ವಾಟ್ಸ್‌ಆ್ಯಪ್‌ ಫೀಚರ್‌; ಒಂದೇ ಬಾರಿ 100 ಫೋಟೋ- ವಿಡಿಯೋ ಕಳುಹಿಸುವ ಅವಕಾಶ

Date:

Advertisements
  • ಹೊಸ ಫೀಚರ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಬಳಕೆದಾರರಿಗೆ ಲಭ್ಯ
  • ಒಂದೇ ಬಾರಿ ಗರಿಷ್ಠ 100 ಫೋಟೋ- ವಿಡಿಯೋ ಕಳುಹಿಸಬಹುದು

ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಕಂಪನಿಯು ಭರ್ಜರಿ ಫೀಚರ್‌ಗಳನ್ನು ಒದಗಿಸಿದ್ದು, ಇನ್ನೂ ಮುಂದೆ ಬಳಕೆದಾರರು 100 ಫೋಟೋ ಅಥವಾ ವಿಡಿಯೋಗಳನ್ನು ಒಂದೇ ಬಾರಿ ಕಳುಹಿಸಬಹುದು.

ಈ ಹೊಸ ಫೀಚರ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಬಳಕೆದಾರರಿಗೆ ಲಭ್ಯವಿದೆ. ಹೊಸ ಫೀಚರ್‌ಗಳು ದೊರಕಬೇಕಾದರೆ ಗೂಗಲ್‌ ಪ್ಲೇಸ್ಟೋರ್‌ ಅಥವಾ ಆ್ಯಪಲ್‌ ಸ್ಟೋರ್‌ಗೆ ಹೋಗಿ ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಮಾಡಿಕೊಳ್ಳಬೇಕು.

ವಾಟ್ಸ್‌ಆ್ಯಪ್‌ಗೆ ಯಾವೆಲ್ಲ ಹೊಸ ಫೀಚರ್‌ಗಳು ಬಂದಿವೆ?

Advertisements
  • ಇನ್ನು ಮುಂದೆ ಬಳಕೆದಾರರು ಒಂದೇ ಬಾರಿ ಗರಿಷ್ಠ 100 ಫೋಟೋ ಅಥವಾ ವಿಡಿಯೋಗಳನ್ನು ಕಳುಹಿಸಬಹುದು. ಈವರೆಗೆ 30 ಫೋಟೋ ಅಥವಾ ವಿಡಿಯೋ ಕಳುಹಿಸಲು ಅವಕಾಶವಿತ್ತು.
  • ನೂತನ ಫೀಚರ್‌ನಲ್ಲಿ ಡಾಕ್ಯುಮೆಂಟ್‌ ಕಳುಹಿಸುವಾಗ ಅದಕ್ಕೆ ಕ್ಯಾಪ್ಷನ್‌ ಹಾಕುವ ಅವಕಾಶವಿದೆ.
  • ದೊಡ್ಡ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಸಬ್ಜೆಕ್ಟ್‌ ಮತ್ತು ಡಿಸ್ಕ್ರಿಪ್ಷನ್‌ನಲ್ಲಿ ಹೆಚ್ಚಿನ ವಿವರ ನಮೂದಿಸಬಹುದು.
  • ಬಳಕೆದಾರರು ಇನ್ನು ಮುಂದೆ ಪರ್ಸನಲೈಜ್ಡ್‌ ಅವತಾರ್‌ಗಳನ್ನು ರಚಿಸಿಕೊಳ್ಳಬಹುದು. ಅದನ್ನು ಪ್ರೊಫೈಲ್‌ ಆಗಿಯೂ ಬಳಸಬಹುದು. ಈ ಆಯ್ಕೆ ಬೇಕಿದ್ದರೆ ಸೆಟ್ಟಿಂಗ್ಸ್‌ಗೆ ಹೋಗಿ, ಅಲ್ಲಿ ಅವತಾರ್‌ ಎಂಬ ಆಯ್ಕೆಯಿದೆ.

ವಿಡಿಯೋ ಹಂಚಿಕೊಳ್ಳುವುದು ಹೇಗೆ?

ಇದಕ್ಕಾಗಿ ನೀವು ಲೇಟೆಸ್ಟ್‌ ವರ್ಷನ್‌ನ ವಾಟ್ಸ್‌ಆ್ಯಪ್‌ಗೆ ಅಪ್‌ಗ್ರೇಡ್‌ ಆಗಬೇಕು. ಬಳಿಕ ವಾಟ್ಸ್‌ಆ್ಯಪ್‌ನಲ್ಲಿ ಯಾರಿಗಾದರೂ ಅತ್ಯಧಿಕ ಫೋಟೋಸ್‌, ವಿಡಿಯೋಸ್‌ ಕಳುಹಿಸಬಹುದು. ಗರಿಷ್ಠ 100ರವರೆಗೆ ಫೋಟೋ ಅಥವಾ ವಿಡಿಯೋ ಫೈಲ್‌ಗಳನ್ನು ಕಳುಹಿಸಬಹುದು.

ಭವಿಷ್ಯದಲ್ಲಿ ಇನ್ನಷ್ಟು ಫೀಚರ್ಸ್‌

ಮುಂದಿನ ದಿನಗಳಲ್ಲಿ ವಾಟ್ಸ್‌ಆ್ಯಪ್‌ ಧ್ವನಿ ಸಂದೇಶವನ್ನು ಅಕ್ಷರ ರೂಪಕ್ಕೆ ಪರಿವರ್ತಿಸುವ ಪ್ರಯತ್ನದಲ್ಲಿದೆ. ಯಾರಾದರೂ ವಾಯ್ಸ್‌ ರೆಕಾರ್ಡ್‌ ಕಳುಹಿಸಿದರೆ ಆ ಧ್ವನಿಯಲ್ಲಿರುವ ಸಂದೇಶವನ್ನು ಅಕ್ಷರ ರೂಪದಲ್ಲಿ ಓದುವ ಅವಕಾಶ ಭವಿಷ್ಯದಲ್ಲಿ ದೊರಕಲಿದೆ. ಆದರೆ, ಈ ಫೀಚರ್‌ ಸದ್ಯ ಅಭಿವೃದ್ಧಿ ಹಂತದಲ್ಲಿದ್ದು, ಯಾವಾಗ ಬಿಡುಗಡೆಯಾಗುತ್ತದೆ ಎಂಬುದರ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಧ್ವನಿ ಸಂದೇಶಗಳನ್ನು ಸ್ಟೇಟಸ್‌ ಅಪ್ಡೇಟ್‌ ಆಗಿ ಹಂಚಿಕೊಳ್ಳುವ ಅವಕಾಶವನ್ನು ವಾಟ್ಸ್‌ಆ್ಯಪ್‌ ತರಲಿದೆ. ಪ್ರಸ್ತುತ ನಾವು ಫೋಟೋ, ವಿಡಿಯೋ ಹಾಗೂ ಬರಹಗಳನ್ನು ಮಾತ್ರ ಸ್ಟೇಟಸ್‌ ರೀತಿಯಲ್ಲಿ ಹಂಚಿಕೊಳ್ಳಲು ಸಾಧ್ಯವಾಗುತ್ತದೆ.

ಈ ಸುದ್ದಿ ಓದಿದ್ದೀರಾ ಬಾಹ್ಯಾಕಾಶದಿಂದ ಈಜಿಪ್ಟ್‌ನ ಪಿರಮಿಡ್‌ ಚಿತ್ರ ಸೆರೆಹಿಡಿದ ನಾಸಾ; ವಾವ್‌ ಎಂದ ನೆಟ್ಟಿಗರು

ಚಾಟ್ ಪಟ್ಟಿ ಮತ್ತು ನೋಟಿಫಿಕೇಶನ್‌ ಮೂಲಕ ಕಾಂಟ್ಯಾಕ್ಟ್‌ಗಳನ್ನು ನಿರ್ಬಂಧಿಸಲು ಅಥವಾ ಬ್ಲಾಕ್‌ ಮಾಡಲು ಎರಡು ಹೊಸ ಶಾರ್ಟ್‌ಕಟ್‌ಗಳನ್ನು ವಾಟ್ಸ್‌ಆ್ಯಪ್‌ ನೀಡಲಿದೆ. ಸ್ಟೇಟಸ್‌ ಅಪ್ಡೇಟ್‌ಗಳನ್ನು ವರದಿ ಮಾಡಲು ಬಳಕೆದಾರರಿಗೆ ಅವಕಾಶ ನೀಡುವ ಹೊಸ ಸಾಮರ್ಥ್ಯವನ್ನು ಸೇರಿಸಲು ವಾಟ್ಸ್‌ಆ್ಯಪ್‌ ಪ್ರಯತ್ನಿಸುತ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಮೂಲದ ಸಬೀಹ್ ಖಾನ್ ಆ್ಯಪಲ್ ಕಂಪನಿಯ ಸಿಒಒ ಆಗಿ ನೇಮಕ

ದುಬಾರಿ ಬೆಲೆಯ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ...

ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ: ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ...

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ...

ಬೆಂಗಳೂರು | ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ

ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ...

Download Eedina App Android / iOS

X