ಬುದ್ದರವರ ಪಂಚಶೀಲ ಮತ್ತು ಅಷ್ಠಾಂಗ ಮಾರ್ಗಗಳನ್ನು ಬೋಧಿಸಿದರು ಮತ್ತು ಬುದ್ದರವರ ತತ್ವಗಳು ಸಮಾಜ ಪ್ರತಿಯೊಬ್ಬ ಪ್ರಜೆಗೂ ಅತ್ಯಗತ್ಯ ಎಂದು ಕ್ರೈಸ್ಟ್ ಕಾಲೇಜಿನ ಪ್ರಾಧ್ಯಾಪಕ ಡಾ. ಹಾ ರಾ ಮಹೇಶ್ ತಿಳಿಸಿದರು
ತುಮಕೂರು ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ ಘಟಕದ ವತಿಯಿಂದ ಬುದ್ಧ ಬಸವಣ್ಣ ನವರ ಜಯಂತಿಯ ಅಂಗವಾಗಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುದ್ದ ಮತ್ತು ಬಸವಣ್ಣರವರ ಜೀವನ ಚರಿತ್ರೆಯನ್ನು ವಿದ್ಯಾಥಿಗಳಿಗೆ ಮನಮುಟ್ಟುವಂತೆ ತಿಳಿಸುತ್ತಾ, ಬಸವಣ್ಣರವರ ತತ್ವಗಳು 12ನೇ ಶತಮಾನಗಳಲ್ಲೇ ಸಮಾನತೆ, ಸ್ವಾತಂತ್ರ, ವ್ಯಕ್ತಿ ಗೌರವ, ಮಹಿಳಾ ಸಮಾನತೆ, ಸಹೋದರತ್ವದ ಮಕ್ಕಳಿಗೆ ಸಂಕ್ಷೀಪ್ತವಾಗಿ ಹೇಳಿದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರಂಗಸ್ವಾಮಿ ಎಂ ಆರ್ ಮಾತನಾಡಿ ಬುದ್ದನ ವಿಚಾರಗಳು ಪ್ರಸ್ತುತ ಯುವಕರಿಗೆ ಅತ್ಯವಶ್ಯಕವಾಗಿದೆ. ಬುದ್ದ, ಬಸವ, ಅಂಬೇಡ್ಕರ್, ಲೋಯಿಯಾ, ಕಾರ್ಲ್ಮಾರ್ಕ್ಸ್ ರವರ ತತ್ವಗಳನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಲತ ಪಿ ರವರು ಬುದ್ದ ಮತ್ತು ಬಸವಣ್ಣರವರ ಮೌಲ್ಯಗಳು ಶೈಕ್ಷಣಿಕವಾಗಿ ಅವರ ಜಿಂತನೆಗಳು ಇರದೇ ಜೀವನದ ಮೌಲ್ಯಗಳಾಗಿ ರೂಢಿಸಿಕೊಳ್ಳಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷೀಯ ಮಾತುಗಳನ್ನು ನುಡಿದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ಬುದ್ದ ನಿಮಗೆಷ್ಟು ಗೊತ್ತು? ಮತ್ತು ಬಸವಣ್ಣ ನಿಮಗೆಷ್ಟು ಗೊತ್ತು? ಎಂಬ ವಿಷಯದ ಮೇಲೆ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆಯನ್ನು ಏರ್ಪಡಿಸಲಾಯಿತು.
ಈ ಸ್ಪರ್ಧೆಯಲ್ಲಿ ತನುಜ ಮತ್ತು ಯಶವಂತ್ ರವರು ಕ್ರಮವಾಗಿ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡರು ಮತ್ತು ವಿಜೇತರನ್ನು ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ವಿನೋದ ಘೋಷಿಸಿದರು.
ಕಾರ್ಯಕ್ರಮವನ್ನು ಕಾಲೇಜಿನ ಬಿಕಾಂ ವಿಭಾಗದ ಮುಖ್ಯಸ್ಥರಾದ ಪ್ರೊ. ವಿನಯ್‌ಕುಮಾರ್ ಎಂ ಸ್ವಾಗತಿಸುತ್ತಾ ಬುದ್ದನ ವಿಚಾರಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡ ಬಗೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಎಂ ಕಾಂ ವಿಭಾಗದ ಸಂಯೋಜಕರು ಮತ್ತು ಐಕ್ಯೂಎಸಿಯ ಸಂಚಾಲಕರಾದ ಪ್ರೊ. ಸೈಯದ್ ಬಾಬು ಹೆಚ್ ಬಿ ರವರು ಎಲ್ಲಾ ಅತಿಥಿಗಳನ್ನು ವಂದಿಸುತ್ತಾ ಬಸವಣ್ಣರವರ ಕಾಲದಲ್ಲೇ ಪ್ರಜಾಪ್ರಭುತ್ವದ ಇತ್ತು ಅಂದರೆ ಅನುಭವ ಮಂಟಪದ ಮೂಲಕ ಸಮಾನತೆಯನ್ನು ಸಾರಿದರು ಎಂದು ಹೇಳಿದರು
ಕಾರ್ಯಕ್ರಮದ ನಿರೂಪಣೆಯನ್ನು ನೇಹ ಅಪ್ರೀನ್ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.