ಸೈಬರ್‌ ದಾಳಿ | ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಸರ್ಕಾರದಿಂದ ತುರ್ತು ಎಚ್ಚರಿಕೆ

Date:

Advertisements

ಕೇಂದ್ರ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-In) ಸಂಸ್ಥೆ, ಆಂಡ್ರಾಯ್ಡ್ ಮೊಬೈಲ್ ಬಳಕೆದಾರರಿಗೆ ಗಂಭೀರ ಎಚ್ಚರಿಕೆಯನ್ನು ನೀಡಿದೆ. ಇತ್ತೀಚಿನ ಆಂಡ್ರಾಯ್ಡ್ 13 ಸೇರಿದಂತೆ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ ಹಲವಾರು ಆವೃತ್ತಿಗಳಲ್ಲಿ ದುರ್ಬಲತೆಗಳು ಕಂಡುಬಂದಿದೆ. ಇವುಗಳು ನಿಮ್ಮ ಸ್ಮಾರ್ಟ್​ಫೋನ್​ ಒಳಗಡೆ ಪ್ರವೇಶ ಪಡೆದು, ಸೂಕ್ಷ್ಮ ಮಾಹಿತಿಯನ್ನು ಕದಿಯಲು ಪ್ರಾರಂಭಿಸುತ್ತದೆ ಎಂದು ಸರ್ಕಾರ ಹೇಳಿದೆ.

CERT-In ಎಂಬುದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿದೆ. ಭಾರತದಲ್ಲಿ ನಡೆಯುವ ಸೈಬರ್ ದಾಳಿಯನ್ನು ಸುರಕ್ಷಿತಗೊಳಿಸುವುದು ಇದರ ಗುರಿಯಾಗಿದೆ. ಹ್ಯಾಕಿಂಗ್ ಮತ್ತು ಫಿಶಿಂಗ್ ಸೇರಿದಂತೆ ಸೈಬರ್ ಭದ್ರತೆ ಸಮಸ್ಯೆಗಳನ್ನು ಪರಿಹರಿಸುವ ಜವಾಬ್ದಾರಿಯನ್ನು ಇದು ಹೊಂದಿದೆ. CERT-In ಹೇಳಿರುವ ಪ್ರಕಾರ ಅತ್ಯಂತ ಜನಪ್ರಿಯ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಒಂದಾದ ಆಂಡ್ರಾಯ್ಡ್ OSನ ಹಲವಾರು ಆವೃತ್ತಿಗಳಲ್ಲಿ ಅಪಾಯಗಳು ಕಂಡುಬಂದಿದೆ.

CERT ಪ್ರಕಾರ ಈ ದೋಷಗಳು ಆಂಡ್ರಾಯ್ಡ್ ಆವೃತ್ತಿ 10, 11, 12, 12L ಮತ್ತು 13 ಮೇಲೆ ಪರಿಣಾಮ ಬೀರುತ್ತವೆ. ಫ್ರೇಮ್‌ವರ್ಕ್, ಆಂಡ್ರಾಯ್ಡ್ ರನ್‌ಟೈಮ್, ಸಿಸ್ಟಮ್ ಕಾಂಪೊನೆಂಟ್, ಗೂಗಲ್ ಪ್ಲೇ ಸಿಸ್ಟಮ್ ಅಪ್‌ಡೇಟ್‌ಗಳು, ಕರ್ನಲ್, ಆರ್ಮ್ ಕಾಂಪೊನೆಂಟ್‌ಗಳು ಮತ್ತು ಕ್ವಾಲ್ಕಂನಲ್ಲಿನ ದೋಷಗಳಿಂದ ಅವು ಉಂಟಾಗಿವೆ ಎಂದು ಹೇಳಿದೆ.

Advertisements

ಆಂಡ್ರಾಯ್ಡ್‌ನಲ್ಲಿ ಈಗಾಗಲೇ ಹಲವಾರು ದುರ್ಬಲತೆಗಳು ವರದಿಯಾಗಿದೆ. ಇದನ್ನು ಬಳಸಿಕೊಂಡು ಹ್ಯಾಕರ್​ಗಳು ನಿಮ್ಮ ಮೊಬೈಲ್‌ ಫೋನಿನಿಂದ ಸೂಕ್ಷ್ಮ ಮಾಹಿತಿಯನ್ನು ಕದಿಯಲು ಪ್ರಯತ್ನಿಸುತ್ತಾರೆ,” ಎಂದು ಹೇಳಿದೆ.

