ಮಳೆ ಅವಾಂತರ ಸೃಷ್ಟಿಸುತ್ತಿದ್ದಂತೆ ಅಧಿಕಾರಿಗಳು ಮತ್ತು ಬೆಂಗಳೂರು ನಗರ ಅಭಿವೃದ್ಧಿ ಸಚಿವರು ಆತುರದಿಂದ ಸಿಟಿ ರೌಂಡ್ಸ್‌ಗೆ ಇಳಿಯುತ್ತಾರೆ. ಮತ್ತದೇ ತುರ್ತು ಕಾಮಗಾರಿಗಳ ಆಶ್ವಾಸನೆಗಳು, ಪರಿಹಾರದ ಘೋಷಣೆಗಳು, ಜನರ ಮುಂದೆ ಅಧಿಕಾರಿಗಳಿಗೆ ತರಾಟೆ- ಎಲ್ಲವೂ...
ಬೆಂಗಳೂರಿನ ಮೂಲಸೌಕರ್ಯಕ್ಕೆಂದು ಬಿಡುಗಡೆಯಾದ ಹಣ ಶಾಸಕರು, ಕಾರ್ಪೊರೇಟರ್‌ಗಳು, ಮಂತ್ರಿಗಳು, ಅಧಿಕಾರಿಗಳ ತಿಜೋರಿ ಸೇರಿದೆ. ಇಂಥವರಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆಗಾಲದಲ್ಲಿ ಬೆಂಗಳೂರು ದುಃಸ್ಥಿತಿ ಮುಟ್ಟಿದ್ದು, ದೇಶ ಹಾಗೂ ಜಾಗತಿಕ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದೆ....