ವಾಟ್ಸಪ್‌ ಬಳಕೆದಾರರಿಗೆ ಗುಡ್ ನ್ಯೂಸ್‌: ವಿಡಿಯೋ ಸ್ಟೇಟಸ್‌ ಅವಧಿ 30 ಸೆಕೆಂಡ್‌ನಿಂದ 60 ಸೆಕೆಂಡ್‌ಗೆ ಏರಿಕೆ

Date:

Advertisements

ವಾಟ್ಸಪ್‌ ಬಳಕೆದಾರರಿಗೆ ಇದು ಗುಡ್ ನ್ಯೂಸ್‌. ವಾಟ್ಸಪ್‌ ಸ್ಟೇಟಸ್‌ ಅವಧಿ ಇದೀಗ ಒಂದು ನಿಮಿಷಕ್ಕೆ ಏರಿಕೆಯಾಗಿದೆ. ವಿಶ್ವಾದ್ಯಂತ ಎಲ್ಲರ ನೆಚ್ಚಿನ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್‌ನಲ್ಲಿ ದಿನಕ್ಕೊಂದು ಹೊಸ ಹೊಸ ಫೀಚರ್‌ಗಳು ಸೇರಿಕೊಳ್ಳುತ್ತಿದೆ. ವಾಟ್ಸಪ್ ಸಂಸ್ಥೆಯು, ಇದೀಗ ‘ವಾಟ್ಸಪ್ ಸ್ಟೇಟಸ್‌’ನಲ್ಲಿ ಈ ಪ್ರಮುಖ ಬದಲಾವಣೆ ತಂದಿದೆ.

ಅತ್ಯಂತ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಆ್ಯಪ್ ವಾಟ್ಸಪ್, ಈಗ ಮತ್ತೆ ಸ್ಟೇಟಸ್ ವಿಡಿಯೋ ಮಿತಿಯನ್ನು ಏರಿಕೆ ಮಾಡಿದೆ. ಇದರಿಂದಾಗಿ ವಾಟ್ಸಪ್ ಬಳಕೆದಾರರು ಒಂದು ನಿಮಿಷ (60 ಸೆಕೆಂಡ್) ಅವಧಿಯ ವಿಡಿಯೋಗಳನ್ನು ಸ್ಟೇಟಸ್‌ನಲ್ಲಿ ಪೋಸ್ಟ್ ಮಾಡಬಹುದಾಗಿದೆ. ಪ್ರಸ್ತುತ 30 ಸೆಕೆಂಡ್‌ಗಳ ವಿಡಿಯೋವನ್ನು ವಾಟ್ಸಪ್‌ ಸ್ಟೇಟಸ್‌ನಲ್ಲಿ ಹಾಕುವ ಮಿತಿ ನಿಗದಿ ಮಾಡಲಾಗಿತ್ತು.

ಆಂಡ್ರಾಯ್ಡ್ ಆವೃತ್ತಿ 2.24.7.6 ವರ್ಷನ್ ಅಪ್‌ಡೇಟ್‌ಗಾಗಿ ವಾಟ್ಸಪ್ ಸಂಸ್ಥೆಯು, ಬೀಟಾ ಸ್ಥಿತಿ ನವೀಕರಣಗಳ ಮೂಲಕ ಒಂದು ನಿಮಿಷದವರೆಗಿನ ವೀಡಿಯೊಗಳನ್ನು ಸ್ಟೇಟಸ್‌ನಲ್ಲಿ ಹಂಚಿಕೊಳ್ಳುವ ಸೌಲಭ್ಯವನ್ನು ಪರಿಚಯಿಸಿದೆ. ವಾಟ್ಸಪ್ ಸಂಸ್ಥೆಯು, ತನ್ನ ಬೀಟಾ ಕಾರ್ಯಕ್ರಮದ ಭಾಗವಾಗಿ ಸ್ಟೇಟಸ್ ಕಾರ್ಯಕ್ಕಾಗಿ ಈ ಹೊಸ ಫೀಚರ್‌ ಒದಗಿಸಿದೆ.

