ಶ್ರೀ ಲಕ್ಷ್ಮೀರಂಗನಾಥಸ್ವಾಮಿ ದೇವಾಲಯದ ಅರ್ಚಕರೊಬ್ಬರು ದೇವಾಲಯದಲ್ಲೇ, ನೇಣಿಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಗಂಗೂರು ಗ್ರಾಮದ ನಡೆದಿದೆ.
ಮೃತ ವ್ಯಕ್ತಿ ರಂಗಸ್ವಾಮಿ (65) ಅರ್ಚಕ. ಮುಜರಾಯಿ ಇಲಾಖೆಗೆ ಸೇರಿದ ಈ ದೇವಾಲಯದಲ್ಲಿ ರಂಗಸ್ವಾಮಿ ದೀರ್ಘಕಾಲದಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ದೇವಾಲಯದ ಅರ್ಚಕ ರಂಗಸ್ವಾಮಿ ಅವರು ಸರಿಯಾಗಿ ಪೂಜೆ ನಡೆಸುತ್ತಿಲ್ಲ ಎಂದು ಆರೋಪಿಸಿ ಕೆಲವು ಗ್ರಾಮಸ್ಥರು. ಬೇರೆ ಅರ್ಚಕರನ್ನು ನೇಮಿಸುವಂತೆ ತಹಸೀಲ್ದಾರ್‌ಗೆ ದೂರು ನೀಡಿದ್ದರು.
ಇದನ್ನೂ ಓದಿದ್ದೀರಾ?ಹಾಸನ l ಮುಧೋಳ ನಾಯಿ ಹೊತ್ತೊಯ್ದ ಚಿರತೆ: ಗ್ರಾಮಸ್ಥರಲ್ಲಿ ಆತಂಕ
ಈ ಕುರಿತು ರಂಗಸ್ವಾಮಿ ಮತ್ತು ಗ್ರಾಮಸ್ಥರ ನಡುವೆ ಸ್ವಲ್ಪ ಮನಸ್ತಾಪಗಳು ನಡೆದಿತ್ತು. ಮನನೊಂದ ರಂಗಸ್ವಾಮಿ ದೇವಾಲಯದೊಳಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಕುರಿತು ಹಳೇಬೀಡು ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
