ಚಂದ್ರಯಾನ- 3 | ಉಡಾವಣೆಯ ದೃಶ್ಯ ಸೆರೆ ಹಿಡಿದ ವಿಮಾನ ಪ್ರಯಾಣಿಕ; ವಿಡಿಯೋ ವೈರಲ್

Date:

Advertisements

ಜು. 14ರಂದು ಭಾರತದ ಬಹುಕನಸಿನ ಚಂದ್ರಯಾನ-3 ಉಡಾವಣಾ ಕ್ಷಣವನ್ನು ಇಡೀ ದೇಶವೇ ಕಣ್ತುಂಬಿಸಿಕೊಂಡಿತ್ತು. ಇಸ್ರೋ ಸಾಧನೆಯನ್ನು ಕಂಡು ಎಲ್ಲರೂ ಹೆಮ್ಮೆಯಿಂದ ಖುಷಿಪಟ್ಟಿದ್ದರು.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಾಹ್ಯಾಕಾಶ ನೌಕೆಯು ಟೇಕಾಫ್ ಆದ ಕ್ಷಣವನ್ನು ಹೆಚ್ಚಿನವರು ನೇರಪ್ರಸಾರದ ಮೂಲಕ ವೀಕ್ಷಿಸಿ ಖುಷಿಗೊಂಡಿದ್ದರು.

ಈ ಮಧ್ಯೆ ಚಂದ್ರಯಾನ-3ರ ಈ ಉಪಗ್ರಹ ಹೊತ್ತ ಬಾಹ್ಯಾಕಾಶ ನೌಕೆ ಚಂದ್ರನತ್ತ ಸಾಗುತ್ತಿರುವ ಅದ್ಭುತ ದೃಶ್ಯವೊಂದನ್ನು ವಿಮಾನ ಪ್ರಯಾಣಿಕರೋರ್ವರು ಕಿಟಕಿ ಬದಿಯ ಸೀಟಿನಲ್ಲಿ ಕುಳಿತು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಆ ದೃಶ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.

Advertisements

ಬಾಂಗ್ಲಾದೇಶದ ಢಾಕಾಗೆ ಇಂಡಿಗೋ ವಿಮಾನವು ತಮಿಳುನಾಡಿನ ಚೆನ್ನೈನಿಂದ ಹೊರಟಿತ್ತು. ಈ ವೇಳೆ ಚಂದ್ರಯಾನ-3 ಗಗನಕ್ಕೇರುತ್ತಿತ್ತು. ಈ ದೃಶ್ಯವನ್ನು ಕಿಟಕಿಯಿಂದ ವೀಕ್ಷಿಸುವಂತೆ ವಿಮಾನದ ಪೈಲಟ್ ಘೋಷಿಸಿದರು.

ಈ ವೇಳೆ ಕಿಟಕಿ ಬದಿಯ ಸಿಟ್‍ನಲ್ಲಿ ಕುಳಿತಿದ್ದ ಪ್ರಯಾಣಿಕ ಪೊನ್ನುರಾಜ್ ಎಂಬುವವರು ತಮ್ಮ ಮೊಬೈಲ್‍ನಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದು, ಅದನ್ನು ತಮ್ಮ ಟ್ವಿಟರ್‍‌ನಲ್ಲಿ ಪೋಸ್ಟ್‌ ಮಾಡಿದ್ದರು.

“ಚೆನ್ನೈನಿಂದ ಢಾಕಾಕ್ಕೆ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಈ ಐತಿಹಾಸಿಕ ಘಟನೆಯನ್ನು ವೀಕ್ಷಿಸಲು ಘೋಷಿಸಿದರು. ಚಂದ್ರಯಾನ 3ರ ಐತಿಹಾಸಿಕ ಉಡಾವಣೆಯನ್ನು ವಿಮಾನದಿಂದ ವೀಕ್ಷಿಸಲು ನಾನು ಅದೃಷ್ಟ ಪಡೆದಿದ್ದೆ” ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ಮೋದಿ ವಿರುದ್ಧ ಒಂದಾಗಲು ಪ್ರತಿಪಕ್ಷಗಳಿಂದ ಸಭೆ; ಖಾಸಗಿ ಹೋಟೆಲ್​ನಲ್ಲಿ ಭರದ ಸಿದ್ಧತೆ

ಬಳಿಕ ಈ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಇಸ್ರೋ ಮೆಟೀರಿಯಲ್ಸ್‌ನ ನಿವೃತ್ತ ನಿರ್ದೇಶಕ ಮತ್ತು ರಾಕೆಟ್ ತಯಾರಿಕಾ ತಜ್ಞ ಡಾ ಪಿ.ವಿ ವೆಂಕಟಕೃಷ್ಣನ್ ಹಾಗೂ ಇಂಡಿಗೋ ಸಂಸ್ಥೆ ಕೂಡ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X