Advertisements

ಒಂದು ನಿಮಿಷದ ವಿಡಿಯೋ ಹಂಚಿಕೊಳ್ಳಿ ಐಫೋನ್ ಮೊಬೈಲ್ ಬಳಕೆದಾರರಿಗೆ ಕಂಪನಿಯು, iOS 24.10.10.74 ಅಪ್‌ಡೇಟ್‌ಗಾಗಿ ವಾಟ್ಸಪ್ ಬೀಟಾದೊಂದಿಗೆ ಫೀಚರ್‌ ಅನ್ನು ಲಾಂಚ್ ಮಾಡುತ್ತಿದೆ. ಇಲ್ಲಿಯವರೆಗೆ, ವಾಟ್ಸಪ್ ಬಳಕೆದಾರರು ತಮ್ಮ ಸ್ಟೇಟಸ್‌ನಲ್ಲಿ ಕೇವಲ 30 ಸೆಕೆಂಡ್‌ಗಳ ವರೆಗಿನ ವೀಡಿಯೊಗಳನ್ನು ಮಾತ್ರ ಹಂಚಿಕೊಳ್ಳಬಹುದಿತ್ತು. ಇದೀಗ, ವಾಟ್ಸಪ್ ಬಳಕೆದಾರರಿಗೆ ಒಂದು ನಿಮಿಷದ ವಿಡಿಯೋಗಳನ್ನು ಸ್ಟೇಟಸ್‌ನಲ್ಲಿ ಹಂಚಿಕೊಳ್ಳಲು ಅವಕಾಶ ನೀಡುವ ಗುರಿಯನ್ನು ಹೊಂದಿದೆ.

2017ರಲ್ಲಿ ವಾಟ್ಸಪ್ ಸಂಸ್ಥೆ ಮೊದಲ ಬಾರಿಗೆ ಸ್ಟೇಟಸ್ ಆಯ್ಕೆ ಪರಿಚಯಿಸಿದ್ದು, ಫೋಟೋ, ವಿಡಿಯೋ ಮತ್ತು ಜಿಫ್ ಫೈಲ್‌ಗಳನ್ನು ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಿತ್ತು. ಅಪ್ಲೋಡ್‌ ಮಾಡಿದ ಫೈಲ್‌ಗಳು 24 ಗಂಟೆಗಳ ನಂತರ ತನ್ನಷ್ಟಕ್ಕೆ ತಾನೇ ಮರೆಯಾಗುತ್ತವೆ. ಅಲ್ಲಿಯವರೆಗೆ ಬಳಕೆದಾರನ ಸಂಪರ್ಕದಲ್ಲಿರುವರಿಗೆ ಮಾತ್ರ ಸ್ಟೇಟಸ್‌ ಕಾಣಿಸುತ್ತದೆ. ಇತ್ತೀಚಿಗೆ ವಾಟ್ಸಪ್‌ ‘ಸ್ಟೇಟಸ್’ ಫೀಚರ್‌ನಲ್ಲಿ ಬದಲಾವಣೆ ತಂದಿದ್ದು, ವಾಟ್ಸಪ್‌ ಸ್ಟೇಟಸ್‌ ಅನ್ನು ನೇರವಾಗಿ ಫೇಸ್‌ಬುಕ್‌ ಒಡೆತನದ ಯಾವುದೇ ಸಾಮಾಜಿಕ ಆಪ್‌ ಖಾತೆಗೆ ಶೇರ್‌ ಮಾಡಬಹುದಾಗಿದೆ.

