ಸಾಮಾಜಿಕ ಮಾಧ್ಯಮ ಟ್ವಿಟರ್, ಟ್ವೀಟ್ಗಳ ಓದುವಿಕೆ ಮೇಲೆ ಹೇರಿದ್ದ ಮಿತಿಯನ್ನು ಬದಲಿಸಿದೆ. ಕಂಪನಿಯ ಮಾಲೀಕ ಎಲಾನ್ ಮಸ್ಕ್ ಓದುವಿಕೆಯ ಬಗ್ಗೆ ಜಾರಿಗೊಳಿಸಿದ ನಿಯಮವನ್ನು ಮೂರು ಬಾರಿ ಬದಲಿಸಿ ಟ್ವೀಟ್ ಮಾಡಿದ್ದಾರೆ.
ಮೊದಲು ಒಂದು ದಿನದ ಹಿಂದಷ್ಟೆ ಟ್ವಿಟರ್ನಲ್ಲಿ ದಿನವೊಂದಕ್ಕೆ ವೆರಿಫೈಡ್ ಖಾತೆಗಳಿಗೆ 6000, ಅನ್ವೆರಿಫೈಡ್ ಖಾತೆಗಳಿಗೆ 600 ಹಾಗೂ ನೂತನ ಅನ್ವೆರಿಫೈಡ್ ಖಾತೆಗಳಿಗೆ 300 ಟ್ವೀಟ್ಗಳ ಓದುವಿಕೆಯ ಮಿತಿ ಹೇರಲಾಗಿದೆ ಎಂದು ಟ್ವೀಟ್ ಮಾಡಿದ್ದರು.
ಇಂದು (ಜುಲೈ 2) ಮತ್ತೆ ಟ್ವೀಟ್ ಮಾಡಿರುವ ಎಲಾನ್ ಮಸ್ಕ್, ಟ್ವೀಟ್ಗಳ ಓದುವಿಕೆಯ ಮಿತಿಯನ್ನು ಬದಲಾಯಿಸಿರುವುದಾಗಿ ತಿಳಿಸಿದ್ದರು. ಹೊಸ ನಿಯಮದ ಪ್ರಕಾರ ವೆರಿಫೈಡ್ ಖಾತೆಯ ಬಳಕೆದಾರರು 8000, ಅನ್ವೆರಿಫೈಡ್ ಬಳಕೆದಾರರು 800 ಹಾಗೂ ನೂತನ ಅನ್ವೆರಿಫೈಡ್ ಬಳಕೆದಾರರು 400 ಟ್ವೀಟ್ಗಳನ್ನು ಓದಬಹುದು ಎಂದಿದ್ದರು.
ಈ ಸುದ್ದಿ ಓದಿದ್ದೀರಾ? ನವದೆಹಲಿ: ಮೇಲ್ಸೇತುವೆ ನಿರ್ಮಾಣಕ್ಕಾಗಿ ಹಿಂದೂ ಹಾಗೂ ಮುಸ್ಲಿಂ ಧಾರ್ಮಿಕ ಕಟ್ಟಡಗಳ ತೆರವು
ಇದಾದ ಕೆಲವು ಕೆಲವು ಗಂಟೆಗಳ ನಂತರ ಓದುವ ಮಿತಿಯು ವೆರಿಫೈಡ್ 10000, ಅನ್ವೆರಿಫೈಡ್ 1000 ಹಾಗೂ ಹೊಸ ಅನ್ ವೆರಿಫೈಡ್ ಮಿತಿ 500ಕ್ಕೆ ಹೆಚ್ಚಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.