ಈ ಸುದ್ದಿ ಓದಿದ್ದೀರಾ? ಅಂತಿಮ ಟಿ20ಯಲ್ಲಿ ಗೆದ್ದು ಸರಣಿ ಉಳಿಸಿಕೊಂಡ ವಿಂಡೀಸ್: ಸೂರ್ಯ ಕುಮಾರ್ ಯಾದವ್‌ ಹೋರಾಟ ವ್ಯರ್ಥ

ಅಪಾಯ ಏನು?

ನಿಮ್ಮ ಮೊಬೈಲ್‌ನ ಕೆಲವು ಖಾತೆಗಳಿಗೆ ಅನುಮತಿಸುವ ಆಪರೇಟಿಂಗ್‌ ಸಿಸ್ಟಂನಲ್ಲಿನ ಎಲಿವೇಟೆಡ್ ಪ್ರಿವಿಲೇಜಸ್‌ ಭಾಗಕ್ಕೆ ತೊಂದರೆ ನೀಡಬಹುದು. ಹಲವು ಆಪ್‌ಗಳು ಸರಿಯಾಗಿ ಕಾರ್ಯನಿರ್ವಹಿಸದಿರುವ ಸಾಧ್ಯತೆ.

ಪಾಸ್‌ವರ್ಡ್‌ಗಳು, ಫೋಟೋಗಳು ಮತ್ತು ಹಣಕಾಸಿನ ಡೇಟಾಗಳನ್ನು ಒಳಗೊಂಡಿರುವ ಸೂಕ್ಷ್ಮ ಮಾಹಿತಿಯನ್ನು ಕದಿಯಬಹುದು.

ಆಪ್‌ ಸೇವೆಯ ನಿರಾಕರಣೆ ಪರಿಸ್ಥಿತಿಗಳನ್ನು ಉಂಟುಮಾಡಿ, ನಿಮ್ಮ ಮೊಬೈಲ್‌ ಅನ್ನು ನಿಷ್ಪ್ರಯೋಜಕವಾಗಿಸಬಹುದು

ನಿಮ್ಮ ಮೊಬೈಲ್‌ನಲ್ಲಿ ದುರುದ್ದೇಶಪೂರಿತ ಸಾಫ್ಟ್‌ವೇರ್‌ಅನ್ನು ಅಳವಡಿಸಬಹುದು

ಸೈಬರ್‌ ದಾಳಿಯಿಂದ ನಿಮ್ಮ ಆಂಡ್ರಾಯ್ಡ್‌ ಫೋನ್‌ ರಕ್ಷಣೆ ಹೇಗೆ?

ಆಂಡ್ರಾಯ್ಡ್‌ ಮೊಬೈಲ್‌ ಬಳಕೆದಾರರು ತಮ್ಮ ಮೊಬೈಲ್‌ಗೆ ಸೈಬರ್‌ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾದಷ್ಟು ಬೇಗ ನವೀಕರಿಸಬೇಕೆಂದು(ಅಪ್‌ಡೇಟ್) CERT-In ಶಿಫಾರಸು ಮಾಡುತ್ತದೆ. ಮುಖ್ಯವಾಗಿ, ಈ ದೋಷಗಳನ್ನು ಪರಿಹರಿಸುವ ಭದ್ರತಾ ಸುರಕ್ಷತೆಗಳನ್ನು ಗೂಗಲ್‌ ಈಗಾಗಲೇ ಬಿಡುಗಡೆ ಮಾಡಿದೆ. ವಿವರಗಳಿಗಾಗಿ ಬಳಕೆದಾರರು ‘ಆಂಡ್ರಾಯ್ಡ್‌ ಸೆಕ್ಯುರಿಟಿ ಬುಲೆಟಿನ್-ಆಗಸ್ಟ್ 2023′(‘Android Security Bulletin-August 2023’)ಗೆ ಭೇಟಿ ನೀಡಬಹುದು.