90 ಸೆಕೆಂಡ್‌ನಿಂದ 30 ಸೆಕೆಂಡ್‌ಗೆ ಕಡಿತ ಈ ಫೀಚರ್‌ ಪರಿಚಯಿಸಿದ ಪ್ರಾರಂಭದ ದಿನಗಳಲ್ಲಿ ಮೂರು ನಿಮಿಷದ ವಿಡಿಯೋಗಳಿಗೆ 90 ಸೆಕೆಂಡ್‌ ಅವಧಿ ನೀಡಲಾಗಿತ್ತು. ಅಲ್ಲದೇ, ಅಪ್ಲೋಡ್‌ ಮಾಡುವ ಫೈಲ್‌ 16 ಎಂಬಿಗಿಂತ ಜಾಸ್ತಿ ಇದ್ದರೆ, ಅದನ್ನು ಎಡಿಟ್ ಮಾಡಿ ಸ್ಟೇಟಸ್‌ಗೆ ಕಳುಹಿಸುವ ಅವಕಾಶ ನೀಡಲಾಗಿತ್ತು. ಆ ಬಳಿಕ ಸ್ಟೇಟಸ್‌ ಅನ್ನು 30 ಸೆಕೆಂಡ್‌ಗೆ ಇಳಿಸಲಾಗಿತ್ತು. ಇದೀಗ ಮತ್ತೆ ಈ ಅವಧಿಯನ್ನು 60 ಸೆಕೆಂಡ್‌ಗಳಿಗೆ ವಿಸ್ತರಿಸಿ, ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ. ಈಗಲೇ ನಿಮ್ಮ ವಾಟ್ಸಪ್ ಅಪ್ಡೇಟ್‌ ಮಾಡಿ ವಾಟ್ಸಪ್‌ನಲ್ಲಿ ವಿಡಿಯೋ ಸ್ಟೇಟಸ್‌ ಹಂಚಿಕೊಳ್ಳಬಹುದು.

ಇದರ ಜೊತೆಗೆ ವಾಯ್ಸ್‌ ನೋಟನ್ನು ಕೂಡ ಒಂದು ನಿಮಿಷಕ್ಕೆ ವಿಸ್ತರಿಸುವ ಬಗ್ಗೆಯೂ ವಾಟ್ಸಪ್ ಯೋಚಿಸಿದೆ ಎಂದು ತಿಳಿದುಬಂದಿದೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತೀಯ ಮೂಲದ ಸಬೀಹ್ ಖಾನ್ ಆ್ಯಪಲ್ ಕಂಪನಿಯ ಸಿಒಒ ಆಗಿ ನೇಮಕ

ದುಬಾರಿ ಬೆಲೆಯ ಮೊಬೈಲ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದ ಆ್ಯಪಲ್ ಕಂಪನಿಯು ತನ್ನ...

ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ: ಬಾಹ್ಯಾಕಾಶ ನಿಲ್ದಾಣ ತಲುಪಿದ ಗಗನಯಾತ್ರಿಗಳು

ಆಕ್ಸಿಯಮ್-4 ಕಾರ್ಯಾಚರಣೆಯ ಭಾಗವಾಗಿರುವ ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳಿದ್ದ...

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ಗಳನ್ನು ತಯಾರಿಸಿದ ಚೀನಾ

ಸೊಳ್ಳೆ ಗಾತ್ರದ ಮೈಕ್ರೋ ಡ್ರೋನ್‌ʼಗಳನ್ನು ಚೀನಾದ ವಿಜ್ಞಾನಿಗಳು ತಯಾರಿಸಿದ್ದಾರೆ. ಸೊಳ್ಳೆ ಗಾತ್ರದ...

ಬೆಂಗಳೂರು | ಡಿಜಿಟಲ್ ಅರೆಸ್ಟ್ ಮೂಲಕ ವೃದ್ಧ ದಂಪತಿಗೆ 4.79 ಕೋಟಿ ರೂ. ವಂಚನೆ

ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ಸುಮಾರು 4.79 ಕೋಟಿ ರೂಪಾಯಿ...

Download Eedina App Android / iOS

X