ಟ್ವೀಟ್ಗಳ ನೋಡಲು ಸೈನ್ಇನ್ ಕಡ್ಡಾಯ
ಟ್ವಿಟರ್ನಲ್ಲಿ ಈ ಮೊದಲು, ಬಳಕೆದಾರರು ಖಾತೆಗೆ ಲಾಗ್ ಇನ್ ಆಗದಿದ್ದರೂ ಟ್ವೀಟ್ಗಳನ್ನು ನೋಡುವ, ಓದುವ ಅವಕಾಶವನ್ನು ನೀಡಲಾಗಿತ್ತು. ಇನ್ನು ಮುಂದೆ ಯಾವುದೇ ಟ್ವೀಟ್ಗಳನ್ನು ಓದುವುದಿದ್ದರೂ ಅಥವಾ ನೋಡುವುದಕ್ಕೆ ಸೈನ್ ಇನ್ ಮಾಡುವುದು ಕಡ್ಡಾಯವಾಗುತ್ತದೆ. ಈ ನಿಯವನ್ನು ಎಲಾನ್ ಮಸ್ಕ್ ತಾತ್ಕಾಲಿಕ ತುರ್ತು ಕ್ರಮ ಎಂದು ತಿಳಿಸಿದ್ದಾರೆ.
25 ಸಾವಿರ ಅಕ್ಷರಗಳ ಬರೆಯಬಹುದು
ಮತ್ತೊಂದು ಹೊಸ ನಿಯಮವನ್ನು ಜಾರಿಗೊಳಿಸಿರುವ ಎಲಾನ್ ಮಸ್ಕ್, ಟ್ವಿಟರ್ ಖಾತೆ ಹೊಂದಿರುವವರು 25 ಸಾವಿರ ಅಕ್ಷರಗಳನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಬಹುದು. ಜೊತೆಗೆ 4 ಭಾವಚಿತ್ರಗಳನ್ನು ಅಟ್ಯಾಚ್ ಮಾಡದೆಯೆ ಕಾಪಿ ಮಾಡುವ ಮೂಲಕ ಪೋಸ್ಟ್ ಮಾಡಬಹುದು. ಆದರೆ ಈ ಆಯ್ಕೆಗಳನ್ನು ಹೊಂದಲು ನಿಮ್ಮ ಟ್ವಿಟರ್ ಖಾತೆಗೆ ಹಣ ಪಾವತಿಸಿ ಚಂದಾದಾರರಾಗಬೇಕು ಎಂದಿದ್ದಾರೆ.
ಟ್ವಿಟರ್ ಸರ್ವರ್ ಡೌನ್
ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್ ಶನಿವಾರ (ಜುಲೈ 1) ಸಂಜೆ ವಿಶ್ವದಾದ್ಯಂತ ಸ್ಥಗಿತಗೊಂಡಿದೆ. ಹೆಚ್ಚಿನ ಸಂಖ್ಯೆಯ ಬಳಕೆದಾರರು ಈ ಬಗ್ಗೆ ದೂರು ನೀಡಿದ್ದಾರೆ. ತಮಗೆ ಟ್ವೀಟ್ ಬ್ಯಾಕ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, 4,000 ಕ್ಕೂ ಹೆಚ್ಚು ಟ್ವಿಟರ್ ಬಳಕೆದಾರರು ಡೌನ್ ಡಿಟೆಕ್ಟರ್ ಸೈಟ್ನಲ್ಲಿ ಸಮಸ್ಯೆಯ ಬಗ್ಗೆ ದೂರು ನೀಡಿದ್ದಾರೆ.
ಭಾರತದ ಬಹಳಷ್ಟು ಗ್ರಾಹಕರಿಗೆ ಟ್ವಿಟರ್ ಬಳಕೆಯಲ್ಲಿ ಸಮಸ್ಯೆ ಎದುರಾಗಿತ್ತು. ಟ್ವಿಟರ್ನಲ್ಲೇ ಟ್ವಿಟರ್ಡೌನ್ ಎಂಬುದು ಟಾಪ್ ಟ್ರೆಂಡಿಂಗ್ ಆಗಿತ್ತು. #TwitterDown ಹ್ಯಾಷ್ಟಾಗ್ ಜತೆ 25 ಸಾವಿರಕ್ಕೂ ಅಧಿಕ ಮಂದಿ ಈ ಕುರಿತು ಟ್ವೀಟ್ ಮಾಡಿದ್ದರು.