನ್ಐಎ ಹೇಳಿದೆ.
ಅಬ್ದುಲ್ ಮಥೀನ್ ಆರೋಪಿಗಳು ತಪ್ಪಿಸಿಕೊಳ್ಳುವಲ್ಲಿ ಸಹಾಯ ಮಾಡುತ್ತಿದ್ದನು. ಕಳೆದ ಒಂದು ತಿಂಗಳಿನಲ್ಲಿ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿದಂತೆ ತಪ್ಪಿಸುವಲ್ಲಿ ಯಶಸ್ವಿಯಾಗಿದ್ದನು.
“ಇಬ್ಬರು ಆರೋಪಿಗಳ ಬಂಧನದ ನಂತರ ಕೋಲ್ಕತ್ತಾದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು. ಬಳಿಕ ನ್ಯಾಯಾಲಯವು ಮೂರು ದಿನಗಳ ಟ್ರಾನ್ಸಿಟ್ ರಿಮ್ಯಾಂಡ್ಗೆ ನೀಡಿದೆ” ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
2024ರ ಮಾರ್ಚ್ 3 ರಂದು ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಎನ್‌ಐಎ, ಈ ಇಬ್ಬರು ಆರೋಪಿಗಳಾದ ಮಾಜ್ ಮುನೀರ್ ಅಹ್ಮದ್ ಮತ್ತು ಮುಝಾಮಿಲ್ ಶೆರೀಫ್ ಅವರನ್ನು ಮಾರ್ಚ್ 1 ರಂದು ನಡೆದ ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸಿದ ಭಯೋತ್ಪಾದಕರು ಎಂದು ಗುರುತಿಸಿತ್ತು. ಐಇಡಿ ಸ್ಫೋಟವನ್ನು ನಡೆಸುವ ಇತರ ಆರೋಪಿಗಳಿಗೆ ಶೆರೀಫ್ ಬೆಂಬಲ ನೀಡುತ್ತಿದ್ದನು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಐಪಿಎಲ್ ಪಂದ್ಯ: ನಾಲ್ಕು ದಿನ ಮೆಟ್ರೋ ಅವಧಿ ವಿಸ್ತರಣೆ
ಪ್ರಕರಣದಲ್ಲಿ ವ್ಯಾಪಕ ತನಿಖೆ ಮತ್ತು ಶೋಧ ನಡೆಸುತ್ತಿದ್ದ ಎನ್‌ಐಎ ಬಹುಮಾನವನ್ನು ಕೂಡ ಘೋಷಣೆ ಮಾಡಿತ್ತು. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚಲು ಸಾಮಾಜಿಕ ಮಾಧ್ಯಮಗಳ ಮೂಲಕ ಕೂಡ ಎನ್‌ಐಎ ಪ್ರಕಟಣೆ ಹೊರಡಿಸಿತ್ತು.
NIA Arrests Bengaluru Café Blast Bomber, Along with the Mastermind pic.twitter.com/sSSuyCAwXt
— NIA India (@NIA_India) April 12, 2024
“ನಾನಾ ಕೇಂದ್ರ ಸಹೋದರ ಸಂಸ್ಥೆಗಳು, ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಯುಪಿ, ದೆಹಲಿ, ಎಪಿ ಹಾಗೂ ತೆಲಂಗಾಣ ರಾಜ್ಯ ಪೊಲೀಸ್ ಇಲಾಖೆಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಿದೆ” ಎಂದು ಎನ್ಐಎ ಹೇಳಿದೆ.
ಶಂಕಿತರು ಕೋಲ್ಕತ್ತಾದ ಬಳಿಯ ಲಾಡ್ಜ್‌ನಲ್ಲಿ ತಂಗಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕಿದ ಎನ್‌ಐಎ, ಆರೋಪಿಗಳನ್ನು ತಪ್ಪಿಸದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪಶ್ಚಿಮ ಬಂಗಾಳ ಪೊಲೀಸರನ್ನು ವಿನಂತಿಸಿತ್ತು. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸ್ಥಳೀಯ ಪೊಲೀಸರು, ನಂತರ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಎನ್ಐಎ ಮಾಹಿತಿ ನೀಡಿದೆ.