ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಕೂಳೂರಿನ ಹಳೆ ಸೇತುವೆಯ ಪಕ್ಕದ ರಸ್ತೆಯಲ್ಲಿರುವ ಹೊಂಡ ಗುಂಡಿಗಳನ್ನು ಮುಚ್ಚಲು ಸಂಚಾರ ಬಂದ್ ಮಾಡಿದ್ದ ಹೆದ್ದಾರಿ ಇಲಾಖೆ ಇದೀಗ ಸೇತುವೆ ಮೇಲಿನ ಹೊಂಡ ಮುಚ್ಚುಲು ಮಂಗಳವಾರ ಮಧ್ಯಾಹ್ನ ಕೆಲವು ಗಂಟೆಗಳ ಕಾಲ ಸೇತುವೆ ಬಂದ್ ಮಾಡಿದ್ದರಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ಹೆದ್ದಾರಿ ಇಲಾಖೆಯು ರಸ್ತೆ ಪಕ್ಕದ ಹೊಂಡಗಳನ್ನು ಮುಚ್ಚುವ ಸಂದರ್ಭದಲ್ಲಿ ಸೇತುವೆಯ ಮೇಲಿನ ಹೊಂಡವನ್ನು ಆ ವೇಳೆಯಲ್ಲಿ ಸರಿಪಡಿಸಬಹು ದಗಿತ್ತು. ಆದರೆ, ಸಮಯದಲ್ಲಿ ಸುಮ್ಮನಿದ್ದ ಇಲಾಖೆ ಈಗ ಮಾತ್ರ ಹೊಂಡಗಳ ಗಾತ್ರ ಹೆಚ್ಚಾಗಿ ವಾಹನಗಳು ಸಂಚರಿಸುವುದು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿರುವುದಿಂದ ವಿಪರೀತ ಮಳೆಯ ಮಧ್ಯೆ ಹೊಂಡ ಗುಂಡಿಗಳನ್ನು ಮುಚ್ಚಲು ಮುಂದಾದ ಅಧಿಕಾರಿಗಳಿಗೆ ವಾಹನ ಸವಾರರು ಹಿಡಿಶಾಪ ಹಾಕುತ್ತಾರೆ.
ಇದನ್ನೂ ಓದಿ: ಧರ್ಮಸ್ಥಳ | ಗ್ರಾಮ ಪಂಚಾಯತ್‌ನಿಂದ ಮಹತ್ವದ ದಾಖಲೆ ಪಡೆದುಕೊಂಡ ಎಸ್‌ಐಟಿ
ಮಂಗಳವಾರ ಮಧ್ಯಾಹ್ನ ಹಳೆ ಸೇತುವೆಯನ್ನು ಕೆಲವು ಗಂಟೆಗಳ ಕಾಲ ಬಂದ್ ಮಾಡಿ ಸೇತುವೆಯ ಮೇಲಿನ ಹೊಂಡಗಳನ್ನು ಮುಚ್ಚಲಾಯಿತು. ಈ ವೇಳೆ ವಾಹನಗಳನ್ನು ಹೊಸ ಸೇತುವೆಯಲ್ಲೇ ಸಂಚರಿಸಲು ಸೂಚಿಸಲಾಯಿತು. ಇದರಿಂದಾಗಿ ಒಂದೇ ಕಡೆ ಸಂಚಾರದಿಂದಾಗಿ ಕೂಳೂರು ಬಳಿಯಲ್ಲಿ ಭಾರಿ ಪ್ರಮಾಣದ ಟ್ರಾಫಿಕ್ ಜಾಮ್ ಉಂಟಾಯಿತು. ಇತ್ತ ಪೊಲೀಸರು ಮಾತ್ರ ಸುಗಮ ಸಂಚಾರಗೊಳಿಸಲು ಹರಸಾಹಸ ಪಟ್ಟರು.
ಇದನ್ನೂ ಓದಿ: ಧರ್ಮಸ್ಥಳ | ಗುಂಪುಗಳ ನಡುವೆ ವಾಗ್ವಾದ: ವಾಹನಗಳ ಮೇಲೆ ಕಲ್ಲು ತೂರಾಟ; ಸ್ಟೇಷನ್ ಮುಂದೆ ಧರಣಿ
ಹೊಸ ಸೇತುವೆ ಬಂದ್ ಮಾಡಿ ಹಳೆ ಸೇತುವೆಯೊಂದರಲ್ಲೇ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು ಭಾರಿ ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು. ಬಸ್, ಟ್ರಕ್‌ಗಳ ನಿಧಾನಗತಿಯ ಸಂಚಾರದಿಂದಾಗಿ ಎಂಸಿಎಸ್‌ನಿಂದ ಆರಂಭವಾಗಿ ಎ.ಜೆ. ಆಸ್ಪತ್ರೆವರೆಗೂ ವಾಹನಗಳ ಸಾಲು ಕಂಡುಬಂತು. ಕೆಲವೊಮ್ಮೆ ಬಸ್ ಚಾಲಕರು, ಕಾರು ಚಾಲಕರು ಮಧ್ಯೆ ಜಗಳ ನಡೆಯಿತು.
