ಟ್ವಿಟರ್‌ಗೆ ಹೊಸ ಸಿಇಒ ನೇಮಿಸಿದ ಇಲಾನ್ ಮಸ್ಕ್

Date:

Advertisements
  • ಕೆಲವು ದಿನಗಳ ಹಿಂದೆ ಹೊಸ ಸಿಇಒ ನೇಮಿಸುವುದಾಗಿ ಘೋಷಿಸಿದ್ದ ಮಸ್ಕ್
  • ಕಳೆದ ವರ್ಷ 44 ಶತಕೋಟಿ ಡಾಲರ್ಗೆ ಟ್ವಿಟ್ಟರ್ ಖರೀದಿಸಿದ ಇಲಾನ್ ಮಸ್ಕ್

ಟ್ವಿಟರ್‌ಗೆ ಹೊಸ ಸಿಇಒ ನೇಮಿಸಿರುವುದಾಗಿ ಇಲಾನ್‌ ಮಸ್ಕ್‌ ತಿಳಿಸಿದ್ದಾರೆ. ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಇನ್ನು 6 ವಾರಗಳಲ್ಲಿ ಟ್ವಿಟರ್‌ನಲ್ಲಿ ಆಕೆ ಸಿಇಒ ಸ್ಥಾನವನ್ನು ಅಲಂಕರಿಸಲಿದ್ದಾರೆ. ಆ ನಂತರ ನನ್ನ ಪದವಿಯು ಕಾರ್ಯನಿರ್ವಾಹಕ ಅಧ್ಯಕ್ಷ್ಯ ಹಾಗೂ ಸಿಟಿಒ (ಮುಖ್ಯ ತಾಂತ್ರಿ ಅಧಿಕಾರಿ) ಆಗಿ ಮುಂದುವರಿಯಲಿದೆ’ ಎಂದು ತಿಳಿಸಿದ್ದಾರೆ.

ಮಹಿಳೆಯ ಹೆಸರನ್ನು ಬಹಿರಂಗಪಡಿಸಿಲ್ಲ.ಆದರೆ ಎನ್‌ಬಿಸಿ ಯುನಿವರ್ಸಲ್‌ನ ಜಾಹೀರಾತು ವಿಭಾಗದ ಮುಖ್ಯಸ್ಥೆ ಲಿಂಡಾ ಯಾಕರಿನೊ ಟ್ವಿಟರ್‌ನ ಹೊಸ ಸಿಇಒ ಆಗಿ ನೇಮಕಗೊಳ್ಳಲಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ಮಸ್ಕ್ ಅವರು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಟ್ವಿಟರ್‌ಗೆ ಹೊಸ ಸಿಇಒ ಹುಡುಕಲು ಯೋಜಿಸುತ್ತಿರುವುದಾಗಿ ಸುಮಾರು 6 ತಿಂಗಳಿನಿಂದ ಹೇಳುತ್ತಿದ್ದರು. ನಾನು ಟ್ವಿಟರ್‌ನಲ್ಲಿ ನನ್ನ ಸಮಯ ಕಡಿಮೆ ಮಾಡುತ್ತೇನೆ ಮತ್ತು ಕಾಲಾನಂತರದಲ್ಲಿ ಟ್ವಿಟರ್‌ ಅಧಿಕಾರವನ್ನು ಬೇರೆಯವರಿಗೆ ಚಲಾಯಿಸಲು ಬಿಡುತ್ತೇನೆ ಎಂದು ಹೇಳಿದ್ದರು.

Advertisements

ಈ ಹಿನ್ನೆಲೆ ‘ಟ್ವಿಟರ್‌ನ ಸಿಇಒ ಸ್ಥಾನದಿಂದ ನಾನು ಕೆಳಗಿಳಿಯಬೇಕೆ?’ ಎಂದು ಟ್ವಿಟಿಗರನ್ನು ಕೇಳಿದ್ದರು. ಅವರು ನಡೆಸಿದ ಸಮೀಕ್ಷೆಯ ಪ್ರಕಾರ, ಶೇ.57.5ರಷ್ಟು ಜನರು ಇಲಾನ್‌ ಮಸ್ಕ್‌ ಅವರನ್ನು ಕೆಳಗಿಳಿಯಬೇಕು ಎಂದು ಉತ್ತರಿಸಿದ್ದರು.

ಕಳೆದ ವರ್ಷ 44 ಶತಕೋಟಿ ಡಾಲರ್‌ಗೆ ಟ್ವಿಟ್ಟರ್ ಖರೀದಿಸಿದ ಮಸ್ಕ್, ನಂತರದ ದಿನಗಳಲ್ಲಿ ಸಾವಿರಾರು ನೌಕರರನ್ನು ತೆಗೆದು ಹಾಕಿದ್ದರು. ಭಾರತವೂ ಸೇರಿದಂತೆ ಜಗತ್ತಿನ ಹಲವು ದೇಶಗಳ ಸೇ.75 ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ್ದರು. ಇದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಮಸ್ಕ್‌ ಟ್ವಿಟ್ಟರ್‌ ಸಿಇಒ ಆದ ನಂತರ ಹಲವು ಬದಲಾವಣೆಗಳನ್ನ ತಂದಿದ್ದರು. ಉದ್ಯೋಗ ಕಡಿತಗೊಳಿಸಿದ್ದಲ್ಲದೇ, ಉದ್ಯೋಗ ಸಮಯ ಹೆಚ್ಚಿಸಿದ್ದರು. ಜೊತೆಗೆ ಬ್ಲೂಟಿಕ್‌ ಪಡೆಯಲು ಹಣ ಪಾವತಿಸುವ ಕ್ರಮ ಜಾರಿಗೆ ತಂದರು. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಮೂಲದ ಸಬೀಹ್ ಖಾನ್ ಆ್ಯಪಲ್ ಕಂಪನಿಯ ಸಿಒಒ ಆಗಿ ನೇಮಕ

ದುಬಾರಿ ಬೆಲೆಯ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ...

ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ: ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ...

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ...

ಬೆಂಗಳೂರು | ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ

ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ...

Download Eedina App Android / iOS

X