ಛತ್ತೀಸ್‌ಗಡ: ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ, ಜಾತಿ ಗಣತಿಯ ಭರವಸೆ

Date:

Advertisements

ಛತ್ತೀಸ್‌ಗಡ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪ್ರಣಾಳಿಕೆಯನ್ನು ಭಾನುವಾರ ಬಿಡುಗಡೆ ಮಾಡಲಾಗಿದ್ದು, ಜಾತಿ ಗಣತಿ ನಡೆಸುವ ಭರವಸೆ ನೀಡಲಾಗಿದೆ.

ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಮುಖ್ಯಮಂತ್ರಿ ಭೂಪೇಶ್ ಬಘೇಲ್, “ಜಾತಿ ಆಧಾರಿತ ಜನಗಣತಿ ನಡೆಸಲಾಗುವುದು. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಬುಡಕಟ್ಟು ಸಮುದಾಯಗಳು, ಅಲ್ಪಸಂಖ್ಯಾತರು, ಹಿಂದುಳಿದ ಮತ್ತು ಸಾಮಾನ್ಯ ವರ್ಗಗಳ ಜಾತಿ ಆಧಾರಿತ ಜನಗಣತಿ ನಡೆಸಲಾಗುವುದು. ಇದರಿಂದ ಈ ವರ್ಗಗಳಲ್ಲಿ ಹಿಂದುಳಿದಿರುವ ಜಾತಿಗಳಿಗೆ ರಾಜಕೀಯ ಲಾಭ ಮಾತ್ರವಲ್ಲ, ಸರ್ಕಾರವು ಅವರಿಗಾಗಿ ವಿಶೇಷ ನೀತಿಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಸಾಮಾಜಿಕ ಮತ್ತು ಆರ್ಥಿಕ ಪ್ರಯೋಜನಗಳನ್ನು ದೊರಕಿಸಬಹುದು. ಹೀಗಾಗಿ ಜಾತಿ ಆಧಾರಿತ ಜನಗಣತಿ ಅಗತ್ಯ… ” ಎಂದು ತಿಳಿಸಿದ್ದಾರೆ.

ಛತ್ತೀಸ್‌ಗಢದಲ್ಲಿ ನವೆಂಬರ್ 7 ಮತ್ತು 17 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

Advertisements

ಛತ್ತೀಸ್‌ಗಡ ಮೊದಲೇ ಪರಿಶಿಷ್ಟರು ಮತ್ತು ಒಬಿಸಿಗಳು ಹೆಚ್ಚಿರುವ ರಾಜ್ಯ. ಇಲ್ಲಿ ಹದಿನೈದು ವರ್ಷ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಮಣಿಸಿ 2018ರಲ್ಲಿ ಭೂಪೇಶ್ ಬಘೇಲ್‌ ನೇತೃತ್ವದ ಕಾಂಗ್ರೆಸ್ 68 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ 15 ಸ್ಥಾನಗಳಿಗೆ ಕುಸಿತ ಕಂಡಿತ್ತು. ಉಪಚುನಾವಣೆಗಳಲ್ಲೂ ಗೆದ್ದ ಕಾಂಗ್ರೆಸ್ ತನ್ನ ಸ್ಥಾನಗಳನ್ನು 71ಕ್ಕೆ ಏರಿಸಿಕೊಂಡಿತ್ತು.

ಶೇ. 34.5ರಷ್ಟು ಬುಡಕಟ್ಟು ಜನರು, ಶೇ. 43.5ರಷ್ಟಿರುವ ಒಬಿಸಿಗಳಿರುವ ಛತ್ತೀಸ್‌ಗಢದಲ್ಲಿ ಬಘೇಲ್‌ ಒಬಿಸಿ ಸಮುದಾಯದವರು. ರಾಜ್ಯದಲ್ಲಿ ಸಿಎಂ ಆದ ಮೊದಲ ಒಬಿಸಿ ವ್ಯಕ್ತಿಯೂ ಹೌದು. ಎಸ್‌ಸಿ ಮೀಸಲಾತಿಯನ್ನು ಶೇ.12ರಿಂದ ಶೇ.13ಕ್ಕೆ ಏರಿಸುವ ನಿಟ್ಟಿನಲ್ಲಿ ಎರಡು ಮಸೂದೆಗಳನ್ನು ಬಘೇಲ್ ಸರ್ಕಾರ ಮಂಡಿಸಿದೆ. ಆದರೆ ರಾಜ್ಯಪಾಲರ ಅಂಕಿತ ಬಿದ್ದಿಲ್ಲ. ಕಾಂಗ್ರೆಸ್‌ನ ಒಬಿಸಿ ರಾಜಕಾರಣವನ್ನು ಅರ್ಥಮಾಡಿಕೊಂಡ ಬಿಜೆಪಿ ಅರುಣ್ ಸಾವೋ ಅವರನ್ನು ರಾಜ್ಯ ಬಿಜೆಪಿಯ ಅಧ್ಯಕ್ಷರನ್ನಾಗಿ ಮಾಡಿದೆ. ಅರಣ್‌ ಒಬಿಸಿ ಸಮುದಾಯಕ್ಕೆ ಸೇರಿದವರು. ಹೀಗಾಗಿ ರಾಜ್ಯದಲ್ಲಿ ಜಾತಿ ಕೇಂದ್ರಿತ ರಾಜಕಾರಣ ಮುನ್ನೆಲೆಗೆ ಬಂದಿದೆ.

