ಕತ್ತೆಗಳ ಮೂಲಕ ಕಾರನ್ನು ಶೋರೂಮ್‌ಗೆ ಎಳೆದು ತಂದ ಮಾಲಕ! ಕಾರಣವೇನು ಗೊತ್ತಾ?

Date:

Advertisements

ನೂತನವಾಗಿ ಖರೀದಿಸಿದ ಕಾರು ಪದೇ ಪದೇ  ʻಬ್ರೇಕ್‌ ಡೌನ್‌ʼ ಆದ ಕಾರಣ, ತಾಳ್ಮೆ ಕಳೆದುಕೊಂಡ ಗ್ರಾಹಕರೊಬ್ಬರು ತನ್ನ ಕಾರನ್ನು ಎರಡು ಕತ್ತೆಗಳ ಸಹಾಯದಿಂದ ಶೋರೋಮ್‌ಗೆ ಎಳೆತಂದ ಘಟನೆ ರಾಜಸ್ಥಾನದ ಉದಯ್‌ಪುರ್‌ನಲ್ಲಿ ನಡೆದಿದೆ.

ಉದಯಪುರದ ಸುಂದರವಾಸ್ ಪ್ರದೇಶದ ನಿವಾಸಿ ಶಂಕರಲಾಲ್ ಎಂಬುವವರು ಮಾದ್ರಿ ಕೈಗಾರಿಕಾ ಪ್ರದೇಶದಲ್ಲಿರವ ಹ್ಯೂಂಡೈ ಶೋರೂಮ್‌ನಿಂದ 17.50 ಲಕ್ಷ ರೂಪಾಯಿ ಮೌಲ್ಯದ ಕ್ರೆಟಾ ಮಾಡೆಲ್‌ ಹೊಸ ಕಾರನ್ನು ಖರೀದಿಸಿದ್ದರು.

ಆದರೆ ಆರಂಭದಲ್ಲೇ ಕಾರಿನಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳಲು ಆರಂಭವಾಗಿತ್ತು.  ಈ ಕುರಿತು ಕಾರಿನ ಮಾಲೀಕರು ಅಧಿಕೃತ ಸೇವಾ ಕೇಂದ್ರದ ಪ್ರತಿನಿಧಿಗಳ ಗಮನಕ್ಕೆ ತಂದಿದ್ದರು.

Advertisements

ಸಮಸ್ಯೆ ಸರಿಪಡಿಸಲು ವಿತರಕರನ್ನು ಹಲವು ಬಾರಿ ಸಂಪರ್ಕಿಸಲಾಯಿತಾದರೂ ಸಹ, ತೃಪ್ತಿಕರವಾದ ಪರಿಹಾರ ದೊರೆಯಲಿಲ್ಲ. ಎರಡು ದಿನಗಳ ಹಿಂದೆ ಕೌಟುಂಬಿಕ ಕಾರ್ಯಕ್ರಮದ ವೇಳೆ ಕಾರನ್ನು ಸ್ಟಾರ್ಟ್ ಮಾಡಲು ಹಲವು ಬಾರಿ ತಳ್ಳಬೇಕಾಯಿತು ಎಂದು ಶಂಕರಲಾಲ್ ಹೇಳಿದ್ದಾರೆ.

ʻಬ್ಯಾಟರಿ ಕಡಿಮೆಯಾದ ಕಾರಣ ಸಮಸ್ಯೆಯಾಗಿದೆʼ ಎಂದು ಉತ್ತರಿಸಿದ್ದ ಶೋರೋಮ್‌ ಪ್ರತಿನಿಧಿ, ಬ್ಯಾಟರಿ ಚಾರ್ಜ್ ಆಗಲು ಸ್ವಲ್ಪ ದೂರದವರೆಗೆ ಕಾರನ್ನು ಓಡಿಸಲು ಸಲಹೆ ನೀಡಿದ್ದರು. ಆದರೆ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಸಮಸ್ಯೆ ಮುಂದುವರೆದಿತ್ತು.

ಇದರಿಂದ ಹತಾಶೆಗೆ ಒಳಗಾದ ಶಂಕರಲಾಲ್, ಬ್ಯಾಂಡ್ ತಂಡದವರನ್ನು ಕರೆಸಿ ತಮ್ಮ ವಾಹನವನ್ನು ಎರಡು ಕತ್ತೆಗಳ ಸಹಾಯದಿಂದ ಡೀಲರ್‌ ಬಳಿಗೆ ಎಳೆದೊಯ್ದಿದ್ದಾರೆ. ಸದ್ಯ ಕಾರು ಶೋರೂಂನಲ್ಲಿದ್ದು, ಸಮಸ್ಯೆ ಇರುವ ಕಾರನ್ನು ಬದಲಾಯಿಸಿ ಹೊಸ ಕಾರನ್ನು ನೀಡುವಂತೆ ಮಾಲೀಕ ಶಂಕರಲಾಲ್ ಒತ್ತಾಯಿಸಿದ್ದಾರೆ.

ಕತ್ತೆಗಳು ಕಾರನ್ನು  ಎಳೆದೊಯ್ಯುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕದಲ್ಲಿ ಒಂದು ವಾರ ಭಾರೀ ಮಳೆ: ಕರಾವಳಿ, ಒಳನಾಡಿನ ಜಿಲ್ಲೆಗಳಿಗೆ ರೆಡ್, ಆರೆಂಜ್ ಅಲರ್ಟ್

ಕರ್ನಾಟಕದಾದ್ಯಂತ ಆಗಸ್ಟ್ 17ರಿಂದ 21ರವರೆಗೆ ಭಾರೀ ಮಳೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ...

ಪಿಓಪಿ ಮೂರ್ತಿಗಳ ವಿಸರ್ಜನೆಯಿಂದ ಜಲಚರ ಸಾವು : ಮಣ್ಣಿನ ಗಣಪತಿ ಪೂಜಿಸಲು ಸಚಿವ ಈಶ್ವರ ಖಂಡ್ರೆ ಮನವಿ

ಗಣೇಶ ಚತುರ್ಥಿಯಂದು ಮನೆಯಲ್ಲೂ ಪೂಜೆಗೊಳ್ಳುವ ಗಣೇಶ ಪರಿಸರ (ಮಣ್ಣಿನಿಂದ) ದಿಂದಲೇ ಹುಟ್ಟಿದ...

ರಾಜ್ಯದಲ್ಲಿ 31 ತಿಂಗಳಲ್ಲಿ 10,510 ಪೋಕ್ಸೋ ಪ್ರಕರಣ : 162 ಮಂದಿಗಷ್ಟೇ ಶಿಕ್ಷೆ!

ರಾಜ್ಯದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇದಿನೇ...

‘ಶೋಲೆ’ @ 50: ಇವತ್ತಿಗೂ ಅದೇ ತಾಜಾತನ, ಅದೇ ಆಕರ್ಷಣೆ, ಅದೇ ಕುತೂಹಲ

'ಶೋಲೆ' ಚಿತ್ರ ಬಿಡುಗಡೆಯಾಗಿ 50 ವರ್ಷಗಳಾದರೂ ಇವತ್ತಿಗೂ ಅದೇ ತಾಜಾತನ, ಅದೇ...

Download Eedina App Android / iOS

X