ಗೂಗಲ್‌ ಮ್ಯಾಪ್‌ನಲ್ಲಿ ಬರಲಿವೆ ಹೊಸ ಫೀಚರ್‌ಗಳು

Date:

Advertisements

ಇದು ಬೇಸಿಗೆ ಕಾಲ. ಹವಮಾನ ಬದಲಾವಣೆಯಿಂದಾಗಿ ತಾಪಮಾನವೂ ಹೆಚ್ಚಾಗಿದ್ದು, ಭಾರೀ ಬಿಸಿಲು ಜನರನ್ನು ಕಾಡುತ್ತಿದೆ. ಬೇಸಿಗೆಯ ಬೇಗೆಯಿಂದ ತಪ್ಪಿಸಿಕೊಳ್ಳಲು ಜನರು ಮಲೆನಾಡಿದಂತೆ ತಂಪು ನೀಡುವ ಪ್ರದೇಶಗಳತ್ತ ಪ್ರವಾಸ ಬೆಳೆಸುತ್ತಿದ್ದಾರೆ. ಹಲವರು ತಾವು ಎಲ್ಲಿ ಹೋಗಬೇಕು, ಅಲ್ಲಿ ಏನೆಲ್ಲಾ ಸಿಗುತ್ತದೆ ಎಂದು ಮೊದಲೇ ಗೂಗಲ್‌ನಲ್ಲಿ ಹುಡುಕುತ್ತಾರೆ. ಪ್ರಯಾಣ ಮಾರ್ಗಕ್ಕಾಗಿ ಗೂಗಲ್‌ ಮ್ಯಾಪ್‌ಅನ್ನೂ ಬಳಸಲುತ್ತಾರೆ.

ಅಂತಹವರಿಗಾಗಿ, ಗೂಗಲ್‌ ಮ್ಯಾಪ್ ಒಂದೆರಡು ಹೊಸ ‘ಫೀಚರ್‌’ಗಳನ್ನು ತಂದಿದೆ. ಹೊಸ ಫೀಚರ್‌ಗಳು ಈ ತಿಂಗಳಿನಲ್ಲಿ ಲಭ್ಯವಾಗಲಿವೆ.

ಗೂಗಲ್‌ ಮ್ಯಾಪ್‌ನಲ್ಲಿ ಹೊಸದಾಗಿ ಗ್ಲಾನ್ಸ್‌ ಡೈರೆಕ್ಷನ್‌ ಪ್ರಾರಂಭವಾಗುತ್ತಿದೆ. ಇದು ಮೊಬೈಲ್‌ ಲಾಕ್‌ಸ್ಟ್ರೀನ್‌ನಲ್ಲಿಯೇ ಬಳಕೆದಾರರು ತಮ್ಮ ಪ್ರಯಾಣವನ್ನು ಗಮನಿಸಲು ಮಾಡಲು ಸಹಾಯ ಮಾಡುತ್ತದೆ. “ಒಮ್ಮೆ ನೀವು ಗ್ಲಾನ್ಸ್ ಡೈರೆಕ್ಷನ್‌ ಆಯ್ಕೆ ಮಾಡಿಕೊಂಡರೆ, ನಿಮ್ಮ ಹೋಗಬೇಕಿರುವ ಸ್ಥಳಕ್ಕೆ ಹೋಗಬೇಕಾದ ದಾರಿಯನ್ನು ಅದು ನಿರ್ದೇಶಿಸುತ್ತದೆ. ಮುಂದಿನ ತಿರುವು ಎಲ್ಲಿದೆ ಎಂಬುದನ್ನು ಲಾಕ್‌ಸ್ಟ್ರೀನ್‌ನಲ್ಲಿಯೇ ತೋರಿಸುತ್ತದೆ. ಇದು ಆಂಡ್ರಾಯ್ಡ್‌ ಫೋನ್‌ಗಳಿಗೆ ಲಭ್ಯವಿದೆ” ಎಂದು ಗೂಗಲ್‌ ಮ್ಯಾಪ್‌ನ ಹಿರಿಯ ವ್ಯವಸ್ಥಾಪಕಿ ಕ್ರಿಸ್ಟಿನಾ ಟಾಂಗ್ ಹೇಳಿದ್ದಾರೆ.

Advertisements

“ಜೊತೆಗೆ, ಮಾರ್ಗ ಮಧ್ಯೆ ವಿರಾಮ ಪಡೆದುಕೊಳ್ಳಲು ಇಚ್ಚಿಸಿದಲ್ಲಿ ಅವುಗಳನ್ನು ಮೆನ್ಶನ್‌ ಮಾಡಬಹುದು. ನೀವು ಹೋಗಬೇಕಿರುವ ಸ್ಥಳದ ಜೊತೆಗೆ, ನೀವು ವಿಶ್ರಾಂತಿ ಪಡೆದುಕೊಳ್ಳಲು ಇಚ್ಚಿಸುವ ಹೋಟೆಲ್ ಅಥವಾ ಆಕರ್ಷಕ ಸ್ಥಳಗಳನ್ನೂ ಒಮ್ಮೆಲೆ ಗುರುತಿಸಿ, ‘ಮಾರ್ಗ’ದ ಮೇಲೆ ಕ್ಲಿಕ್ ಮಾಡಿದರೆ, ಅದು ಹತ್ತಿರ ಸ್ಥಳಕ್ಕೆ ಮೊದಲು ಸಿಗುವ ಸ್ಥಳದಿಂದ ಅಂತಿನ ಸ್ಥಳದವರೆಗು ಮಾರ್ಗವನ್ನು ಸೂಚಿಸುತ್ತಾ ಕರೆದೊಯ್ಯುತ್ತದೆ. ಪದೇ ಪದೇ ಮಾರ್ಗವನ್ನು ಬದಲಿಸುವ ಅಗತ್ಯವಿರುವುದಿಲ್ಲ” ಎಂದು ಅವರು ಹೇಳಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಮೂಲದ ಸಬೀಹ್ ಖಾನ್ ಆ್ಯಪಲ್ ಕಂಪನಿಯ ಸಿಒಒ ಆಗಿ ನೇಮಕ

ದುಬಾರಿ ಬೆಲೆಯ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ...

ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ: ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ...

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ...

ಬೆಂಗಳೂರು | ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ

ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ...

Download Eedina App Android / iOS

X