ಬಿಹಾರ ಸರ್ಕಾರ ಜಾತಿಗಣತಿ ನಡೆಸಿದ ಬಳಿಕ ರಾಷ್ಟ್ರ ರಾಜಕಾರಣದಲ್ಲಿ ಜಾತಿ ಗಣತಿಯು ಮಹತ್ವ ಪಡೆದಿದೆ. ಬಿಹಾರ ರಾಜ್ಯದಲ್ಲಿ ಅತಿಹೆಚ್ಚು ಹಿಂದುಳಿದ ಜಾತಿಯವರಿದ್ದಾರೆ ಎಂಬುದನ್ನು ಜಾತಿಗಣತಿ ಎತ್ತಿ ಹಿಡಿದಿದೆ. ಜಾತಿಗಳ ಸ್ಥಿತಿಗತಿಗಳನ್ನು ಅರಿತು, ಹಿಂದುಳಿದಿರುವಿಕೆಯನ್ನು ಹೋಗಲಾಡಿಸಲು ಜಾತಿಗಣತಿ ಅಗತ್ಯ. ಬ್ರಿಟಿಷರು 1871ರಲ್ಲಿ ಆರಂಭಿಸಿದ ಜನಗಣತಿಯ ಜೊತೆ ಜೊತೆಯಲ್ಲೇ ಜಾತಿ ಗಣತಿಯನ್ನೂ ಮಾಡಿದ್ದರಿಂದಲೇ ಒಂದಿಷ್ಟು ಸಾಮಾಜಿಕ ಚಲನೆ ಸಾಧ್ಯವಾಯಿತು ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು. ಆದರೆ 1931ನೇ ಇಸವಿಯೇ ಕೊನೆ, ಜಾತಿಗಣತಿ ನೇಪಥ್ಯಕ್ಕೆ ಸರಿಯಿತು. ಗಣರಾಜ್ಯ ಭಾರತದಲ್ಲಿ ಜನಗಣತಿ ನಡೆಯಿತಾದರೂ ಜಾತಿಗಣತಿ ಗೌಣವಾಯಿತು. 2010ರಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ಜಾತಿ ಗಣತಿ ನಡೆಸಲಾಯಿತು. ಆದರೆ ವರದಿಯನ್ನು ಬಿಡುಗಡೆ ಮಾಡುವ ಇಚ್ಛಾಶಕ್ತಿಯನ್ನು ಕಾಂಗ್ರೆಸ್ ಪ್ರದರ್ಶಿಸಲಿಲ್ಲ ಹಲವು ಉಪ ಜಾತಿಗಳು, ಬೆಡಗುಗಳೆಲ್ಲ ಸೇರಿ ವರದಿ ಗೊಂದಲ ಮಯವಾಗಿದೆ ಎನ್ನಲಾಗುತ್ತದೆ. ವರದಿ ನನೆಗುದಿಗೆ ಬಿದ್ದಿತು. ನಂತರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಜಾತಿಗಣತಿಯನ್ನು ಅಕ್ಷರಶಃ ಮೂಲೆಗೆ ತಳ್ಳಿತು. ವಾಸ್ತವದಲ್ಲಿ ಜಾತಿಗಳ ಸ್ಥಿತಿಗತಿಗಳು ಬಯಲಾಗುವುದು ಬಿಜೆಪಿಗೆ ಬೇಕಾಗಿಯೂ ಇರಲಿಲ್ಲ.

ಜಾತಿ ಗಣತಿಯನ್ನು ಕೇಂದ್ರ ಬಿಜೆಪಿ ಸರ್ಕಾರ ಅಲ್ಲಗಳೆದಿದ್ದರಿಂದ ಬಿಹಾರ ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ನಡೆಸಿ, ಬಿಡುಗಡೆ ಮಾಡಿತ್ತು. ಬಿಹಾರ ಬಿಜೆಪಿ ಘಟಕ ವರದಿಯನ್ನು ಸ್ವಾಗತಿಸಿದೆ. ಮತ್ತೊಂದೆಡೆ ಕೇಂದ್ರದ ಕೆಲವು ಬಿಜೆಪಿ ನಾಯಕರು ಜಾತಿಗಣತಿಯನ್ನು ವಿರೋಧಿಸಿದ್ದರು. ಆದರೆ ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಅವರು, “ಬಿಜೆಪಿ ಜಾತಿ ಗಣತಿಯನ್ನು ವಿರೋಧಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಚಿವ ಕೆ ಎನ್ ರಾಜಣ್ಣ ರಾಜೀನಾಮೆ ನೀಡಿಲ್ಲ, ಬದಲಿಗೆ ಸಂಪುಟದಿಂದ ಉಚ್ಚಾಟನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರಿಗೆ...

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X