- ಗಾಂಧಿಧಾಮ್‌ನಿಂದ 30 ಕಿಮೀ ದೂರದಲ್ಲಿರುವ ಮಿಥಿ ರೋಹರ್ ಗ್ರಾಮದಲ್ಲಿ ಬಿದ್ದಿದ್ದ 80 ಕೆ ಜಿ ಕೊಕೇನ್
- ಕರಾವಳಿ ಮತ್ತು ಹಳ್ಳಿಗಳಲ್ಲಿ ಗಸ್ತು ಮತ್ತು ತಪಾಸಣೆಯನ್ನು ತೀವ್ರಗೊಳಿಸಿದ ಪೊಲೀಸರು
ಗುಜರಾತ್‌ನ ಕಚ್ ಜಿಲ್ಲೆಯ ಗ್ರಾಮವೊಂದರ ಕಡಲ ಕಿನಾರೆಯಲ್ಲಿ ಅನಾಥವಾಗಿ ಬಿದ್ದಿದ್ದ ಸುಮಾರು 800 ಕೋಟಿ ಮೌಲ್ಯದ 80 ಕೆ ಜಿ ಕೊಕೇನ್ ಅನ್ನು ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ವರದಿಯಾಗಿದೆ.
ಸ್ಥಳೀಯ ಪೊಲೀಸರು ಗುರುವಾರ ಬಂದರು ಪಟ್ಟಣ ಗಾಂಧಿಧಾಮ್‌ನಿಂದ 30 ಕಿಮೀ ದೂರದಲ್ಲಿರುವ ಮಿಥಿ ರೋಹರ್ ಗ್ರಾಮದಲ್ಲಿ ನಿರ್ದಿಷ್ಟ ಮಾಹಿತಿಯ ಮೇರೆಗೆ ಗಸ್ತು ತಿರುಗುತ್ತಿದ್ದಾಗ ಕಡಲ ದಡದಲ್ಲಿ ಚದುರಿದ್ದ ಹಲವಾರು ಅನುಮಾನಾಸ್ಪದ ಪ್ಯಾಕೆಟ್ ಮತ್ತು ಕೆಲವು ನೀರಿನಲ್ಲಿ ತೇಲುತ್ತಿರುವುದನ್ನು ಗಮನಿಸಿದ್ದಾರೆ.
ತಲಾ ಒಂದು ಕೆಜಿಯ 80 ಪ್ಯಾಕೆಟ್ ಗಳಿದ್ದು, ಅದರಲ್ಲಿ ಕೊಕೇನ್ ಅಂಶವಿರುವುದನ್ನು ವಿಧಿವಿಜ್ಞಾನ ತಜ್ಞರು ಖಚಿತಪಡಿಸಿದ್ದಾರೆ. ಇದರ ಮಾರುಕಟ್ಟೆ ಮೌಲ್ಯವು ಸುಮಾರು 800 ಕೋಟಿ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ.
Flash:#Gujarat police recovered 80 kg of #cocaine, worth nearly Rs 800 crore, dumped on shore of a creek near #Gandhidham town of Gujarat's Kutch district. The banned drug was found in 80 packets, each weighing a kilo, the police said.
— Yuvraj Singh Mann (@yuvnique) September 28, 2023
It was perhaps left behind by smugglers… pic.twitter.com/cFbyWPBrlG
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕಚ್ (ಪೂರ್ವ) ಪೊಲೀಸ್ ಅಧೀಕ್ಷಕ ಸಾಗರ್ ಬಾಗ್ಮಾರ್, ಅಂತಾರಾಷ್ಟ್ರೀಯ ಮಾದಕ ಸಾಗಾಟ ಮಾಡುವವರ ಇದೊಂದು ಹೊಸ ರೀತಿಯ ಯೋಜನೆ. ಕೆಲ ನಿರ್ಜನ ಪ್ರದೇಶಗಳಲ್ಲಿ ಮಾದಕ ವಸ್ತುಗಳನ್ನು ಬಿಟ್ಟು ಹೋಗುತ್ತಾರೆ. ಆ ಬಳಿಕ ಅದು ಯಾರಿಗೆ ಸೇರಬೇಕೋ ಅವರು ಬಂದು ಅದನ್ನು ತೆಗೆದುಕೊಳ್ಳುತ್ತಾರೆ. ಪೊಲೀಸರು ಕೈಗೆ ಸಿಕ್ಕಿ ಬೀಳುವ ಭಯದಿಂದ ನೇರವಾಗಿ ಹಸ್ತಾಂತರಿಸುವುದಿಲ್ಲ. ಈ ಪ್ರಕರಣ ಅದಕ್ಕೆ ಸಾಕ್ಷಿ” ಎಂದು ತಿಳಿಸಿದ್ದಾರೆ.

“ಡ್ರಗ್ಸ್ ವಿರುದ್ಧದ ನಮ್ಮ ಅಭಿಯಾನದ ಭಾಗವಾಗಿ ನಾವು ಕರಾವಳಿ ಮತ್ತು ಹಳ್ಳಿಗಳಲ್ಲಿ ಗಸ್ತು ಮತ್ತು ತಪಾಸಣೆಯನ್ನು ತೀವ್ರಗೊಳಿಸಿದ್ದೇವೆ. ಈಗ ದೊರೆತಿರುವ ಕೊಕೇನನ್ನು ರವಾನಿಸಿದವರು ಯಾರು ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದೇವೆ” ಎಂದು ಬಾಗ್ಮಾರ್ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ), ಗಡಿ ಭದ್ರತಾ ಪಡೆ (ಬಿಎಸ್ಎಫ್), ಗುಜರಾತ್ ಸೇರಿದಂತೆ ವಿವಿಧ ಕಡೆಗಳಲ್ಲಿ ಹಾಗೂ ಪಾಕಿಸ್ತಾನಕ್ಕೆ ಹತ್ತಿರವಿರುವ ಜಿಲ್ಲೆಯಲ್ಲಿ ಇಂತಹ ಹಲವಾರು ಸರಕುಗಳನ್ನು ವಶಪಡಿಸಿಕೊಂಡಿವೆ.
ಕಳೆದ ವರ್ಷವು ಮುಂದ್ರಾ ಬಂದರಿನಲ್ಲಿ ಕಂಟೈನರ್‌ನಲ್ಲಿ ಬಟ್ಟೆಯ ರೋಲ್‌ಗಳಲ್ಲಿ ಬಚ್ಚಿಟ್ಟಿದ್ದ 376 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿತ್ತು.