  • ನಿಮ್ಮ ಆಂಡ್ರಾಯ್ಡ್‌ ಫೋನ್ ಅನ್ನು ನವೀಕರಿಸಲು:
  • ನಿಮ್ಮ ಮೊಬೈಲ್‌ನ ಸೆಟ್ಟಿಂಗ್‌(Settings) ವಿಭಾಗಕ್ಕೆ ಹೋಗಿ,
  • ಸಿಸ್ಟಮ್(System) ವಿಬಾಗದ ಮೇಲೆ ಟ್ಯಾಪ್ ಮಾಡಿ(ಸ್ಪರ್ಶಿಸಿ),
  • ಸಿಸ್ಟಂ ನವೀಕರಣಗಳ(System updates) ಮೇಲೆ ಟ್ಯಾಪ್ ಮಾಡಿ,
  • ನವೀಕರಣವು(Update) ಲಭ್ಯವಿದ್ದರೆ, ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಮೇಲೆ ಟ್ಯಾಪ್ ಮಾಡಿ,
  • ನವೀಕರಣವನ್ನು ಪೂರ್ಣಗೊಳಿಸಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ

ನವೀಕರಣದ ಜೊತೆಗೆ ನಿಮ್ಮ ಸಾಧನಗಳನ್ನು ಅಂತಹ ಯಾವುದೇ ದುರ್ಬಲತೆ ಮತ್ತು ನ್ಯೂನತೆಗಳಿಂದ ಸುರಕ್ಷಿತವಾಗಿರಿಸಲು ಇನ್ನೂ ಕೆಲವು ಸಲಹೆಗಳಿವೆ:

  • ವಿಶ್ವಾಸಾರ್ಹ ಮೂಲಗಳಿರುವ ಅಪ್ಲಿಕೇಶನ್‌ಗಳನ್ನು(App) ಇನ್‌ಸ್ಟಾಲ್‌ ಮಾಡಿ
  • ಮಾಲ್‌ವೇರ್‌ಗಳಿಂದ ರಕ್ಷಣೆ ಪಡೆಯಲು ನಿಮ್ಮ ಸಾಧನದಲ್ಲಿ (Anti virus) ಅಳವಡಿಸಿಕೊಳ್ಳಿ
  • ಇಮೇಲ್‌ಗಳು ಮತ್ತು ಅಟ್ಯಾಚ್ಡ್‌ಮೆಂಟ್‌ಗಳನ್ನು ವಿಶ್ವಾಸಾರ್ಹ ಮೂಲಗಳಿಂದ ಮಾತ್ರ ಸ್ವೀಕರಿಸಿ
  • ನಿಮ್ಮ ಮೊಬೈಲ್‌ನ ಆಪ್‌ಗಳಲ್ಲಿ ಪ್ರಬಲವಾದ ಪಾಸ್‌ವರ್ಡ್ ರಚಿಸಿ ಮತ್ತು ಟು-ಫ್ಯಾಕ್ಟರ್ ಅಥೆಂಟಿಕೇಷನ್‌ಅನ್ನು ಸಕ್ರಿಯಗೊಳಿಸಿ(two-factor authentication)
  • ನಿಮ್ಮ ಡೇಟಾವನ್ನು ಆಗಾಗ ಬ್ಯಾಕಪ್ ಮಾಡಿಕೊಳ್ಳಿ. ಒಂದು ವೇಳೆ ನಿಮ್ಮ ಮೊಬೈಲ್ ಕಳೆದುಹೋದರೆ ನಿಮ್ಮ ಡೇಟಾವನ್ನು ಮರುಪಡೆಯಲು ಸಾಧ್ಯವಾಗುತ್ತದೆ.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಮೂಲದ ಸಬೀಹ್ ಖಾನ್ ಆ್ಯಪಲ್ ಕಂಪನಿಯ ಸಿಒಒ ಆಗಿ ನೇಮಕ

ದುಬಾರಿ ಬೆಲೆಯ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ...

ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ: ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ...

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ...

ಬೆಂಗಳೂರು | ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ

ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ...

Download Eedina App Android / iOS

X