ಉಡುಪಿ ಜಿಲ್ಲೆಯ ಕುಂದಾಪುರ ಮಾವಿನಕಟ್ಟೆಯ ಮೆಡಿಕಲ್ ಶಾಪ್ ನಲ್ಲಿ ದಲಿತ ಯುವತಿಗೆ ಹಲ್ಲೆ ನಡೆಸಿ ಜಾತಿನಿಂದನೆ ಮಾಡಿದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ ಎಂದು ಉಡುಪಿ ಎಸ್‌ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಘಟನಾ ಸ್ಥಳಕ್ಕೆ ನಿನ್ನೆಯೇ ಹೋಗಿ ನೊಂದ ಯುವತಿಯನ್ನು ಭೇಟಿ ಮಾಡಿದ್ದೇನೆ. ಮೆಡಿಕಲ್ ಶಾಪ್‌ನ ಯುವತಿಗೆ ಯಾಸ್ಮಿನ್ ಎಂಬಾಕೆ ಜಾತಿನಿಂದನೆ ಮಾಡಿ,ಹಲ್ಲೆ ಮಾಡಿದ್ದಾಳೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. ಮುಂದೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹರಿರಾಂ ಶಂಕರ್ ಹೇಳಿದ್ದಾರೆ